ಜು.22ರಂದು ಯುನಿವೆಫ್‌ನಿಂದ ಹಜ್ ತರಬೇತಿ ಶಿಬಿರ

ಮಂಗಳೂರು, ಜು.18: ಯುನಿವೆ್ ಕರ್ನಾಟಕ ಇದರ ದ.ಕ. ಘಟಕದ ವತಿಯಿಂದ ಹಜ್ ತರಬೇತಿ ಶಿಬಿರವನ್ನು ಜು.22ರಂದು ಕಂಕನಾಡಿಯ ಬಾಲಿಕಾಶ್ರಮ ರಸ್ತೆಯಲ್ಲಿರುವ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ಆಯೋಜಿಸಲಾಗಿದೆ.
ಅಪರಾಹ್ನ 3 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ವಕ್ಫ್ ಬೋರ್ಡ್ ದ.ಕ. ಸಲಹಾ ಸಮಿತಿ ಅಧ್ಯಕ್ಷ ಹಾಜಿ ಎಸ್. ಎಮ್. ರಶೀದ್ ಹಾಜಿ ಉದ್ಘಾಟಿಸಲಿದ್ದಾರೆ. ಯುನಿವೆ್ ಕರ್ನಾಟಕದ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹಜ್ ಮತ್ತು ಉಮ್ರಾದ ವಿಧಿವಿಧಾನಗಳನ್ನು ಬ್ಯಾರಿ, ಉರ್ದು ಮತ್ತು ಕನ್ನಡ ಭಾಷೆಗಳಲ್ಲಿ ಪ್ರಾಯೋಗಿಕವಾಗಿ ವಿವರಿಸಲಿದ್ದಾರೆ. ತರಬೇತಿಯ ನಂತರ ಪ್ರಶ್ನೋತ್ತರ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದ್ದು ಹಾಜಿಗಳು ಹಜ್ ಕರ್ಮದಲ್ಲಿ ಪ್ರಸಕ್ತ ಇರುವ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಸಂಚಾಲಕ ಸೈುದ್ದೀನ್ ಮೊ.ಸಂ.: 9945913824/9845199931ನ್ನು ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





