ಭಟ್ಕಳ: ಅಂಗಡಿ ಮಳಿಗೆಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

ಭಟ್ಕಳ, ಜು.18: ನಗರದ ನವಾಯತ್ ಕಾಲೋನಿಯ ತಂಝೀಮ್ ಜಾಮಿಯಾ ಮಸೀದಿ ಬಳಿ ಇರುವ ಅನ್ಫಾಲ್‌ಗ್ರೂಪ್ ಆಫ್ ಕಂಪನಿಗೆ ಸೇರಿದ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಾಗಿಕೊಂಡಿದ್ದು ಲಕ್ಷಾಂತರ ರೂ. ವೌಲ್ಯದ ವಸ್ತುಗಳು ಸುಟ್ಟು ನಾಶಗೊಂಡಿರುವ ಘಟನೆ ಸೋಮವಾರ ಬೆಳಗಿನ ಜಾವ ಜರಗಿದೆ.
ಅಗ್ನಿ ಶಾಮಕ ದಳದ ಸಮಯ ಪ್ರಜ್ಞೆಯಿಂದಾಗಿ ಅಕ್ಕಪಕ್ಕದ ಅಂಗಡಿ, ಕಚೇರಿಗಳು ಬೆಂಕಿಗಾಹುತಿಯಾಗುವುದು ತಪ್ಪಿದೆ. ಭಟ್ಕಳ ನಗರಠಾಣೆಯ ಪಿಸೈ ಕುಡಗುಂಟೆ ತಮ್ಮ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಹೊಗೆ ಬರುತ್ತಿರುವುದನ್ನು ಗಮನಿಸಿ, ಕೂಡಲೆ ಸಂಬಂಧಿಸಿದ ಕಚೇರಿಯ ಮಾಲಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಬಳಿಕ ಅಗ್ನಿ ಶಾಮಕ ದಳವನ್ನು ಕರೆಸಿಕೊಂಡು ಉಂಟಾಗಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ದುರ್ಘಟನೆಯಲ್ಲಿ ಕಚೇರಿಯಲ್ಲಿನ ಲಕ್ಷಾಂತರ ರೂ. ಲ್ಯದ ಸೊತ್ತುಗಳು ನಾಶಗೊಂಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೂರು ಕಂಪ್ಯೂಟರ್‌ಗಳು, ಒಂದು ಎಸಿ, ಸಿಸಿಟಿವಿ ಕ್ಯಾಮರ, ಪೀಠೋಪಕರಣಗಳು ಸೇರಿದಂತೆ ಸುಮಾರು ಐದು ಲಕ್ಷಕ್ಕೂ ಅಧಿಕ ವೌಲ್ಯದ ವಸ್ತುಗಳು ನಾಶಗೊಂಡಿವೆ ಎಂದು ಅಂದಾಜಿಸಲಾಗಿದೆ.





