ಗೂಡ್‌ಶೆಡ್ ಸೋಮನಾಥ ದೇವಾಲಯದಲ್ಲಿ ಕಳ್ಳತನ
ಮಂಗಳೂರು, ಜು.18: ನಗರದ ಗೂಡ್‌ಶೆಡ್ ಬಳಿಯಿರುವ ಸೋಮನಾಥ ದೇವಸ್ಥಾನದಲ್ಲಿ ರವಿವಾರ ರಾತ್ರಿ ಕಳ್ಳತನ ನಡೆದಿದೆ.
ಬಾಗಿಲನ್ನು ಮುರಿದು ದೇವಸ್ಥಾನದ ಒಳಗೆ ಪ್ರವೇಶಿಸಿದ ಕಳ್ಳರು ತೀರ್ಥ ಮಂಟಪದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಹಾಗೂ ದೇವಸ್ಥಾನದ ಗರ್ಭ ಗುಡಿಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ, ಸೋಮನಾಥನ ಶಿವಲಿಂಗಕ್ಕೆ ಅಳವಡಿಸಿದ್ದ ಸುಮಾರು 65 ಗ್ರಾಂ ತೂಕದ ಚಿನ್ನದ ದೃಷ್ಠಿ (ಹಣೆ ಮೂಗು ಬಾಯಿ ಸಮೇತ ) ಹಾಗೂ ಶಿವಲಿಂಗಕ್ಕೆ ಹತ್ತಿರವಿದ್ದ ಬಲಿಮೂರ್ತಿಗೆ ಹಾಕಿದ್ದ ಸುಮಾರು 8 ಗ್ರಾಂ ತೂಕದ ಪೆಂಡೆಂಟ್ ಸಹಿತ ಚಿನ್ನದ ಸರ ಕಳವುಗೈದಿದ್ದಾರೆ.
ಕಳವಾದ ಚಿನ್ನಾಭರಣದ ಒಟ್ಟು ಮೌಲ್ಯ 1.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





