Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆರೆಸ್ಸೆಸ್ ಸ್ವಯಂ ಸೇವಕರು ಸರಕಾರಿ...

ಆರೆಸ್ಸೆಸ್ ಸ್ವಯಂ ಸೇವಕರು ಸರಕಾರಿ ಸೇವೆಗಳಿಗೆ ಸೇರಲು ಅನುಮತಿ ನೀಡಬೇಕೆ?

ರಾಮ್ ಪುನಿಯಾನಿರಾಮ್ ಪುನಿಯಾನಿ18 July 2016 11:04 PM IST
share
ಆರೆಸ್ಸೆಸ್ ಸ್ವಯಂ ಸೇವಕರು ಸರಕಾರಿ ಸೇವೆಗಳಿಗೆ ಸೇರಲು ಅನುಮತಿ ನೀಡಬೇಕೆ?

ಒಂದು ಹಳೆಯ ವಿವಾದ ಸದ್ಯ ಮರುಕಳಿಸಿದೆ. ಆರೆಸ್ಸೆಸ್ ಜೊತೆ ಸಂಬಂಧ ಹೊಂದಿರುವ ಅಭ್ಯರ್ಥಿಗಳಿಗೆ ಸರಕಾರಿ ಉದ್ಯೋಗ ನಿರಾಕರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ವಾರ ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಪ್ರಧಾನ್, ‘‘ಕೇಂದ್ರ ಸರಕಾರ ಇತ್ತೀಚೆಗೆ ಅಂಥಾ ಯಾವುದೇ ಆದೇಶವನ್ನು ಹೊರಡಿಸಿಲ್ಲ (ಆರೆಸ್ಸೆಸ್ ಜೊತೆ ಸಂಪರ್ಕ ಹೊಂದಿರುವವರಿಗೆ ಸರಕಾರಿ ಉದ್ಯೋಗ ನಿರಾಕರಣೆ) ಮತ್ತು ಈ ರೀತಿಯ ಯಾವುದಾದರೂ ಹಳೆಯ ಆದೇಶ ಇದ್ದಲ್ಲಿ ಅದನ್ನು ಪರಿಶೀಲಿಸಲಾಗುವುದು’’ ಎಂದು ಹೇಳಿದ್ದರು. (ಜೂನ್ 16, 2016) ‘‘ಆರೆಸ್ಸೆಸ್ ಸದಸ್ಯರು ಸರಕಾರಿ ಸೇವೆಯನ್ನು ಸೇರುವುದನ್ನು ನಿಷೇಧಿಸುವುದು ಅನ್ಯಾಯ ಮತ್ತು ಅಪ್ರಜಾಪ್ರಭುತ್ವ. ಇಂಥಾ ನಿಷೇಧಗಳಿಂದ ಆರೆಸ್ಸೆಸ್‌ನ ಕಾರ್ಯಕರ್ತರ ಕಾರ್ಯ ಮತ್ತು ಸ್ಥೈರ್ಯಕ್ಕೆ ತೀವ್ರ ಪೆಟ್ಟು ನೀಡುತ್ತದೆ’’ ಎಂದು ಆರೆಸ್ಸೆಸ್ ಪ್ರಚಾರ ಪ್ರಮುಖ್ ಮನ್‌ಮೋಹನ್ ವೈದ್ಯ ಆಗಲೇ ಹೇಳಿಕೆ ನೀಡಿದ್ದಾರೆ. ನಾಗರಿಕ ಸೇವಕರನ್ನು ರಾಜಕೀಯ ಸಂಸ್ಥೆಗಳ ಜೊತೆ ಗುರುತಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಆರೆಸ್ಸೆಸ್ ತನ್ನನ್ನು ಸಾಂಸ್ಕೃತಿಕ ಸಂಸ್ಥೆ ಎಂದು ಕರೆಸಿಕೊಳ್ಳುವ ಕಾರಣ ಮತ್ತು ಹಲವು ಸಂದರ್ಭಗಳಲ್ಲಿ ಇದನ್ನೇ ಷಡ್ಯಂತ್ರವಾಗಿ ಬಳಸಿ ರಾಜ್ಯ ಸರಕಾರಗಳು ಸರಕಾರಿ ಉದ್ಯೋಗಿಗಳು ಆರೆಸ್ಸೆಸ್ ಸೇರಲು ಅನುಮತಿ ನೀಡಿವೆ. ಗುಜರಾತ್‌ನಲ್ಲಿ 2000ದಲ್ಲಿ ಈ ಅನುಮತಿಯನ್ನು ನೀಡಿದಾಗ ಪ್ರತಿಭಟನೆಯನ್ನು ಎದುರಿಸಿದ ಅಧ್ಯಕ್ಷರು ಹಸ್ತಕ್ಷೇಪ ನಡೆಸಿದ ಕಾರಣ ವಾಜಪೇಯಿಯವರು ರಾಜ್ಯ ಬಿಜೆಪಿಯ ಮೇಲೆ ಒತ್ತಡ ಹೇರಿ ಈ ಆದೇಶವನ್ನು ರದ್ದುಗೊಳಿಸುವಂತೆ ಮಾಡಿದ್ದರು.

ನಂತರ 2006ರಲ್ಲಿ ಮಧ್ಯಪ್ರದೇಶದಲ್ಲಿ ಚೌಹಾಣ್ ಸರಕಾರ ಈ ನಿಷೇಧವನ್ನು ತೆಗೆದು ಹಾಕಿ ಸರಕಾರಿ ಉದ್ಯೋಗಿಗಳು ಬಹಿರಂಗವಾಗಿ ಆರೆಸ್ಸೆಸ್ ಸೇರಿ ಕೆಲಸ ಮಾಡುವಂತೆ ಮಾಡಿದರು. ಭಾರತೀಯ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲ ಆಶಯವೆಂದರೆ ನಾಗರಿಕ ಸೇವೆ ತಟಸ್ಥವಾಗಿರಬೇಕು. ಈಗಾಗಲೇ ಆರೆಸ್ಸೆಸ್ ತರಬೇತಿ ಪಡೆದ ಸ್ವಯಂ ಸೇವಕರನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿವಿಧ ಶಾಖೆಗಳಲ್ಲಿ ಉದ್ಯೋಗ ಗಳಿಸುವಂತೆ ಮಾಡುವ ಮೂಲಕ ದೇಶದ ಆಡಳಿತದಲ್ಲಿ ವಿವಿಧ ರೀತಿಯಲ್ಲಿ ನುಸುಳಿದೆ. ಈ ಅಂಶಗಳ ಜೊತೆಗೆ ಸಾಮಾಜಿಕ ಸಾಮಾನ್ಯ ಪ್ರಜ್ಞೆಯು ಎಷ್ಟೊಂದು ತಿರುಚಲ್ಪಟ್ಟಿದೆಯೆಂದರೆ ಹಿಂಸಾಚಾರಗಳು ನಡೆದಾಗ ಪೊಲೀಸ್ ಮತ್ತು ಇತರ ಸರಕಾರಿ ಅಧಿಕಾರಿಗಳ ದೊಡ್ಡ ದಂಡು ಅಲ್ಪಸಂಖ್ಯಾತರ ವಿರುದ್ಧ ಹಿಂಸೆ ನಡೆಸಲು ಪ್ರಚೋದನೆ ನೀಡುವ ಮೂಲಕ ಸಂವಿಧಾನದ ನೀತಿಯನ್ನು ಮತ್ತು ನಾಗರಿಕ ಶಾಂತಿಯನ್ನು ಬದಿಗೊತ್ತಲಾಗುತ್ತದೆ. ಹಾಗಾಗಿ ಬಹಳಷ್ಟು ಕೋಮು ಹಿಂಸಾಚಾರಗಳ ಸಂದರ್ಭದ ವರದಿಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದಲ್ಲಿ ಆರೆಸ್ಸೆಸ್ ಪಾತ್ರ ಮತ್ತು ಪೊಲೀಸ್ ಹಾಗೂ ಇತರ ಅಧಿಕಾರಿಗಳ ಸಂಕೀರ್ಣತೆ ಬಗ್ಗೆ ಬೊಟ್ಟು ಮಾಡಲಾಗುತ್ತದೆ. ಸರಕಾರಿ ಉದ್ಯೋಗಗಳಿಗೆ ಆರೆಸ್ಸೆಸ್ ಸದಸ್ಯರಿಗೆ ಅನುಮತಿಯನ್ನು ನೀಡುವ ಮೂಲಕ ದೇಶದ ಬೆನ್ನೆಲುಬಾಗಿರುವ ನಾಗರಿಕ ಸೇವೆಯನ್ನು ಕೋಮುವಾದೀಕರಣ ಮಾಡಿದಂತಾಗುತ್ತದೆ. ಹಾಗಾದರೆ ಆರೆಸ್ಸೆಸ್ ಒಂದು ರಾಜಕೀಯ ಸಂಸ್ಥೆಯಲ್ಲ ಅದು ಒಂದು ಸಾಂಸ್ಕೃತಿಕ ಸಂಸ್ಥೆಯಾಗಿದ್ದು ಹಿಂದೂ ರಾಷ್ಟ್ರ ವನ್ನು ನಿರ್ಮಿಸಲು ಬದ್ಧವಾಗಿದೆ ಎಂಬ ವಾದದ ಬಗ್ಗೆ ಹೇಳುವುದಾದರೆ. ಈ ವಾದವೇ ಎಲ್ಲವನ್ನೂ ಬಿಚ್ಚಿಡುತ್ತದೆ. ರಾಷ್ಟ್ರವನ್ನು ಕಟ್ಟುವುದು ರಾಜಕೀಯ ಕಾರ್ಯವಾಗಿದ್ದು ಕೇವಲ ಒಂದು ಸಾಂಸ್ಕೃತಿಕ ಸಂಸ್ಥೆಯಿಂದ ಇದು ಹೇಗೆ ಸಾಧ್ಯ? ರಾಜಕೀಯ ಕ್ಷೇತ್ರದಲ್ಲಿ ಆರೆಸ್ಸೆಸ್ ನಿರ್ವಹಿಸುತ್ತಿರುವ ಪಾತ್ರ, ಅದು ತನ್ನ ರಾಜಕೀಯ ಸಂತತಿ ಬಿಜೆಪಿಗೆ ನೀಡುತ್ತಿರುವ ಸೂಚನೆಗಳನ್ನು ಗಮನಿಸಿದಾಗ ಅದು ಒಂದು ಸಾಂಸ್ಕೃತಿಕ ಸಂಸ್ಥೆ ಎಂಬ ಅನುಮಾನ ಗಾಳಿಯಲ್ಲಿ ಮಾಯವಾಗುತ್ತದೆ.

ಆರೆಸ್ಸೆಸ್ ಒಂದು ರಾಜಕೀಯ ಸಂಸ್ಥೆಯಾಗಿದ್ದು ತನ್ನ ವಿವಿಧ ರಾಜಕೀಯ ಸಂತತಿಗಳ ಮೂಲಕ ಕಾರ್ಯಾಚರಿಸುತ್ತದೆ, ಇವುಗಳಲ್ಲಿ ಕೆಲವೊಂದು ತಮ್ಮ ರಾಜಕೀಯ ಗುರಿಯನ್ನು ತಲುಪುವ ಸಲುವಾಗಿ ತಾವು ರಾಜಕೀಯ ಸಂಸ್ಥೆ ಅಲ್ಲ ಎಂದು ವಾದಿಸುತ್ತವೆ.

ಆರಂಭದಲ್ಲಿ ಆರೆಸ್ಸೆಸ್ ಸ್ವಯಂ ಸೇವಕರ ಹೆಸರಲ್ಲಿ ರಾಜಕೀಯ ಸ್ವಯಂ ಸೇವಕರನ್ನು ತರಬೇತುಗೊಳಿಸಿತು. ಮತ್ತು 1952ರಲ್ಲಿ ಅದು ನೇರವಾಗಿ ರಾಜಕೀಯ ಸಂಸ್ಥೆಯನ್ನು ಸ್ಥಾಪಿಸಲು ಆರಂಭಿಸಿತು, ಮೊದಲಿಗೆ ಭಾರತೀಯ ಜನಸಂಘ ಮತ್ತು ನಂತರ ಬಿಜೆಪಿ (ಮೊದಲಿಗೆ 1936ರಲ್ಲಿ ರಾಷ್ಟ್ರ ಸೇವಿಕ ಸಮಿತಿ ಮತ್ತು 1948ರಲ್ಲಿ ಎಬಿವಿಪಿಯನ್ನು ಸ್ಥಾಪಿಸಿತ್ತು). ಜನಸಂಘದ ನಿಯಂತ್ರಕನಂತೆ ವರ್ತಿಸಿದ ಅದು ತನ್ನ ನೀತಿಯನ್ನು ವಿರೋಧಿಸು ವವರನ್ನು ಪದವಿಯಿಂದ ಉಚ್ಛಾಟಿಸುತ್ತಿತ್ತು. ಜನಸಂಘದ ಅಧ್ಯಕ್ಷ ಬಲರಾಜ್ ಮಧೋಕ್ ಆರೆಸ್ಸೆಸ್ ನೀತಿಯನ್ನು ವಿರೋಧಿಸಿದ ಕಾರಣಕ್ಕಾಗಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲ್ಪಟ್ಟಿದ್ದರು. ಇಂತಹ ಸಾಕಷ್ಟು ಉದಾಹರಣೆಗಳಿವೆ. 1998ರಲ್ಲಿ ಆರೆಸ್ಸೆಸ್ ಸಂಪುಟ ರಚನೆಯ, ಸಚಿವ ಸ್ಥಾನ ಹಂಚುವಿಕೆಯ ಉದಾಹರಣೆಗೆ ಜಸ್ವಂತ್ ಸಿಂಗ್ ಬದಲಿಗೆ ಯಶ್ವಂತ್ ಸಿನ್ಹಾ ಅವರನ್ನು ವಿತ್ತ ಸಚಿವರನ್ನಾಗಿ ನೇಮಿಸುವ ಮುಂತಾದ ಕಾರ್ಯಗಳಲ್ಲಿ ಹಸ್ತಕ್ಷೇಪ ನಡೆಸುವುದು ಕಂಡುಬಂದಿತ್ತು. ಅಂದು ಲಾಲ್ ಕೃಷ್ಣ ಅಡ್ವಾಣಿ, ಜಿನ್ನಾ ಅವರನ್ನು ಜಾತ್ಯತೀತವಾದಿ ಎಂದು ಹೇಳಿದ ಕಾರಣಕ್ಕೆ ಆರೆಸ್ಸೆಸ್ ಅಡ್ವಾಣಿ ವಿರುದ್ಧವೇ ಟೀಕೆ ಮಾಡಿತ್ತು.

ಆರೆಸ್ಸೆಸ್‌ನ ಕಾರ್ಯಕರ್ತರಾದ ದಿಯೋರ ಮತ್ತು ರಾಜೇಂದ್ರ ಸಿಂಗ್ ಸಲ್ಲಿಸಿದ್ದ ಅಫಿದವಿತ್ ಸಂಖ್ಯೆ 17-1978ರಲ್ಲಿ, ‘‘ಆರೆಸ್ಸೆಸ್ ಕಾರ್ಯಗಳು ಧಾರ್ಮಿಕವೂ ಅಲ್ಲ, ಧರ್ಮಾರ್ಥವೂ ಅಲ್ಲ. ಆದರೆ ಅದರ ಉದ್ದೇಶ ಮಾತ್ರ ಸಾಂಸ್ಕೃತಿಕ ಮತ್ತು ದೇಶಭಕ್ತಿಯಿಂದ ಕೂಡಿದೆ.’’ ಆರೆಸ್ಸೆಸ್ ಸದ್ಯ ರಾಜಕೀಯ ಪಕ್ಷವಲ್ಲದಿದ್ದರೂ ಅದು ರಾಜಕೀಯ ಉದ್ದೇಶಕ್ಕೆ ಸಮಾನವಾಗಿದೆ. ಆರೆಸ್ಸೆಸ್‌ನ ಸಂವಿಧಾನ ಅದನ್ನು ರಾಜಕೀಯದಲ್ಲಿ ಭಾಗವಹಿಸುವುದನ್ನು ನಿಷೇಧಿಸುತ್ತದೆ. ಆದರೆ ನಾಳೆ ಈ ನೀತಿ ಬದಲಾಗಬಹುದು ಮತ್ತು ಆರೆಸ್ಸೆಸ್ ದೈನಂದಿನ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಬಹುದು, ಯಾಕೆಂದರೆ ನೀತಿ ಎನ್ನುವುದು ಖಾಯಂ ಮತ್ತು ಪರಿವರ್ತಿಸಲಾಗದ್ದೇನಲ್ಲ. ನಾವು ಒಂದು ಸಂಸ್ಥೆಯ ಸ್ವಭಾವವನ್ನು ಹೇಗೆ ಪತ್ತೆ ಮಾಡು ತ್ತೇವೆ, ಅವುಗಳ ಸ್ವಯಂ ಹೇಳಿಕೆಗಳಿಂದವೇ ಅಥವಾ ಅವುಗಳ ಚಟುವಟಿಕೆಗಳನ್ನು ಆಧರಿಸಿಯೇ? ತಾನು ಒಂದು ಸಾಂಸ್ಕೃತಿಕ ಸಂಸ್ಥೆ ಎಂಬ ಆರೆಸ್ಸೆಸ್‌ನ ಹೇಳಿಕೆ ಅದನ್ನು ನಂಬುವಂತೆ ಮಾಡುವ ಪಿತೂರಿಯಷ್ಟೇ ಎಂಬುದನ್ನು ಗಮನಿಸಬೇಕು. ಅದು ರಾಜಕೀಯ ಕ್ಷೇತ್ರದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಸಾಧನಗಳ ಮೂಲಕ ರಿಮೋಟ್ ಕಂಟ್ರೋಲ್‌ನಂತೆ ಕೆಲಸ ಮಾಡುತ್ತದೆ. ಅದರ ಸ್ವಯಂ ಸೇವಕರು ಗಾಂಧಿಯ ಹತ್ಯೆಯಲ್ಲಿ, ಪಾದ್ರಿ ಸ್ಟೇನ್ಸ್‌ನ ಹತ್ಯೆಯಲ್ಲಿ, ಬಾಬರಿ ಮಸೀದಿ ಧ್ವಂಸದಲ್ಲಿ ಮತ್ತು ರಾಜಕೀಯ ಪಕ್ಷವನ್ನು ನಡೆಸುವಲ್ಲಿ ಸಕ್ರಿಯರಾಗಿದ್ದಾರೆ.

ಎರಡು ಗಮನಿಸಬೇಕಾದ ಘಟನೆಗಳೆಂದರೆ ಜನತಾಪಕ್ಷದ ಅಂಗವಾಗಿದ್ದ ಜನಸಂಘ, ಆರೆಸ್ಸೆಸ್ ಮತ್ತು ಜನತಾಪಕ್ಷದ ದ್ವಿಸದಸ್ಯತ್ವವನ್ನು ಪ್ರಶ್ನಿಸಿದ ಕಾರಣಕ್ಕಾಗಿ ಜನತಾಪಕ್ಷದಿಂದ ಹೊರಗೆ ಬಂದಿತ್ತು. ಎರಡನೆಯದಾಗಿ ವಾಜಪೇಯಿಯವರು ಒಮ್ಮೆ ತಾನು ‘‘ಮೊದಲಿಗೆ ಓರ್ವ ಸ್ವಯಂ ಸೇವಕ ನಂತರ ಭಾರತದ ಪ್ರಧಾನಿ’’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇತ್ತೀಚೆಗೆ ಗೃಹ ಸಚಿವ ರಾಜ್‌ನಾಥ್ ಸಿಂಗ್ ‘‘ನಾವೆಲ್ಲರೂ ಆರೆಸ್ಸೆಸ್’’ ಎನ್ನುವ ಮೂಲಕ ವಿವಾದಕ್ಕೆಡೆಮಾಡಿದ್ದರು. ಆರೆಸ್ಸೆಸ್ ತನ್ನ ವಿವಿಧ ಶಾಖೆಗಳಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಗಳನ್ನು ನೀಡಿದ್ದು ಸಮಾಜದ ಮೂಲ ಯೋಚನಾ ಕ್ರಿಯೆಯ ಮೇಲೆ ನಿಯಂತ್ರಣ ಸಾಧಿಸಲು ಯಶಸ್ವಿಯಾಗಿದೆ. ಸರಸ್ವತಿ ಶಿಶು ಮಂದಿರದಿಂದ ಆರಂಭಿಸಿ ಬೌಧಿಕ್‌ಗಳ ಮೂಲಕ ರಾಜಕೀಯ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುವ ಆರೆಸ್ಸೆಸ್ ಶಾಖೆಗಳ ವರೆಗೆ ಅದು ತನ್ನೆಲ್ಲಾ ಶಾಖೆಗಳ ಮೇಲೆ ಅಖಿಲ ಭಾರತ ಪ್ರತಿನಿಧಿ ಸಭಾದ ಮೂಲಕ ನಿಗಾಯಿರಿಸುತ್ತದೆ ಮತ್ತು ಅವುಗಳ ಕಾರ್ಯ ಗಳನ್ನು ಸಂಘಟಿಸುತ್ತದೆ. ಅದರ ಉದ್ದೇಶ ರಾಜಕೀಯ, ಕ್ರಿಯೆಗಳು ರಾಜಕೀಯ ಮತ್ತು ಅದರ ಫಲಿತಾಂಶ ಕೂಡಾ ರಾಜಕೀಯ, ಎಲ್ಲವೂ ರಾಜಕೀಯವಾಗಿದೆ.
ಅಧಿಕಾರದಲ್ಲಿ ಇಲ್ಲದಿದ್ದರೂ ಅದು ತನ್ನ ವಿವಿಧ ಶಾಖೆಗಳ ಮೂಲಕ ರಾಜಕೀಯವನ್ನು ನಿಯಂತ್ರಿಸುತ್ತದೆ. ಸದ್ಯ ಸರಕಾರದ ಸಹಯೋಗದಿಂದ ಅದರ ಕಾರ್ಯಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ, ಗುಜರಾತ್ ಮತ್ತು ಇತರ ರಾಜ್ಯಗಳು ಇದನ್ನು ಸ್ಪಷ್ಟಪಡಿಸಿವೆ. ಕೇಂದ್ರದಲ್ಲೀಗ ಬಿಜೆಪಿ ಆಡಳಿತ ನಡೆಸುತ್ತಿರುವ ಕಾರಣ ಆರೆಸ್ಸೆಸ್‌ನ ಸಿದ್ಧಾಂತ ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಹರಿದಾಡುತ್ತಿದೆ. ಸರಕಾರಿ ಉದ್ಯೋಗಿಗಳು ಬಹಿರಂಗವಾಗಿ ಆರೆಸ್ಸೆಸ್‌ನಲ್ಲಿ ಭಾಗವಹಿಸುವ ಮೂಲಕ ವಿಭಜನಾ ಪ್ರಕ್ರಿಯೆ ಮತ್ತಷ್ಟು ವೇಗ ಪಡೆದಿದ್ದು ಭಾರತೀಯ ಸಂವಿಧಾನಕ್ಕೆ ಅನುಗುಣವಾಗಿ ಆಡಳಿತ ನಡೆಸುವುದು ದುಸ್ತರವಾಗಿದೆ. ಕಾನೂನಾತ್ಮಕವಾಗಿ ಸಮ್ಮತವಲ್ಲ ಎಂಬುದು ತಿಳಿದಿದ್ದರೂ ಅಧಿಕಾರದಲ್ಲಿರುವ ಹಲವರು ಸರಕಾರಿ ಉದ್ಯೋಗಿಗಳು ಆರೆಸ್ಸೆಸ್ ಕಾರ್ಯಗಳಲ್ಲಿ ಭಾಗವಹಿಸಲು ಅನುಮತಿ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

share
ರಾಮ್ ಪುನಿಯಾನಿ
ರಾಮ್ ಪುನಿಯಾನಿ
Next Story
X