ಮಅದನಿ ಬಿಡುಗಡೆಗೆ ಪಿಡಿಪಿ ಐಕ್ಯ ಮೆರವಣಿಗೆ ಆಗಸ್ಟ್ 17ಕ್ಕೆ

ಕೋಝಿಕ್ಕೋಡ್,ಜುಲೈ 19: ಕರ್ನಾಟಕದ ಕಾಂಗ್ರೆಸ್ ಸರಕಾರ ಬೆಂಗಳೂರಿನಲ್ಲಿ ಇರಿಸಿ ಮಅದನಿಗೆ ಚಿತ್ರಹಿಂಸೆ ನೀಡುತ್ತಿದೆ ಎಂದು ಪಿಡಿಪಿ ಅಧ್ಯಕ್ಷ ಪುಂದುರ ಸಿರಾಜ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಮಅದನಿಯವರ ಆರೋಗ್ಯ ಸ್ಥಿತಿದಿನದಿಂದ ದಿನಕ್ಕೆ ಬಿಗಡಾಯಿಸುತ್ತಾ ಹೋಗುತ್ತಿದ್ದು ಸೂಕ್ತ ಚಿಕಿತ್ಸೆ ನೀಡಲು ಕಾಂಗ್ರೆಸ್ ಸರಕಾರ ಸಿದ್ಧವಾಗಿಲ್ಲ. ಕರ್ನಾಟಕದ ಹಿಂದುತ್ವವಾದಿಗಳ ಓಟನ್ನು ಗಳಿಸುವ ಉದ್ದೇಶದಿಂದ ಕಾಂಗ್ರೆಸ್ ಈ ತಂತ್ರ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆಂದು ವರದಿಯಾಗಿದೆ. ಮಅದನಿಗೆ ನ್ಯಾಯ ಸಿಗಲಿಕ್ಕಾಗಿ ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್‌ನ ಕೇಂದ್ರೀಯ ನಾಯಕತ್ವ ತುರ್ತಾಗಿ ಮಧ್ಯಪ್ರವೇಶಿಸಬೇಕಾಗಿದೆ.ರಾಜ್ಯ ಸರಕಾರದ ಕಡೆಯಿಂದ ಮಅದನಿಗೆ ನ್ಯಾಯ ಲಭಿಸಲು ಅಗತ್ಯ ಸಹಾಯ ನೀಡುವುದಾಗಿ ಕೇರಳ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಮಅದನಿ ಜೈಲುವಾಸ ಆರುವರ್ಷ ಪೂರ್ತಿಯಾಗುವ ಆಗಸ್ಟ್ ಹದಿನೇಳನೆ ತಾರಿಕಿನಂದು ಸಂಜೆ ಮೂರುಗಂಟೆಗೆ ಮಅದನಿಯನ್ನು ಸ್ವತಂತ್ರಗೊಳಿಸಿ ಕಾಂಗ್ರೆಸ್ ಎಂಬ ಘೋಷಣೆಯೊಂದಿಗೆ ಐಕ್ಯ ರ್ಯಾಲಿ ಅರಯಿಡತ್ತುಪಾಲದಿಂದ ಮದಲಕ್ಕುಳಂ ಮೈದಾನವರೆಗೆ ನಡೆಯಲಿದೆ ಎಂದು ಪುಂದುರ ಸಿರಾಜ್ ತಿಳಿಸಿದ್ದಾರೆಂದು ವರದಿಯಾಗಿದೆ. ಸುದ್ದಿಗೋಷ್ಠಿಯಲ್ಲಿ ಪಿಡಿಪಿ ಪ್ರಧಾನ ಕಾರ್ಯದರ್ಶಿ ನಿಸಾರ ವತ್ತೇರ್, ಕಾರ್ಯದರ್ಶಿ ರಸಲ್ ನಂದಿ ಉಪಸ್ಥಿತರಿದ್ದರೆಂದು ವರದಿ ತಿಳಿಸಿದೆ.





