ಛತ್ತೀಸ್‌ಗಢ ರಾಜ್ಯ ತಂಡಕ್ಕೆ ಮುಹಮ್ಮದ್ ಕೈಫ್ ನಾಯಕ

ರಾಯ್‌ಪುರ, ಜು.19: ಮುಂಬರುವ ಋತುವಿನಲ್ಲಿ ಮೊದಲ ಬಾರಿ ರಣಜಿ ಟ್ರೋಫಿ ಆಡಲಿರುವ ಛತ್ತೀಸ್‌ಗಢ ರಾಜ್ಯ ತಂಡಕ್ಕೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಮುಹಮ್ಮದ್ ಕೈಫ್ ನಾಯಕನಾಗಿ ಆಯ್ಕೆಯಾಗಿದ್ದಾರೆ.
‘‘ಛತ್ತೀಸ್‌ಗಡಧ ಮೊದಲ ನಾಯಕನಾಗಿ ಆಯ್ಕೆಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ಹೊಸ ಸವಾಲಿನ ಬಗ್ಗೆ ಕುತೂಹಲಕಾರಿಯಾಗಿದ್ದು, ಯುವ ಪ್ರತಿಭಾವಂತ ಆಟಗಾರರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವೆ’’ ಎಂದು ಕೈಫ್ ಪ್ರತಿಕ್ರಿಯಿಸಿದ್ದಾರೆ.
2002ರಲ್ಲಿ ಇಂಗ್ಲೆಂಡ್‌ನಲ್ಲಿ ಭಾರತ ತಂಡ ನಾಟ್‌ವೆಸ್ಟ್ ಟ್ರೋಫಿ ಜಯಿಸಲು ಪ್ರಮುಖ ಪಾತ್ರವಹಿಸಿದ್ದ ಕೈಫ್ 10 ವರ್ಷಗಳ ಹಿಂದೆ ಭಾರತದ ಪರ ಕೊನೆಯ ಪಂದ್ಯ ಆಡಿದ್ದರು. ಇತ್ತೀಚೆಗಿನ ದಿನಗಳಲ್ಲಿ ಅವರು ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚು ಆಡುತ್ತಿದ್ದಾರೆ.
ಭಾರತದ ಪರ 13 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೈಫ್ ಒಟ್ಟು 624 ರನ್ ಗಳಿಸಿದ್ದಾರೆ. ವೆಸ್ಟ್‌ಇಂಡೀಸ್‌ನ ವಿರುದ್ಧ ಜೀವನಶ್ರೇಷ್ಠ 148 ರನ್ ಗಳಿಸಿದ್ದಾರೆ. ಏಕದಿನದಲ್ಲಿ 32 ಕ್ಕೂ ಅಧಿಕ ಸರಾಸರಿಯಲ್ಲಿ ರನ್ ಗಳಿಸಿರುವ ಕೈಫ್ 125 ಪಂದ್ಯಗಳಲ್ಲಿ 2,753 ರನ್ ಗಳಿಸಿದ್ದಾರೆ. 2 ಶತಕ ಹಾಗೂ 17 ಅರ್ಧಶತಕ ಬಾರಿಸಿದ್ದಾರೆ.
...........





