ಉದಾರತೆ ಮತ್ತು ಉತ್ಸಾಹಕ್ಕೆ ಅತ್ಯುತ್ತಮ ನಿದರ್ಶನ ಈ ವ್ಯಕ್ತಿ
ಹೊಟ್ಟೆಗಿಲ್ಲದಿದ್ದರೂ ಭರವಸೆ ಬಿಡದ ಆಶಾವಾದಿ

ಬಡತನದಿಂದ ಮೇಲೆದ್ದು ಶ್ರೀಮಂತರಾದವರ ಕತೆ ನಾವು ಕೇಳಿದ್ದೇವೆ. ಆದರೆ ಮುಂಬೈನ ಈ ವ್ಯಕ್ತಿಯ ಬಳಿ ಎಲ್ಲವೂ ಇತ್ತು. ಆದರೆ ಈತ ಎಲ್ಲವನ್ನೂ ಕಳೆದುಕೊಂಡ ಮೇಲೆ ಮತ್ತೆ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡುವ ಪ್ರಯತ್ನದಲ್ಲಿ ಸ್ಫೂರ್ತಿಯಾಗಿದ್ದಾರೆ.
ಹ್ಯೂಮನ್ಸ್ ಬಾಂಬೆ ಎನ್ನುವ ಫೇಸ್ಬುಕ್ ಪುಟದಲ್ಲಿ ಈತನ ಕತೆ ಮೊದಲ ಬಾರಿಗೆ ಬಂತು. ಒಂದು ಕಾಲದಲ್ಲಿ ಈತ ಬಾಲನಟ. “ದೊಡ್ಡ ಮನೆಯಲ್ಲಿ ಶ್ರೀಮಂತ ವ್ಯಕ್ತಿಗಳ ಜೊತೆಗೆ ಪಾರ್ಟಿ ಮಾಡುತ್ತಿದ್ದೆ. ಸಾಧ್ಯವಾದರೆ ದಿನಕ್ಕೆ 10 ಬಾರಿ ಊಟ ಮಾಡುವಷ್ಟು ದುಡ್ಡಿತ್ತು. ಆದರೆ ಈಗ ಒಂದು ಊಟಕ್ಕೂ ದುಡ್ಡಿಲ್ಲ” ಎನ್ನುತ್ತಾರೆ ಈ ವ್ಯಕ್ತಿ.
ಹೆಸರು ಹೇಳಲು ಬಯಸದ ಈ ವ್ಯಕ್ತಿಯ ಹೆತ್ತವರ ಸಾವು ಈತನನ್ನು ಮತ್ತು ಈತನ ಸಹೋದರರನ್ನು ಬೀದಿಗೆ ತಳ್ಳಿತ್ತು. “ಬಾಲನಟನಾಗಿ ಹಲವು ಹಿರಿಯ ನಟರ ಜೊತೆಗೆ ನಟಿಸಿದ್ದೇನೆ. ಆದರೆ ಹಣವಿಲ್ಲದಿದ್ದರೆ ಪ್ರತಿಭೆಯೂ ಯಾರಿಗೂ ಕಾಣುವುದಿಲ್ಲ. ಜನ ನನ್ನ ಮುಖವನ್ನೂ ಮರೆತಿದ್ದಾರೆ” ಎನ್ನುತ್ತಾರೆ. ಇಷ್ಟೆಲ್ಲಾ ಆದರೂ ಈ ವ್ಯಕ್ತಿ ಭರವಸೆ ಕಳೆದುಕೊಂಡಿಲ್ಲ. ಭವಿಷ್ಯದ ಬಗ್ಗೆ ಭಯವಿಲ್ಲ, ಕನಸಿದೆ. ಆತ ಕೊನೆಗೆ ಹೇಳುವ ಮಾತು ಯಾರ ಕಣ್ಣಲ್ಲೂ ನೀರು ಭರಿಸದೆ ಇರದು. “ನೀವೂ ಬಹಳ ದಣಿದ ಹಾಗಿದೆ. ನನ್ನ ಬಳಿ ಹೆಚ್ಚೇನೂ ಇಲ್ಲ. ಆದರೆ ನಿಮಗೆ ಊಟ ಏನಾದರೂ ಬೇಕೆ?” ಎನ್ನುವುದು ಫೇಸ್ಬುಕ್ ಪೋಸ್ಟ್‌ನ ಕೊನೆಗೆ ಈತ ಹೇಳುವ ಮಾತು.
ಕೃಪೆ: www.ndtv.com







