ದಾಖಲೆ ಏಳನೆ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟ್ ತಾರೆ ಒಕ್ಸಾನಾ ಚುಸೊವಿಟಿನಾ

ರಿಯೊ ಡಿಜನೈರೊ, ಜು.19: ಉಜ್ಬೇಕಿಸ್ತಾನದ ಜಿಮ್ನಾಸ್ಟ್ ತಾರೆ ಒಕ್ಸಾನಾ ಚುಸೊವಿಟಿನಾ(41 ವರ್ಷ) ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಹಿರಿಯ ಜಿಮ್ನಾಸ್ಟ್ ಪಟು.
ಏಳನೆ ಬಾರಿ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸುವ ಮೂಲಕ ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿರುವ ಒಕ್ಸಾನಾ ಕಠಿಣ ತರಬೇತಿ ನಡೆಸುತ್ತಿದ್ದಾರೆ.
ಯುವ ಅಥ್ಲೀಟ್‌ಗಳಿಗೆ ಸೀಮಿತವಾಗಿರುವ ಜಿಮ್ನಾಸ್ಟಿಕ್‌ನಲ್ಲಿ ಸುಮಾರು 25 ವರ್ಷಗಳನ್ನು ಕಳೆದಿರುವ ಚುಸೊವಿಟಿನಾ ವೃತ್ತಿಜೀವನದಲ್ಲಿ ಮೂರು ವಿಭಿನ್ನ ದೇಶವನ್ನು ಪ್ರತಿನಿಧಿಸಿದ್ದಾರೆ.
ಸೋವಿಯಟ್ ಯೂನಿಯನ್ ಪರ ಸ್ಪರ್ಧಿಸುವ ಮೂಲಕ ತನ್ನ ವೃತ್ತಿಜೀವನ ಆರಂಭಿಸಿರುವ ಚುಸೊವಿಟಿನಾ 1992ರ ಒಲಿಂಪಿಕ್ಸ್‌ನಲ್ಲಿ ಮಾಜಿ ಸೋವಿಯಟ್ ರಾಜ್ಯಗಳ ಒಕ್ಕೂಟ ಕಾನ್ಫಡರೇಶನ್ ಆಫ್ ಇಂಡಿಪೆಂಡೆಂಟ್ ರಾಜ್ಯವನ್ನು ಪ್ರತಿನಿಧಿಸಿದ್ದರು. ಚುಸೊವಿಟಿನಾ ರಿಯೋ ಒಲಿಂಪಿಕ್ಸ್‌ನಲ್ಲಿ ತಾಯ್ನ್‌ಡು ಉಜ್ಬೇಕಿಸ್ತಾನವನ್ನು ಪ್ರತಿನಿಧಿಸಲಿದ್ದಾರೆ.
ಜಿಮ್ನಾಸ್ಟಿಕ್ ಹೆಚ್ಚು ಕಷ್ಟಕರ ಹಾಗೂ ಅಷ್ಟೇ ನಾಟಕೀಯ ಹಾಗೂ ಸುಂದರ ಕ್ರೀಡೆಯಾಗಿದೆ ಎಂದು ಚುಸೊವಿಟಿನಾ ಹೇಳಿದ್ದಾರೆ.





