ಯುಎಇ: ಸಾಕು ಪ್ರಾಣಿಯಿಂದ ಯಾರಾದರೂ ಮೃತರಾದರೆ ಒಡೆಯನಿಗೆ ಜೀವಾವಧಿ ಜೈಲು !

ಅಬುಧಾಬಿ, ಜುಲೈ 19: ಯುಎಇಯಲ್ಲಿ 12 ಜಾತಿಯ ನಾಯಿಗಳನ್ನು ತರಿಸಿಕೊಳ್ಳುವುದು ಮತ್ತು ಮಾರಾಟ ನಡೆಸುವುದನ್ನು ನಿಷೇಧಿಸುವ ಸಾಧ್ಯತೆ ದಟ್ಟವಾಗಿದೆಯೆಂದು ವರದಿಯಾಗಿದೆ. ಪಿಟ್‌ಬುಲ್ಸ್, ಮಾಸ್ಟಿಫ್, ಡೋಸ್,ರೋಟೊಂರ್, ಜರ್ಮನ್ ಶೆಫರ್ಡ್, ಹಸ್ಕೀಸ್, ಅಲಾಸ್ಕನ್ ಮಲಾಮ್ಯೂಟ್ಸ್, ಡಾಬರ್‌ಮೆನ್ ಫಿನ್‌ಶರ್, ಚೋಚೋ, ಪ್ರಿಸ್ ಕನೇರಿಯೊ, ಬೋಕ್ಸರ್, ಡಾಲ್ಮೇಶ್ಯನ್ ಮುಂತಾದ ಜಾತಿಗೆ ಸೇರಿದ ನಾಯಿಗಳನ್ನು ನಿಷೇಧಿಸುವ ಕರಡು ಕಾನೂನು ಸಿದ್ಧವಾಗಿದ್ದು ಅದರಲ್ಲಿ ಈ ಜಾತಿಯ ನಾಯಿಗಳನ್ನು ನಿಷೇಧಿಸಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಜೂನ್ 15ಕ್ಕೆ ಇದಕ್ಕೆ ಸಂಬಂಧಿಸಿದ ಕರಡು ಕಾನೂನನ್ನು ಸಲ್ಲಿಸಲಾಗಿದ್ದು ಕಾಡು ಪ್ರಾಣಿಗಳುಮತ್ತುಅಪಾಯಕಾರಿ ಪ್ರಾಣಿಗಳನ್ನುಮನೆಯಲ್ಲಿ ಸಾಕುವುದಕ್ಕೆ ಯುಎಇಯಲ್ಲಿ ಕರಡು ಕಾನೂನು ಪ್ರಕಾರ ನಿರ್ಬಂಧವಿದೆ. ಇದನ್ನು ಉಲ್ಲಂಘಿಸಿದವರಿಗೆ ಜೀವಾವಧಿ ಜೈಲು ಶಿಕ್ಷೆ, ಹತ್ತುಲಕ್ಷ ದಿರ್ಹಮ್ ವರೆಗೂ ದಂಡ ವಿಧಿಸಬಹುದೆಂದು ಶಿಫಾರಸು ಮಾಡಲಾಗಿದೆ.
ಪ್ರಾಣಿಗಳ ದಾಳಿಯಿಂದ ಯಾರಾದರೂ ಮೃತರಾದರೆ ಅದರ ಒಡೆಯ ಜೀವಾವಧಿ ಜೈಲು ಶಿಕ್ಷೆಅನುಭವಿಸಬೇಕಾಗಿದೆ. ಪ್ರಾಣಿಗಳುಇತರರ ಅಂಗಊನ ವಾಗುವಂತೆ ಗಾಯಗೊಳಿಸಿದರೆ ಅವುಗಳ ಮಾಲಕನಿಗೆ ಏಳು ವರ್ಷ ಜೈಲುಶಿಕ್ಷೆ, ಸಣ್ಣಪ್ರಮಾಣದಲ್ಲಿ ಗಾಯಗೊಳಿಸಿದ್ದರೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಹತ್ತುಸಾವಿರ ದಿರ್ಹಮ್ ದಂಡ ವಿಧಿಸಬಹುದೆಂದು ಕರಡು ಕಾನೂನಿನಲ್ಲಿ ಶಿಫಾರಸು ಮಾಡಲಾಗಿದೆ ಎಂದು ವರದಿಯಾಗಿದೆ.





