ಸೇವಾತೆರಿಗೆ: ಜೇಟ್ಲಿಯಿಂದ ಸಂಸತ್‌ಗೆ ತಪ್ಪು ಮಾಹಿತಿ: ಚಿದಂಬರಂ

ಹೊಸದಿಲ್ಲಿ,ಜುಲೈ 19: ಸೇವಾ ತೆರಿಗೆಯ ಆದಾಯಗಳನ್ನು ರಾಜ್ಯಗಳ ಜೊತೆ ಹಂಚಿಕೊಂಡಿಲ್ಲವೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಸದನಕ್ಕೆ ತಪ್ಪು ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ತಿಳಿಸಿದ್ದಾರೆ.
'' ವಿತ್ತ ಸಚಿವರು ನೀಡಿರುವ ಹೇಳಿಕೆ ಸರಿಯಲ್ಲ. ಸೇವಾ ತೆರಿಗೆ ಸೇರಿದಂತೆ ಎಲ್ಲಾ ತೆರಿಗೆಗಳನ್ನು ರಾಜ್ಯಗಳ ಜೊತೆ ಹಂಚಿಕೊಳ್ಳಲಾಗುತ್ತಿದೆ'' ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
14ನೆ ಹಣಕಾಸು ಆಯೋಗದ ಶಿಫಾರಸುಗಳ ಬಗ್ಗೆ ಇಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಜೇಟ್ಲಿ ನೀಡಿದ ಉತ್ತರದ ಬಗ್ಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ರಾಜ್ಯಗಳ ಜೊತೆ ಸೇವಾ ತೆರಿಗೆಯನ್ನು ಹಂಚಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಅವುಗಳ ಹಿತಾಸಕ್ತಿಯ ದೃಷ್ಟಿಯಿಂದ ಸೇವಾತೆರಿಗೆಯಲ್ಲಿ ಪಾಲು ನೀಡುವುದಕ್ಕಾಗಿ ಕೇಂದ್ರವು ಜಿಎಸ್‌ಟಿ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಿದೆಯೆಂದು ಜೇಟ್ಲಿ ಉತ್ತರಿಸಿದ್ದರು.
Next Story