ಬ್ರೆಝಿಲ್ ಒಲಿಂಪಿಕ್ಸ್ ತಂಡಕ್ಕೆ 462 ಅಥ್ಲೀಟ್‌ಗಳ ಆಯ್ಕೆ

ರಿಯೋ ಡಿಜನೈರೊ, ಜು.19: ಆತಿಥೇಯ ಬ್ರೆಝಿಲ್ ಮುಂದಿನ ತಿಂಗಳು ನಡೆಯಲಿರುವ ರಿಯೋ ಒಲಿಂಪಿಕ್ಸ್‌ಗೆ 462 ಅಥ್ಲೀಟ್‌ಗಳ ದಂಡನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ. ಇದು ಗೇಮ್ಸ್‌ಗೆ ಆಯ್ಕೆ ಮಾಡಲಾಗಿರುವ ಅತ್ಯಂತ ದೊಡ್ಡ ತಂಡವಾಗಿದೆ.
ಕೆಲವು ಅಥ್ಲೀಟ್‌ಗಳ ವೈಲ್ಡ್‌ಕಾರ್ಡ್ ಪ್ರವೇಶ ಬಾಕಿ ಹಾಗೂ ಟೆನಿಸ್ ಡ್ರಾದಲ್ಲಿನ ಬದಲಾವಣೆಯ ಹಿನ್ನೆಲೆಯಲ್ಲಿ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳಲಿರುವ ಬ್ರೆಝಿಲ್ ಅಥ್ಲೀಟ್‌ಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬ್ರೆಝಿಲ್ ಒಲಿಂಪಿಕ್ ಸಮಿತಿ ಹೇಳಿದೆ.
ಬ್ರೆಝಿಲ್ ಒಲಿಂಪಿಕ್ಸ್ ತಂಡದಲ್ಲಿ 253 ಪುರುಷರು ಹಾಗೂ 209 ಮಹಿಳೆಯರಿದ್ದಾರೆ. 344 ಕೋಚ್‌ಗಳು, ಮೆಡಿಕಲ್ ಸ್ಟಾಫ್ ಹಾಗೂ ಟೀಮ್ ಆಫೀಸರ್‌ಗಳಿದ್ದಾರೆ.
2008ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಬ್ರೆಝಿಲ್ ತಂಡ ಅತ್ಯಂತ ಹೆಚ್ಚು ಅಥ್ಲೀಟ್‌ಗಳನ್ನು(277) ಕಳುಹಿಸಿಕೊಟ್ಟಿತ್ತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬ್ರೆಝಿಲ್ 259 ಕ್ರೀಡಾಳುಗಳನ್ನು ಸ್ಪರ್ಧೆಗಿಳಿಸಿತ್ತು.
ಬ್ರೆಝಿಲ್ ಸ್ಪರ್ಧಾಳುಗಳ ಪೈಕಿ ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್‌ಗಳು 67 ಜನರಿದ್ದಾರೆ. ಫುಟ್ಬಾಲ್(36) ಹಾಗೂ ಸ್ವಿಮ್ಮಿಂಗ್(33) ಬಳಿಕದ ಸ್ಥಾನದಲ್ಲಿದ್ದಾರೆ.
ಆತಿಥೇಯ ದೇಶದ ಅಥ್ಲೀಟ್‌ಗಳು ಮುಂದಿನ ರವಿವಾರದಿಂದ ಕ್ರೀಡಾ ಗ್ರಾಮಕ್ಕೆ ಆಗಮಿಸಲಿದ್ದಾರೆ.







