ಫತೇವುಲ್ಲಾ ಗಡಿಪಾರು ಕೋರಿ ಅಮೆರಿಕಕ್ಕೆ ದಾಖಲೆ ರವಾನೆ
ಅಂಕಾರ, ಜು. 19: ಶುಕ್ರವಾರದ ವಿಫಲ ಸೇನಾ ದಂಗೆಯ ಸಂಚುಕೋರ ಎಂಬುದಾಗಿ ಟರ್ಕಿ ಆರೋಪಿಸಿರುವ ಮುಸ್ಲಿಮ್ ಧರ್ಮಗುರು ಫತೇವುಲ್ಲಾ ಗುಲೇನ್‌ರನ್ನು ಗಡಿಪಾರು ಮಾಡುವ ತನ್ನ ಕೋರಿಕೆಗೆ ಪೂರಕವಾಗಿ ಟರ್ಕಿ ಅಮೆರಿಕಕ್ಕೆ ನಾಲ್ಕು ಕಡತಗಳನ್ನು ಕಳುಹಿಸಿಕೊಟ್ಟಿದೆ ಎಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ದಿರಿಮ್ ಮಂಗಳವಾರ ಹೇಳಿದ್ದಾರೆ. ಫತೇವುಲ್ಲಾ ಗುಲೇನ್ ಅಮೆರಿಕದಲ್ಲಿ ನೆಲೆಸಿದ್ದಾರೆ. ‘‘ಭಯೋತ್ಪಾದಕ ಮುಖ್ಯಸ್ಥನ ಗಡಿಪಾರು ಕೋರಿ ನಾವು ಅಮೆರಿಕಕ್ಕೆ ನಾಲ್ಕು ದಾಖಲೆಗಳನ್ನು ಕಳುಹಿಸಿದ್ದೇವೆ. ಅವರಿಗೆ ಬೇಕಾಗಿರುವುದಕ್ಕಿಂತಲೂ ಹೆಚ್ಚಿನ ದಾಖಲೆಯನ್ನು ನಾವು ಒದಗಿಸುತ್ತೇವೆ’’ ಎಂದು ಬಿನಾಲಿ ಸಂಸತ್ತಿಗೆ ತಿಳಿಸಿದರು. ಗುಲೇನ್ 1999ರಿಂದಲೂ ಅಮೆರಿಕದಲ್ಲಿ ಸ್ವಯಂ ದೇಶಭಷ್ಟ ಜೀವನವನ್ನು ನಡೆಸುತ್ತಿದ್ದಾರೆ. ಕ್ಷಿಪ್ರಕ್ರಾಂತಿಯಲ್ಲಿ ತನ್ನ ಕೈವಾಡವಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ.
Next Story





