ಹೆಚ್ಚಿನ ಸೈನಿಕರು ನಂಟು ಹೊಂದಿಲ್ಲ: ಸೇನೆ
ಇಸ್ತಾಂಬುಲ್, ಜು. 19: ಶುಕ್ರವಾರ ನಡೆದ ವಿಫಲ ಕ್ಷಿಪ್ರಕ್ರಾಂತಿಯೊಂದಿಗೆ ಸೇನೆಯ ಅತ್ಯಂತ ಹೆಚ್ಚಿನ ಸಂಖ್ಯೆಯ ಸದಸ್ಯರು ನಂಟು ಹೊಂದಿಲ್ಲ ಎಂದು ಟರ್ಕಿ ಸೇನೆ ಮಂಗಳವಾರ ತಿಳಸಿದೆ. ಅದೇ ವೇಳೆ, ಪಿತೂರಿಗಾರರು ಕಠಿಣ ಶಿಕ್ಷೆಯನ್ನು ಎದುರಿಸಲಿದ್ದಾರೆ ಎಂಬುದಾಗಿಯೂ ಅವರು ಎಚ್ಚರಿಸಿದ್ದಾರೆ.
‘‘ತಮ್ಮ ದೇಶ, ಜನರು ಮತ್ತು ಧ್ವಜವನ್ನು ಪ್ರೀತಿಸುವ ಸೇನೆಯ ಭಾರೀ ಸಂಖ್ಯೆಯ ಸದಸ್ಯರು ದೇಶದ್ರೋಹಿಗಳು ನಡೆಸಲು ಪ್ರಯತ್ನಿಸಿದ ಸೇನಾ ದಂಗೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ’’ ಎಂದು ಹೇಳಿಕೆಯೊಂದರಲ್ಲಿ ಸೇನೆ ತಿಳಿಸಿದೆ.
ಟರ್ಕಿ ಗಣರಾಜ್ಯಕ್ಕೆ ‘‘ಅವಮಾನ’’ ಮಾಡಿರುವುದಕ್ಕಾಗಿ ಪಿತೂರಿಗಾರರನ್ನು ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ಅದು ಹೇಳಿದೆ. ‘‘ಕಾನೂನಿನ ಆಡಳಿತ, ಪ್ರಜಾಸತ್ತೆ ಮತ್ತು ನಮ್ಮ ದೇಶದ ಅತ್ಯುನ್ನತ ವೌಲ್ಯ ಹಾಗೂ ಅದರ ಶ್ರೇಷ್ಠ ಗುರಿಗಳ ಬಗ್ಗೆ ನಂಬಿಕೆಯಿರಿಸಿದವರು ಈ ಪರೀಕ್ಷೆಯಲ್ಲಿ ಗೆದ್ದಿದ್ದಾರೆ’’ ಎಂದಿದೆ.
Next Story





