ಬಾಬರಿ ಮಸೀದಿ ಪ್ರಕರಣದ ಹಳೆಯ ಕಕ್ಷಿಗಾರ ಮುಹಮ್ಮದ್ ಹಾಶಿಂ ವಿಧಿವಶ

ಆಯೋಧ್ಯೆ, ಜು.20: ರಾಮಜನ್ಮ ಭೂಮಿ-ಬಾಬರಿ ಮಸೀದಿ ವಿವಾದ ಪ್ರಕರಣದ ಹಳೆಯ ಕಕ್ಷಿಗಾರ ಮುಹಮ್ಮದ್ ಹಾಶಿಂ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಇಂದು ನಿಧನರಾದರು. ಅವರಿಗೆ 95ವರ್ಷ ವಯಸ್ಸಾಗಿತ್ತು. ಡಿಸೆಂಬರ‍್ 1949ರಲ್ಲಿ ಬಾಬರಿ ಮಸೀದಿ ಪ್ರಕರಣದಲ್ಲಿ ಅವರು ನ್ಯಾಯಾಲಯದಲ್ಲಿ ಹೋರಾಟ ಆರಂಭಿಸಿದ್ದರು.1961 ರಲ್ಲಿ ಸುನ್ನಿ ಕೇಂದ್ರ ವಕ್ಫ್ ಬೋರ್ಡ್ ಮೂಲಕ ಮುಹಮ್ಮದ್ ಹಾಶಿಂ ಸೇರಿದಂತೆ ಆರು ಐದು ಮಂದಿ 'ಅಯೋಧ್ಯೆವಿವಾದ" ವನ್ನು ಪ್ರಶ್ನಿಸಿ ಫೈಝಾಬಾದ್ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಮೊಹಮ್ಮದ್ ಫಾರೂಕ್, ಶಹಾಬುದ್ದೀನ್ ಮೌಲಾನಾ ನಿಸಾರ್, ಮಹಮೂದ್ ಸಾಹಬ್ ಮತ್ತು ಹಾಶಿಮ್ ಅನ್ಸಾರಿ ಇವರೊಂದಿಗಿದ್ದ ಐದು ಫಿರ್ಯಾದಿಗಳು
ಆಯೋಧ್ಯೆ ವಿವಾದವನ್ನು ಪ್ರಶ್ನಿಸಿ ಫೈಝಾಬಾದ್ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
2010 ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಕಟಿಸಿ ನಿರ್ಮೋಹಿ ಅಕಾರ ಅಯೋಧ್ಯೆಯ ವಿವಾದಿತ ಜಮೀನಿನ ಮೂರನೇ ಒಂದು ಭಾಗವನ್ನು ನೀಡಿತ್ತು.
ಉಳಿದ ಎರಡು ಭಾಗವನ್ನು ವಕ್ಫ್ ಮಂಡಳಿ ಮತ್ತು ರಾಮ್ ಲಲ್ಲಾಗೆ ನೀಡಲಾಗಿತ್ತು.







