ಆತ್ಮಹತ್ಯೆಗೆ ಯತ್ನಿಸಿದ್ದ ಪಿಎಸ್ಐ ರೂಪ ಚೇತರಿಕೆ

ಬೆಂಗಳೂರು, ಜು. 20: ಹಿರಿಯ ಪೊಲೀಸ್ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ನಿದ್ರೆ ಮಾತ್ರೆ ಸೇವಿಸಿ ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದ ವಿಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರೂಪಾ ತೆಂಬದ ಅವರು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಪೋಕ್ಸೋ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ರೂಪ ತೆಂಬದ ಮತ್ತು ವಿಜಯನಗರ ಪೊಲೀಸ್ ಇನ್ಸ್ ಪೆಕ್ಟರ್ ಸಂಜೀವ್ ಗೌಡ ನಡುವೆ ಈ ಹಿಂದೆ ವಾಗ್ವಾದವಾಗಿತ್ತು . ಬಳಿಕ ಇನ್ಸ್ ಪೆಕ್ಟರ್ ಸಂಜೀವ್ ಅವರು ಠಾಣೆಯ ಡೈರಿಯಲ್ಲಿ ರೂಪಾ ಅವರಿಂದ ಕರ್ತವ್ಯಲೋಪವಾಗಿದೆ ಎಂದು ವರದಿ ಬರೆದಿದ್ದರು ಎನ್ನಲಾಗಿದೆ.
ಇನ್ಸ್ ಪೆಕ್ಟರ್ ಕ್ರಮದಿಂದ ಬೇಸತ್ತ ರೂಪ ಅವರು ಮನೆಗೆ ತೆರಳಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
Next Story





