ಮಾಯಾವತಿಯನ್ನು ವೇಶ್ಯೆಗೆ ಹೋಲಿಸಿದ ಬಿಜೆಪಿ ನಾಯಕ!
.jpeg)
ಹೊಸದಿಲ್ಲಿ,ಜುಲೈ 20: ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಮಾಯಾವತಿಯವರ ಕುರಿತು ನೀಡಿದ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ದಯಾಶಂಕರ್ ಮಾಧ್ಯಮಗಳೊಂದಿಗೆ ಮಾತಾಡುತ್ತಾ"ಕಾನ್ಸಿರಾಮ್ ಕಂಡ ಕನಸ್ಸನ್ನು ಮಾಯಾವತಿ ಚಿಂದಿ ಚೂರು ಮಾಡಿದ್ದಾರೆ.ಅವರು ಹಗಲಲ್ಲಿ ಒಂದು ಕೋಟಿ ರೂಪಾಯಿಗೆ ಮಾರಿದ ಟಿಕೆಟ್‌ಗೆ ಬೇರೆ ಯಾರಾದರೂ ಎರಡು ಕೋಟಿ ರೂಪಾಯಿ ಕೊಡುತ್ತೇವೆ ಎಂದರೆ ಅವರಿಗೆ ನೀಡುತ್ತಾರೆ" ಎಂದು ವೇಶ್ಯೆಗೆ ಸಮಾನವಾಗಿ ಹೋಲಿಕೆ ಮಾಡಿದ್ದಾರೆಂದು ವರದಿ ತಿಳಿಸಿದೆ.
ಬಿಜೆಪಿ ನಾಯಕನ ಈ ಹೇಳಿಕೆಗೆ ಬಿಎಸ್ಪಿಯ ಅಧ್ಯಕ್ಷೆ ಮಾಯಾವತಿ ಪ್ರತಿಕ್ರಿಯಿಸಿದ್ದು "ಬಿಎಸ್ಪಿಯ ಜನಪ್ರಿಯತೆ ನೋಡಿ ಬಿಜೆಪಿ ಹತಾಶಗೊಂಡಿದೆ. ಅದರ ನಾಯಕರಲ್ಲಿರುವ ಹತಾಶೆಯನ್ನೇ ಇಂತಹ ಹೇಳಿಕೆಗಳು ಎತ್ತಿತೋರಿಸುತ್ತಿವೆ ಎಂದು ಹೇಳಿದ್ದಾರೆಂದು ವರದಿಯಾಗಿದೆ.
ಸಂಸತ್‌ಗೆ ಆಘಾತ
ಮಾಯಾವತಿಯವರ ಕುರಿತು ದಯಾಶಂಕರ್ ಸಿಂಗ್‌ರ ಟೀಕೆಯ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾವಿಸಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್, ಇಂತಹ ಮಾನಸಿಕತೆಯ ವ್ಯಕ್ತಿಗಳಿಗೆ ಯಾವುದೇ ಪಕ್ಷದಲ್ಲಿ ಸ್ಥಾನವಿರಬಾರದು ಅಥವಾ ಯಾವುದೇ ಪಕ್ಷದಲ್ಲಿ ಪದಾಧಿಕಾರವಿರಬಾರದು ಎಂದು ಕಿಡಿಗಾರಿದ್ದಾರೆ.
ಮಾಯಾವತಿಯವರ ವಿರುದ್ಧ ಬಿಜೆಪಿಯ ವ್ಯಕ್ತಿಯೊಬ್ಬ ಇಂತಹ ಮಾನಹಾನಿಕರ ಶಬ್ಧ ಬಳಸಿರುವುದರಿಂದ ತನಗೆ ವೈಯಕ್ತಿಕವಾಗಿ ನೋವಾಗಿದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
WATCH: UP BJP VP Dayashankar Singh uses derogatory language against BSP Chief Mayawati, compares her to a prostitutehttps://t.co/vic0uDhbkq
— ANI UP (@ANINewsUP) July 20, 2016







