ಮುಡಿಪು: ಯೋಗ ಸರ್ಟಿಫಿಕೇಟ್ ಕೋರ್ಸು ಉದ್ಠಾಟನೆ

ಕೊಣಾಜೆ,ಜು.20: ಮುಡಿಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ರೇಂಜರ್ಸ್/ರೋವರ್ಸ್ ಘಟಕದ ಜಂಟಿ ಆಶ್ರಯದಲ್ಲಿ ಬೇಸಿಕ್ ಯೋಗ ಸರ್ಟಿಫಿಕೇಟ್ ಕೋರ್ಸ್‌ನ ಉದ್ಘಾಟನಾ ಕಾರ್ಯಕ್ರಮವು ಮಂಗಳವಾರ ನಡೆಯಿತು. ಆವಿಷ್ಕಾರ ಯೋಗ ಸಂಸ್ಥೆಯ ಸಂಚಾಲಕರಾದ ಕುಶಾಲಪ್ಪ ಗೌಡ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೋಗ ಮನುಷ್ಯನ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಯೋಗ ಶಿಕ್ಷಣ ಪಡೆಯುವ ಮೂಲಕ ತಮ್ಮ ಬದುಕನ್ನು ಭದ್ರವಾಗಿ ಕಟ್ಟಿಕೊಂಡು ತಮ್ಮ ವ್ಯಕ್ತಿತ್ವವನ್ನು ಬೆಳೆಸಬಹುದು ಎಂದುಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರಿಧರ್ ರಾವ್ ಅವರು ವಿದ್ಯಾರ್ಥಿಗಳನೈತಿಕ ಮೌಲ್ಯವರ್ಧನೆಗೆ ಯೋಗ ಪೂರಕವಾಗಿದೆ ಮಾತ್ರವಲ್ಲದೆಮುಂದಿನ ಬದು
ನ್ನು ಶಿಸ್ತುಬದ್ಧಗೊಳಿಸುವಲ್ಲಿ ಯೋಗ ಪಾತ್ರ ಮಹತ್ವಪೂರ್ಣವಾದುದು ಎಂದು ಹೇಳಿದರು. ತರಬೇತುದಾರರಾದ ಆವಿಷ್ಕಾರ ಯೋಗ ಸಂಸ್ಥೆಯ ಗಿರಿಯಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ಧರು. ಕಾರ್ಯಕ್ರಮದ ಸಂಯೋಜಕರಾದ ಶುಭ ಕೆ.ಹೆಚ್. ಸ್ವಾಗತಿಸಿದರು. ಅಮಿತಾ ಪ್ರಾರ್ಥಿಸಿದರು. ಮಿಥುಶ್ರೀ ವಂದನಾರ್ಪಣೆಗೈದರು. ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿದರು.







