ಭಟ್ಕಳ: ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ವನ ಮಹೋತ್ಸವ

ಭಟ್ಕಳ,ಜು.20: ಇಲ್ಲಿನ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆ, ಅಭಿಯೋಜನಾ ಇಲಾಖೆ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ವನ ಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ವಿವಿದ ಜಾತಿಯ ಗಿಡಗಳನ್ನು ನಡೆವುದರ ಮೂಲಕ ಚಾಲನೆ ನೀಡಿದ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ.ನ್ಯಾಯಾಧೀಶ ಹನುಮಂತರಾವ್ ಕುಲಕರ್ಣಿ ವನಮಹೋತ್ಸವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಧನ್ಯ ಕುಮಾರ್ ಜೈನ್, ಸಹಾಯಕ ಸರಕಾರಿ ಅಭಿಯೊಜಕಿ ಇಂದಿರಾ ನಾಯ್ಕ, ವಲಯ ಅರಣ್ಯಾಧಿಕಾರಿ ಆರ್.ರವೀಂದ್ರ, ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ, ಜೆ.ಡಿ.ಭಟ್ಟ, ನಾಗರಾಜ ಈ.ಎಚ್., ಎಂ.ಜೆ.ನಾಯ್ಕ, ನಾರಾಯಣಯಾಜಿ, ಎಸ್. ಜೆ. ನಾಯ್ಕ, ಗಣೇಶ ದೇವಾಡಿಗ, ಎಸ್. ಕೆ.ಶೆಟ್ಟಿ, ಕಮಲಾಕರ ಭೈರುಮನೆ, ಪಾಂಡು ನಾಯ್ಕ, ಮನೋಜ ನಾಯ್ಕ, ಅರಣ್ಯಇಲಾಖೆಯ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.
Next Story





