ನಾಯಿ ಮರಿಗಳನ್ನು ಜೀವಂತ ಸುಟ್ಟ ಹುಡುಗರು !
ಇದು 'ಮೃಗೀಯ' ವರ್ತನೆಯೇ ? 'ಮಾನವೀಯ' ವರ್ತನೆ ? : ಆಘಾತಕಾರಿ ವೀಡಿಯೊ

ಹೈದರಾಬಾದ್ , ಜು. 20 : ನಾಯಿಗಳನ್ನು ಅತ್ಯಂತ ಕ್ರೂರವಾಗಿ ಕೊಳ್ಳುವ ಎರಡು ವೀಡಿಯೊಗಳು ಹೈದರಾಬಾದ್ ಅನ್ನು ಬೆಚ್ಚಿ ಬೀಳಿಸಿವೆ. ಹುಡುಗರು ಮೂರು ನಾಯಿ ಮರಿಗಳನ್ನು ಕಟ್ಟಿ ಹಾಕಿ ಅವುಗಳನ್ನು ಒಣ ಹುಲ್ಲು, ಮರದ ತುಂಡುಗಳಿಂದ ಮುಚ್ಚಿ ಬೆಂಕಿಗೆ ಹಾಕುವ ದೃಶ್ಯವನ್ನು ಅವರಲ್ಲೇ ಒಬ್ಬ ರೆಕಾರ್ಡ್ ಮಾಡಿದ್ದಾನೆ. ಆತ ಇತರರನ್ನು ಬೆಂಕಿ ಹಚ್ಚುವಂತೆ ಹುರಿದುಂಬಿಸುವುದು ವೀಡಿಯೋದಲ್ಲಿ ಕಾಣುತ್ತದೆ. ಈ ಭೀಕರ ವೀಡಿಯೋದಲ್ಲಿ ನಾಯಿ ಮರಿಗಳು ಭಯದಿಂದ ಬೊಬ್ಬಿಡುವುದು ಹಾಗೂ ಒಂದು ನಾಯಿ ಮರಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸುವ ಹೃದಯ ವಿದ್ರಾವಕ ದೃಶ್ಯ ಕಂಡು ಬರುತ್ತದೆ.
ಇನ್ನೊಂದು ವೀಡಿಯೋದಲ್ಲಿ ವ್ಯಕ್ತಿಯೊಬ್ಬ ನಾಯಿಯೊಂದರ ಮೇಲೆ ಗುರಿಯುಟ್ಟು ಗುಂಡು ಹಾರಿಸಿ ಸಾಯಿಸುವ ದೃಶ್ಯವಿದೆ.
ಎರಡು ವಾರಗಳ ಹಿಂದೆ ಚೆನ್ನೈ ಯಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ನಾಯಿಯೊಂದನ್ನು ಟೆರೇಸಿನಿಂದ ಕೆಳಗೆ ಬಿಸಾಡುವ ವೀಡಿಯೊ ವೈರಲ್ ಆಗಿತ್ತು. ಬಳಿಕ ಅವರನ್ನು ಬಂಧಿಸಲಾಗಿತ್ತು.
Next Story







