ಅಣೆಕಟ್ಟು ನೀರನ್ನು ಕೂಡಲೇ ನಾಲೆಗೆ ಬಿಡಲಿ : ಹೆಚ್.ಡಿ. ರೇವಣ್ಣ ಒತ್ತಾಯ

ಹಾಸನ,ಜು.20: ಹೇಮಾವತಿ ಅಣೆಕಟ್ಟು ನೀರನ್ನು ಕೂಡಲೇ ನಾಲೆಗೆ ಬಿಡುವಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅನೇಕ ಕಡೆ ದನ-ಕರುಗಳಿಗೆ ಕುಡಿಯಲು ನೀರು ಇಲ್ಲದೆ ಪರಿತಪಿಸುತ್ತಿದ್ದಾರೆ. ರೈತನ ಬೆಳೆಗೂ ಕೂಡ ನೀರು ಅವಶ್ಯಕವಾಗಿದೆ. ತಕ್ಷಣ ನೀರಾವರಿ ಸಲಹ ಸಮಿತಿ ಸಭೆ ಕರೆದು ಅಧಿಕಾರಿಗಳು ನೀರು ಬಿಡಲು ಮುಂದಾಗುವಂತೆ ಸಲಹೆ ನೀಡಿದರು. ತಮಿಳುನಾಡಿಗೆ ನೀರು ಬಿಡಲು ಹೊಳೆಗೆ ನೀರು ಹರಿಸುತ್ತಿದ್ದಾರೆ. ಮೊದಲು ನಿಲ್ಲಿಸಿ ನಾಲೆಗೆ ನೀರು ಬಿಡಬೇಕು ಎಂದು ಸರ್ಕಾರಕ್ಕೆ ಮತ್ತು ಮುಖ್ಯ ಇಂಜಿನಿಯರ್‌ಗಳಿಗೆ ಸಲಹೆ ನೀಡಿದರು.ಅನೇಕ ಕಡೆ ಮನುಷ್ಯರು ಕೂಡ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದರು. ಕೆ.ಎಸ್.ಆರ್.ಟಿ.ಸಿ.ಗೆ ಹಳೆ ಬಸ್‌ನಿಲ್ದಾಣ ನಿರ್ಮಿಸಲು ನಗರಸಭೆಯೇ ನೀಡಿದೆ. ಹೊಸ ಬಸ್ ನಿಲ್ದಾಣದಂತೆ ಇಲಾಖೆ ಹೋದರೇ ನಾವುಗಳು ನ್ಯಾಯಾಲಯಕ್ಕೆ ಹೋಗಿ ಜಾಗವನ್ನು ವಾಪಸ್ ಪಡೆಯುವುದಾಗಿ ಎಚ್ಚರಿಸಿದರು. ಹೊಸ ಬಸ್‌ನಿಲ್ದಾಣದ ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು. ನಗರಸಭೆ ಜೊತೆ ಕುಳಿತು ಚರ್ಚಿಸಿ ಸರಿಪಡಿಸಿಕೊಳ್ಳಲು ಸಲಹೆ ನೀಡಿದರು.
ಅನೇಕ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಹೆದರಿಸಿ ವಸೂಲಿಯಲ್ಲಿ ತೊಡಗಿದ್ದಾರೆ. ಅದರಂತೆ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡು ಈಗ ಕುಟುಂಬ ಬೀದಿಗೆ ಬಂದಿದೆ ಎಂದರು. ಮೊದಲು ಸರ್ಕಾರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಅವಕಾಶ ಕೊಡಬಾರದು ಎಂದು ಸಲಹೆ ನೀಡಿದರು. ಯಾರಾದರೂ ಅಧಿಕಾರಿ ತಪ್ಪು ಮಾಡಿದ್ದರೇ ಅವರ ವಿರುದ್ಧ ಹೇಳಿಕೆ ಕೊಡುವ ಮೊದಲು ಸಾಕ್ಷಿ ಸಮೇತ ಬರಬೇಕು. ಅಧಿಕಾರಿಗೆ ಬೆದರಿಸಿ ಹಣ ಕೆಳಿ ಸಿಗದಿದ್ದಾಗ ಇಂತಹ ಕೆಲಸಕ್ಕೆ ಕೈಹಾಕುತ್ತಿದ್ದಾರೆ ಎಂದು ದೂರಿದ ಅವರು ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇಂತಹ ತಪ್ಪಿನಿಂದಲೇ ನಿರಪರಾಧಿ ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆಯಂತಹ ದಾರಿಗೆ ಹಿಡಿಯುತ್ತಿರುವುದಾಗಿ ಆತಂಕವ್ಯಕ್ತಪಡಿಸಿದರು. ಮುಂದಾದರು ಆಧಾರ ಇಟ್ಟುಕೊಂಡು ಪತ್ರಿಕೆಗೆ ಹೇಳಿಕೆ ಕೊಡುವಂತೆ ಮನವಿ ಮಾಡಿದರು. ರಾಜ್ಯದಲ್ಲಿ ಏನೆ ಘಟನೆ ನಡೆದರೂ ರಾಜಕಾರಣಕ್ಕಾಗಿ ಆಗುತ್ತಿದ್ದು, ಇದರಲ್ಲಿ ಹಿರಿಯ ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ಇವರಿಗೆ ರಕ್ಷಣೆ ಅಗತ್ಯವಾಗಿದೆ ಎಂದ ಅವರು ಯಾರ ಪರ ಹೇಳುತ್ತಿಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು. ಬೇಕಾದರೇ ಅಪ್ರಮಾಣಿಕರ ಬಗ್ಗೆ ಹೋರಾಟ ಮತ್ತು ಹೇಳಿಕೆ ನೀಡಲಿ. ಆದರೇ ಬ್ಲಾಕ್‌ಮೆಲ್ ಮಾಡುವವರ ಬಗ್ಗೆ ನಿಗಾವಹಿಸುವಂತೆ ಆಕ್ರೋಶವಾಗಿ ಹೇಳಿದರು.
ಜಿಲ್ಲೆ ಒಳಗೆ ಎಸಿಬಿ ನಿಗ್ರಹ ದಳ ಏನು ಕೆಲಸ ಮಾಡುತ್ತಿದೆ. ದೂರು ನೀಡದ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಹೆಚ್.ಎಸ್. ಪ್ರಕಾಶ್ ಉಪಸ್ಥಿತರಿದ್ದರು.







