Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೋದಿ ಸರಕಾರದಿಂದಾಗಿ ಹಸುವಿನ ಮೂತ್ರ ಈಗ...

ಮೋದಿ ಸರಕಾರದಿಂದಾಗಿ ಹಸುವಿನ ಮೂತ್ರ ಈಗ ಬಂಗಾರ!

ಅನಿಂದ್ಯಾ ಉಪಾಧ್ಯಾಯಅನಿಂದ್ಯಾ ಉಪಾಧ್ಯಾಯ20 July 2016 10:29 PM IST
share
ಮೋದಿ ಸರಕಾರದಿಂದಾಗಿ ಹಸುವಿನ ಮೂತ್ರ ಈಗ ಬಂಗಾರ!

ಉತ್ತರ ಭಾರತದ ತನ್ನ ಹಟ್ಟಿಯಲ್ಲಿರುವ ಎರಡು ಡಜನ್ ಹಸುಗಳ ಹಿಂದೆ ಒಂದು ದೊಡ್ಡ ಅಲ್ಯುಮಿನಿಯಂ ಪಾತ್ರೆ ಹಿಡಿದು ಕೊಂಡು ಸುಶೀಲಾ ಕುಮಾರಿ ಅತ್ತಿಂದಿತ್ತ ಓಡಾಡುತ್ತಿದ್ದಾರೆ, ಒಂದು ಅಮೂಲ್ಯ ವಸ್ತುವನ್ನು ಸಂಗ್ರಹಿಸುವ ಸಲುವಾಗಿ-ಅದೇ ಗೋಮೂತ್ರ.

 ಬಟ್ಟಿ ಇಳಿಸಲ್ಪಟ್ಟ ಗೋಮೂತ್ರವು ಸದ್ಯ ಭಾರತದಲ್ಲಿ ಹಾಲಿನಷ್ಟೇ ಬೆಲೆಯನ್ನು ಹೊಂದಿದೆ, ಆದರೆ ಅದನ್ನು ಸಂಗ್ರಹಿಸುವುದು ಸುಲಭದ ಕೆಲಸವಲ್ಲ. ದಿಲ್ಲಿಯಿಂದ 80ಕಿ.ಮೀ ದೂರದಲ್ಲಿರುವ ಬುಲಂದ್‌ಶೆಹೆರ್‌ನಲ್ಲಿರುವ ತಮ್ಮ ಹಟ್ಟಿಯಲ್ಲಿ ಕುಮಾರಿ ಮತ್ತು ಇಬ್ಬರು ಕೆಲಸಗಾರರು ಇಡೀ ದಿನ ಕೆಲಸ ಮಾಡಿ ಹಸುಗಳು ದಿನವಿಡೀ ವಿಸರ್ಜಿಸುವ 15ರಿಂದ 20 ಲೀಟರ್‌ನಷ್ಟು ಮೂತ್ರದಲ್ಲಿ ಕೇವಲ ಅರ್ಧದಷ್ಟು ಮಾತ್ರ ಸಂಗ್ರಹಿಸಲು ಶಕ್ತರಾಗುತ್ತಾರೆ. ಹಿಂದೂಗಳು ಪವಿತ್ರ ಎಂದು ಪರಿಗಣಿಸುವ ಭಾರತದ ಸ್ವದೇಶಿ ತಳಿಗಳಿಂದ ಪಡೆಯಲಾಗುವ ಮೂತ್ರ ಅತ್ಯಂತ ಬೆಲೆಬಾಳುವಂತಾಗಿದೆ. ಇದಕ್ಕೆ ಬಹುದೊಡ್ಡ ಮಟ್ಟದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಯಾಕೆಂದರೆ ಅವರು ಕಳೆದ ಎರಡು ವರ್ಷಗಳಲ್ಲಿ ಅವರು ಹಾಲು ನೀಡುವ ಪಶುಗಳನ್ನು ರಕ್ಷಿಸಲು ಮತ್ತು ಅವುಗಳ ತ್ಯಾಜ್ಯದಿಂದ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರ ಸರಕಾರ ಗೋಶಾಲೆಗಳಿಗೆ ರೂ. 5.8 ಬಿಲಿಯನ್ ಖರ್ಚು ಮಾಡಿದೆ, ಬೀಫ್ ಸೇವನೆ ಮೇಲಿನ ನಿಷೇಧವನ್ನು ತೀವ್ರಗೊಳಿಸಿದೆ ಮತ್ತು ಬಾಂಗ್ಲಾದೇಶಕ್ಕೆ ಅಕ್ರಮ ಪಶು ಸಾಗಾಟವನ್ನು ತಡೆಯಲು ಕ್ರಮಗಳನ್ನು ಕೈಗೊಂಡಿದೆ.
ಎರಡು ಹಿಂದೂ ಸಂಘಟನೆಗಳಿಂದ ಬೆಂಬಲ ಪಡೆದಿರುವ ನಾಗ್‌ಪುರದ ಗೋ ಆಧಾರಿತ ಸಂಶೋಧನಾ ಸಂಸ್ಥೆ, ಗೋ-ವಿಜ್ಞಾನ ಅನುಸಂಧಾನ ಕೇಂದ್ರದ ಮುಖ್ಯ ಸಂಘಟಕರಾಗಿರುವ ಸುನೀಲ್ ಮನ್ಸಿಂಗ್ಕಾ ಪ್ರಕಾರ ಗೋಮೂತ್ರದಿಂದ ಸುಮಾರು ಮೂವತ್ತು ಔಷಧಗಳನ್ನು ಮನೆಯಲ್ಲೇ ತಯಾರಿಸಬಹುದು. ‘‘ಈ ಸ್ಪರ್ಶಮಣಿಯನ್ನು ಸಾಮಾನ್ಯ ಪ್ರಜೆಗಳಿಗೆ ತಲುಪಿಸುವುದು ನಮ್ಮ ಪರಮೋಚ್ಛ ಆಕಾಂಕ್ಷೆಯಾಗಿದೆ’’ ಎಂದವರು ಹೇಳುತ್ತಾರೆ.

ಉತ್ತರ ಪ್ರದೇಶದ ಬುಲಂದ್‌ಶೆಹೆರ್‌ನ ಗೋಹಟ್ಟಿಯಲ್ಲಿ ಕುಮಾರಿ ತಾನು ಸಂಗ್ರಹಿಸಿದ ದ್ರವ ಬಂಗಾರದ ಒಂದು ಬಿಂದು ಕೂಡಾ ನೆಲದ ಮೇಲೆ ಬೀಳದಂತೆ ಎಚ್ಚರಿಕೆವಹಿಸುತ್ತಾಳೆ. ‘‘ಅತ್ಯಂತ ಕಷ್ಟಕರ ಅಂಶವೆಂದರೆ ಗೋಮೂತ್ರವನ್ನು ಸಂಗ್ರಹಿಸುವುದು. ಯಾಕೆಂದರೆ ಅದು ಯಾವಾಗ ಮೂತ್ರ ವಿಸರ್ಜಿಸುತ್ತದೆ ಎಂಬುದು ನಮಗೆ ತಾನೇ ಹೇಗೆ ತಿಳಿಯಬೇಕು? ಎಂದು ಹೇಳುತ್ತಾರೆ ವಿಕಾಸ್ ಚಂದ್ರ ಗುಪ್ತಾ. ಇವರು ಕಳೆದ ವರ್ಷವಷ್ಟೇ ಗೋಮೂತ್ರದ ವ್ಯವಹಾರ ಆರಂಭಿಸುವ ಸಲುವಾಗಿ ಬುಲಂದ್‌ಶೆಹೆರ್ ಗೋಶಾಲೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಸಿಬ್ಬಂದಿ ಈ ಪಶುಗಳ ಚಲನವಲನದಿಂದ ಸುಳಿವನ್ನು ಪಡೆದುಕೊಳ್ಳುತ್ತಾರೆ ಮತ್ತು ಮೂತ್ರ ವಿಸರ್ಜಿಸುವ ರೀತಿಯನ್ನು ತಿಳಿಯಲು ಪ್ರಯತ್ನಿಸುತ್ತಾರೆ’’ ಎಂದವರು ಹೇಳುತ್ತಾರೆ. ತೀಕ್ಷ್ಣವಾದ ವಾಸನೆಯುಳ್ಳ ಮಾಲನ್ನು ಸಂಗ್ರಹಿಸಿ ಅದರಲ್ಲಿರುವ ಕಲ್ಮಶಗಳನ್ನು ತೆಗೆಯುವ ಸಲುವಾಗಿ ಶುದ್ಧೀಕರಣ ಯಂತ್ರದೊಳಗೆ ಹಾಕಲಾಗುತ್ತದೆ. ಈ ಶುದ್ಧೀಕರಣಗೊಂಡ ಮೂತ್ರವನ್ನು ಪೌಡರ್ ಅಥವಾ ದ್ರವದ ರೂಪದಲ್ಲಿ ಸಂಗ್ರಹಿಸಿ ಸಾಂಪ್ರದಾಯಿಕ ಔಷಧ ಅಥವಾ ಗಿಡಮೂಲಿಕೆ ಔಷಧಿಗಳನ್ನು ತಯಾರಿಸುವವರಿಗೆ ಮಾರಲಾಗುತ್ತದೆ. ಮೋದಿಯ ಹಿಂದೂ ಪ್ರಾಬಲ್ಯದ ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಮತ್ತು ಭಾರತದ ಮೇಲ್ಮನೆಯ ಸದಸ್ಯರಾಗಿರುವ ಸುಬ್ರಮಣಿಯನ್ ಸ್ವಾಮಿ ಮಾತ್ರ ಗೋರಕ್ಷಣೆಯ ಬಗ್ಗೆ ನಡೆಸಲಾಗುತ್ತಿರುವ ಸದ್ಯದ ಪ್ರಯತ್ನಗಳ ಬಗ್ಗೆ ಸಂತುಷ್ಟರಾಗಿಲ್ಲ. ಹಾರ್ವರ್ಡ್‌ನಲ್ಲಿ ಶಿಕ್ಷಣ ಪಡೆದಿರುವ ಈ ಹಿಂದೂ ಅರ್ಥಶಾಸ್ತ್ರಜ್ಞ ಭಾರತ ಜಗತ್ತಿನಲ್ಲೇ ಅತ್ಯಂತ ದೊಡ್ಡ ರಫ್ತುಗಾರನಾಗಿರುವ ಎಮ್ಮೆ ಮಾಂಸದ ಮೇಲಿರುವ ಡಜನ್‌ಗಟ್ಟಲೆ ರಫ್ತು ಸಹಾಯಧನವನ್ನು ತೆಗೆದುಹಾಕುವಂತೆ ಸೂಚಿಸುತ್ತಾರೆ. ‘‘ಈ ಬಗ್ಗೆ ಇರುವ ಕಾನೂನಿನಲ್ಲಿನ ಲೋಪಗಳನ್ನೇ ಬಳಸಿ ಹಸುಗಳ ಮಾಂಸವನ್ನು ಕೋಣಗಳ ಮಾಂಸವೆಂದು ವಂಚಿಸಲು ಸಾಧ್ಯವಿದೆ’’’ ಎಂದವರು ಹೇಳುತ್ತಾರೆ.

ಗೋಮೂತ್ರವನ್ನು ಖರೀದಿಸುವ ಒಂದು ಆಸಕ್ತಿದಾಯಕ ಗ್ರಾಹಕ ಎಂದರೆ ಯೋಗಗುರು ಬಾಬಾ ರಾಮ್‌ದೇವ್. ಇವರ ಈಗಷ್ಟೇ ಮೇಲೇಳುತ್ತಿರುವ ಗ್ರಾಹಕ ದಿನಬಳಕೆಯ ವಸ್ತುಗಳ ಸಾಮ್ರಾಜ್ಯ ಕೋಲ್ಗೇಟ್ ಪಾಲ್ಮೊಲಿವ್, ಯೂನಿಲಿವರ್ ಮತ್ತು ನೆಸ್ಲೆ ಮುಂತಾದವುಗಳ ಸ್ಥಳೀಯ ಘಟಕಗಳಿಗೆ ಸವಾಲೊಡ್ಡುತ್ತಿವೆ. ಸದಾ ಕೇಸರಿ ಲುಂಗಿ ಧರಿಸುವ ಯೋಗ ಗುರು ಮತ್ತು ಭ್ರಷ್ಟಾಚಾರ ವಿರೋಧಿ ಚಳವಳಿಗಾರ ತನ್ನ ಪತಂಜಲಿ ಆಯುರ್ವೇದ ನಿಯಮಿತ ಸಂಸ್ಥೆಯಲ್ಲಿ ತಯಾರಾಗುವ ಸಾಬೂನು, ಸೋಂಕು ನಿವಾರಕಗಳು ಮತ್ತು ಸಿದ್ಧೌಷಧಗಳ ತಯಾರಿಕೆಯಲ್ಲಿ ಬಳಸಲಾಗುವ ಕಚ್ಚಾವಸ್ತುವಿಗೆ ಪ್ರತಿದಿನ ರೂ. 1,50,000 ವೆಚ್ಚ ಮಾಡುತ್ತಾರೆ. ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಪ್ರಕಾರ ‘‘ಪತಂಜಲಿ ಅತ್ಯಂತ ಹೆಚ್ಚು ಖರೀದಿಸಲ್ಪಡುವ ವಸ್ತುವೆಂದರೆ ಗೋಮೂತ್ರ ಆಧಾರಿತ ನೆಲಸ್ವಚ್ಛಗೊಳಿಸುವ ಗೌನೈಲ್. ನಾವು ಪ್ರತಿದಿನ 20 ಟನ್ ಗೌನೈಲ್ ತಯಾರಿಸುತ್ತೇವೆ ಆದರೂ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ’’ ಎಂದವರು ಫೋನ್ ಮೂಲಕ ನಡೆಸಿದ ಸಂಭಾಷಣೆಯಲ್ಲಿ ತಿಳಿಸುತ್ತಾರೆ.

ಆಯುರ್ವೇದದ ಪ್ರತಿಪಾದಕರು ಈ ಪವಿತ್ರ ಚಿಕಿತ್ಸಾ ಕ್ರಮ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ಅಭಿವೃದ್ಧಿಗೊಂಡಿತು ಎಂದು ಹೇಳುತ್ತಾರೆ. ಭಾರತೀಯ ಹಸುಗಳ ಮೂತ್ರ ವಿಶೇಷವಾದ ಔಷಧೀಯ ಗುಣವನ್ನು ಮತ್ತು ಆರೋಗ್ಯ ಲಾಭವನ್ನು ಹೊಂದಿದೆ ಎನ್ನುತ್ತಾರೆ. ಕಳೆದ ಜೂನ್‌ನಲ್ಲಿ ಸುಮಾರು 400 ತಳಿಗಳನ್ನು ಪರೀಕ್ಷಿಸಿದ ನಂತರ ಮೋದಿಯವರ ಮೂಲಸ್ಥಾನವಾಗಿರುವ ಗುಜರಾತ್‌ನ ಜುನಾಘಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಗಿರ್ ಜಾತಿಯ ಹಸುಗಳ ಮೂತ್ರದಲ್ಲಿ ಬಂಗಾರದ ಅಂಶಗಳು ಪತ್ತೆಯಾಗಿವೆ ಎಂದು ಹೇಳಿದ್ದರು!. ಹಸುವನ್ನು ಪೂಜಿಸುವ ಭಾರತದಲ್ಲಿ ಅತಿಯಾದ ರಕ್ಷಣೆ ಮತ್ತು ಪಾವಿತ್ರ್ಯತೆಯ ಕಾರಣದಿಂದ ಗೂನು ಬೆನ್ನಿನ ನೇರ ಕಿವಿಗಳ ಈ ಹಸುಗಳು ಅದರ ಹಿಂದೂ ಸಿದ್ಧಾಂತದ ಕಾರಣದಿಂದಾಗಿ ಅನೇಕ ಬಾರಿ ಅಂತರ್ಧಮೀಯ ಸಂಘರ್ಷಗಳಿಗೆ ಕಾರಣವಾಗಿವೆ. ಕಳೆದ ವರ್ಷ ಕನಿಷ್ಠ ಮೂರು ಬಾರಿ ಮಾರಣಾಂತಿಕವಾಗಿ ಪರಿಣಮಿಸಿದ ಬೀಫ್ ಪಹರೆಯ ಇತ್ತೀಚಿನ ಪ್ರಕರಣದಲ್ಲಿ ಹರ್ಯಾಣದಲ್ಲಿ ಬೀಫ್ ಸಾಗಾಟ ಮಾಡಿದರು ಎಂಬ ಕಾರಣಕ್ಕೆ ಇಬ್ಬರು ಯುವಕರಿಗೆ ಗೋರಕ್ಷಣಾ ಸಂಘದ ಸದಸ್ಯರು ಸೆಗಣಿ ತಿನ್ನಿಸಿದ್ದರು.

ಅನುತ್ಪಾದಕ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದನ್ನು ತಪ್ಪಿಸಲು ಸರಕಾರವು 2014ರ ಮಧ್ಯಭಾಗದಲ್ಲಿ ‘ರಾಷ್ಟ್ರೀಯ ಗೋಕುಲ ಮಿಶನ್’ ಎಂಬ ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಯೋಜನೆಯಡಿ ಅನಾರೋಗ್ಯಪೀಡಿತ ಮತ್ತು ವಯಸ್ಸಾದ ಹಸುಗಳಿಗೆ ವಸತಿಗಳನ್ನು ನಿರ್ಮಿಸುವ ಮತ್ತು ಅದಕ್ಕಾಗಿ ಹಸುಗಳ ತ್ಯಾಜ್ಯದಿಂದ ಸಂಗ್ರಹವಾಗುವ ಹಣವನ್ನು ವೆಚ್ಚ ಮಾಡುವ ಯೋಜನೆ ಹಾಕಲಾಗಿತ್ತು. ಮೋದಿ ಸರಕಾರ ಮೇ ತಿಂಗಳಲ್ಲಿ ಗೋಶಾಲೆಗಳ ಉದ್ಘಾಟನೆಯ ಅಂಗವಾಗಿ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿತು. ಇದರಲ್ಲಿ ಮೋದಿ ಸಂಪುಟದ ಇಬ್ಬರು ಸಚಿವರು ಅಷ್ಟೊಂದು ರುಚಿಕರವಲ್ಲದ ಹಸುವಿನ ಉಪಉತ್ಪನ್ನಗಳನ್ನು ಖರೀದಿಸುವಂತೆ ಅಲ್ಲಿಗೆ ಆಗಮಿಸಿದ್ದ ಸಭಿಕರನ್ನು ಪ್ರೋತ್ಸಾಹಿಸಿದ್ದರು. ರಾಜಸ್ಥಾನ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಸು ವ್ಯವಹಾರಗಳ ಸಚಿವಾಲಯವನ್ನೇ ಸೃಷ್ಟಿಸಿತು. ಇದು, ಕೆಲವು ಟೀಕಾಕಾರರ ಪ್ರಕಾರ ದೇಶದ ಎರಡು ಮಿಲಿಯನ್ ವಸತಿರಹಿತ ಪ್ರಜೆಗಳಿಗಿಂತ ಹೆಚ್ಚು ಹಕ್ಕು ಹೊಂದಿದೆ.

ಮೂತ್ರಗಳಲ್ಲಿ ಅಪಾಯಕಾರಿ ರೋಗಕಾರಕಗಳು?
ಭಾರತದಲ್ಲಿ ತರಬೇತಿ ಪಡೆದು ಸದ್ಯ ಸಿಡ್ನಿಯ ವಿಶ್ವವಿದ್ಯಾಲಯದಲ್ಲಿ ಪಶು ಜೈವಿಕಶಾಸ್ತ್ರ ಮತ್ತು ಸೋಂಕುಶಾಸ್ತ್ರದ ಉಪನ್ಯಾಸಕರಾಗಿರುವ ಪಶುವೈದ್ಯ ನವನೀತ್ ದಂಡ್ ಪ್ರಕಾರ ಭಾರತದಲ್ಲಿ ಪ್ರಚಲಿತದಲ್ಲಿರುವ ಮೂರು ರೋಗಗಳು ಬಹುಶಃ ಸೋಂಕುಪೀಡಿತ ಹಸುಗಳ ಮೂತ್ರದ ಮೂಲಕ ಜನರಿಗೆ ಹರಡಿದೆ, ಅವುಗಳೆಂದರೆ; ಲೆಪ್ಟೊಸ್ಪೈರೋಸಿಸ್, ಇದರಿಂದ ಮೆದುಳಿನ ಉರಿತ ಅಥವಾ ಯಕೃತ್ತು ಕೂಡಾ ಘಾಸಿಗೊಳ್ಳಬಹುದು. ಆರ್ತ್ರಿಟಿಸ್ ಮತ್ತು ಕ್ಯೂ ಫಿವರ್, ಇದರಿಂದ ನ್ಯೂಮೋನಿಯಾ ಮತ್ತು ಹೃದಯ ಸಂಬಂಧಿ ಕಾಯಿಲೆ ಬರಬಹುದು.
ಆದರೆ ಇದು ಜೈನ್ ಗೋಮೂತ್ರ ಚಿಕಿತ್ಸಾ ಆರೋಗ್ಯ ಕೇಂದ್ರಕ್ಕೆ ಯಾವುದೇ ರೀತಿಯಲ್ಲಿ ಬಾಧಿಸುವುದಿಲ್ಲ. ಈ ಕೇಂದ್ರ ಪ್ರತೀ ತಿಂಗಳು ಡಜನ್‌ಗಟ್ಟಲೆ ಗೋಶಾಲೆಗಳಿಂದ 25,000 ಲೀಟರ್ ಗೋಮೂತ್ರವನ್ನು ಖರೀದಿಸುತ್ತದೆ. ಇಂದೋರ್‌ನಲ್ಲಿ ಹದಿನೈದು ವೈದ್ಯರ ಈ ಕೇಂದ್ರವನ್ನು ಸ್ಥಾಪಿಸಿದ ವೀರೇಂದ್ರ ಕುಮಾರ್ ಜೈನ್ ಹೇಳುವಂತೆ ಕಳೆದ ಎರಡು ದಶಕಗಳಲ್ಲಿ ಕ್ಯಾನ್ಸರ್‌ನಿಂದ ಹಿಡಿದು ಮಧುಮೇಹದ ವರೆಗೆ 1.2 ಮಿಲಿಯನ್‌ಗೂ ಅಧಿಕ ರೋಗಿಗಳಿಗೆ ಅವರು ಗೋಮೂತ್ರ ಆಧಾರಿತ ಔಷಧವನ್ನು ನೀಡಿದ್ದಾರೆ.

ಅವರ ಸಿಬ್ಬಂದಿ ಪ್ರತಿದಿನ 4,000 ರೋಗಿಗಳನ್ನು ಆನ್‌ಲೈನ್ ಮೂಲಕ ವಿಚಾರಿಸುತ್ತಾರೆ ಎನ್ನುತ್ತಾರೆ ಜೈನ್. ಅವರ ಗ್ರಾಹಕರು ಇ-ಕಾಮರ್ಸ್ ಜಾಲತಾಣಗಳಾದ ಅಮೆಜಾನ್ ಮುಂತಾದವುಗಳ ಮೂಲಕವೂ ಉತ್ಪನ್ನಗಳನ್ನು ಪಡೆಯಬಹುದಾಗಿದೆ. ಅವರ ಅಂದಾಜಿನ ಪ್ರಕಾರ ಗೋ ಸಿಬ್ಬಂದಿ ಹಸುಗಳ ತ್ಯಾಜ್ಯವನ್ನು ಮಾರುವ ಮೂಲಕ ತಿಂಗಳಿಗೆ ರೂ. 1,200ನ್ನು ಗಳಿಸಬಹುದು ಮತ್ತು ಇದು ಆ ಜಾನುವಾರನ್ನು ಸಾಕಲು ಸಾಕಾಗುತ್ತದೆ. ಪತಂಜಲಿಯ ಬಾಲಕೃಷ್ಣ ಪ್ರಕಾರ ಮೂತ್ರ ಶುದ್ಧೀಕರಣ ಘಟಕಗಳು ಲೀಟರ್‌ಗೆ ರೂ. 80ರಿಂದ 100ಕ್ಕೆ ಗೋಮೂತ್ರ ಮಾರಾಟ ಮಾಡುತ್ತವೆ. ಆದರೆ ಮಾಜಿ ಇಂಜಿನಿಯರ್ ಆಗಿರುವ ಸದ್ಯ ಮುನ್ನೂರು ಹಸುಗಳುಳ್ಳ ತನ್ನ ಬಿನ್ಸಾರ್ ಫಾರ್ಮ್ ಮೂಲಕ ದಿನಕ್ಕೆ 2,200 ಲೀಟರ್ ಹಾಲು ಉತ್ಪಾದಿಸುವ ಪಂಕಜ್ ನವಾನಿ ಪ್ರಕಾರ ಗೋಮೂತ್ರಕ್ಕೆ ಸಿಗುವ ಬೆಲೆಯು ಅನುತ್ಪಾದಕ ಪಶುಗಳನ್ನು ಅದರ ಕೊನೆಯ ದಿನಗಳವರೆಗೆ ಸಾಕಾಗುವಷ್ಟು ಇಲ್ಲ. ಒಂದು ಹಸುವಿನ ಆಯುಷ್ಯ 15 ವರ್ಷಗಳು ಆದರೆ ಬಹುತೇಕ ಹಸುಗಳು ಒಂದು ವರ್ಷ ಮೊದಲೇ ಹಾಲು ನೀಡುವುದನ್ನು ನಿಲ್ಲಿಸುತ್ತವೆ. ನವಾನಿಯವರ ಹಸುಗಳು ಈಗ ಸಣ್ಣವಯಸ್ಸಿನವುಗಳಾಗಿದ್ದು ಅವರು ಇನ್ನಷ್ಟೇ ಅನುತ್ಪಾದಕ ಹಸುಗಳನ್ನು ಏನು ಮಾಡುವುದು ಎಂಬ ಸವಾಲನ್ನು ಎದುರಿಸಬೇಕಿದೆ. ಸಾಮಾನ್ಯವಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚು ತಾರ್ಕಿಕ ಯೋಜನೆಯನ್ನು ರೂಪಿಸುವ ಅಗತ್ಯವಿದೆ ಎಂದವರು ಹೇಳುತ್ತಾರೆ.

share
ಅನಿಂದ್ಯಾ ಉಪಾಧ್ಯಾಯ
ಅನಿಂದ್ಯಾ ಉಪಾಧ್ಯಾಯ
Next Story
X