Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶಿಕ್ಷಣಾಕಾಂಕ್ಷಿ ಯುವಜನರ ಹೆಚ್ಚಳದಿಂದ...

ಶಿಕ್ಷಣಾಕಾಂಕ್ಷಿ ಯುವಜನರ ಹೆಚ್ಚಳದಿಂದ ಭಾರತಕ್ಕೆ ಭವಿಷ್ಯ

ಅಮಿತ್ ದಾಸ್ ಗುಪ್ತಾಅಮಿತ್ ದಾಸ್ ಗುಪ್ತಾ20 July 2016 10:32 PM IST
share
ಶಿಕ್ಷಣಾಕಾಂಕ್ಷಿ ಯುವಜನರ ಹೆಚ್ಚಳದಿಂದ ಭಾರತಕ್ಕೆ ಭವಿಷ್ಯ

2014ರಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದಾಗ, ಆಸ್ಟ್ರೇಲಿಯಾ ಜೊತೆಗಿನ ಭಾರತದ ಸಂಬಂಧವು ನಮ್ಮ ಪರಸ್ಪರ ಹಂಚಲ್ಪಟ್ಟ ಮೌಲ್ಯ ಮತ್ತು ಆಕಾಂಕ್ಷೆಗಳಿಂದ ಸೃಷ್ಟಿಯಾದಂತಹ ಒಂದು ಸ್ವಾಭಾವಿಕ ಸಂಬಂಧವಾಗಿದೆ ಎಂದು ಬಣ್ಣಿಸಿದ್ದರು. ಅವರ ಭೇಟಿಯು ಮೂವತ್ತು ವರ್ಷಗಳಿಂದ ಕಡೆಗಣಿಸಲ್ಪಟ್ಟಲಾಗಿದ್ದ ದ್ವಿಪಕ್ಷೀಯ ಸಂಬಂಧಕ್ಕೆ ಮರುಜೀವ ನೀಡಿತ್ತು.

ಆಸ್ಟ್ರೇಲಿಯಾವು ಭಾರತದ ಪ್ರತಿಯೊಂದು ರಾಷ್ಟ್ರೀಯ ಪ್ರಾಮುಖ್ಯತೆಗಳ ಪ್ರಮುಖ ಜೊತೆಗಾರನಾಗಿದೆ ಎಂದು ಹೇಳಿದಾಗ ಅವರು ಮೂರು ‘ಸಿ’ಗಳನ್ನು (ಕ್ರಿಕೆಟ್, ಕಾಮನ್‌ವೆಲ್ತ್ ಮತ್ತು ಕರಿ(ಸಾರು)) ಮೂರು ‘ಇ’ಗಳಿಂದ (ಇಕಾನಮಿ, ಎನರ್ಜಿ ಮತ್ತು ಎಜುಕೇಶನ್) ಬದಲಾಯಿಸಿದ್ದರು. ಮೋದಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಾಗ ಅವರ ಸರಕಾರ ಆರ್ಥಿಕ ಮತ್ತು ಸಾಮಾಜಿಕವಾಗಿ ಬಹಳ ದೊಡ್ಡ ಅಭಿವೃದ್ಧಿ ಸವಾಲುಗಳನ್ನು ಎದುರಿಸಿತ್ತು. ಚುನಾವಣೆಯ ಸಮಯದಲ್ಲಿ ಮೋದಿ ಮಾಡಿದ ಅಚ್ಛೇ ದಿನ್ ಅಥವಾ ಒಳ್ಳೆಯ ದಿನಗಳು ಬಹಳ ಶೀಘ್ರವಾಗಿ ಬರಲಿದೆ ಎಂಬ ನಂಬಿಕೆ ಈ ಸವಾಲನ್ನು ಮತ್ತಷ್ಟು ಕಠಿಣಗೊಳಿಸಿತ್ತು. ಅಂತಹ ಒಂದು ದೊಡ್ಡ ರೀತಿಯ ಸ್ಪಷ್ಟವಾದ ಬದಲಾವಣೆಯನ್ನು ತರುವಲ್ಲಿ ಇರುವ ಭಾರತದ ಭೌಗೋಳಿಕ ಮತ್ತು ಇತರ ಮಿತಿಗಳ ಬಗ್ಗೆ ಮೋದಿಗೆ ಚೆನ್ನಾಗಿಯೇ ಅರಿವಿತ್ತು. ಹಾಗಾಗಿ ಅವರು ಜಾಗತಿಕ ಸಮುದಾಯದತ್ತ ಮುಖ ಮಾಡಿದರು.

ಮೋದಿ ಆಸ್ಟ್ರೇಲಿಯಾದ ಸಂಸತ್‌ನಲ್ಲಿ ನೀಡಿದ ಹೇಳಿಕೆಯ ಪ್ರಕಾರ, ಜೊತೆಗಾರ ದೇಶಗಳು ವಿಫುಲ ಅವಕಾಶ ಮತ್ತು ದೊಡ್ಡ ಜವಾಬ್ದಾರಿ ಈ ಎರಡೂ ಸಂದರ್ಭಗಳಲ್ಲಿ ಜೊತೆಯಾಗಿರಬೇಕು. ಭಾರತದ ನೀಡುವ ಹಲವು ಅವಕಾಶಗಳಲ್ಲಿ ಶಿಕ್ಷಣ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧ ವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಎಲ್ಲಾ ಅಂಶಗಳನ್ನು ಹೊಂದಿದೆ. ಆದರೆ ಇದಕ್ಕಾಗಿ ಆಸಕ್ತಿರಹಿತ, ಮಿತಿಯುಳ್ಳ ಮತ್ತು ಏಕಪ್ರಕಾರವಾದ ವರ್ತನೆಯ ಮಾನಸಿಕತೆಯಿಂದ ಹೊರಬಂದು ದೃಢ, ಕ್ರಿಯಾಶೀಲ ಮತ್ತು ಮಹತ್ವಾಕಾಂಕ್ಷೆಯ ಮಾನೋಭಾವವನ್ನು ಹೊಂದಬೇಕಾಗುತ್ತದೆ. ಭಾರತದಲ್ಲಿ ವೃದ್ಧಿಸುತ್ತಿರುವ ಸಮಾನ ವಯಸ್ಸಿನ ಜನಸಂಖ್ಯೆ

ಭಾರತವು ಶೀಘ್ರದಲ್ಲೇ ಜನಸಂಖ್ಯೆ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕಲಿದೆ. ಪ್ರಸ್ತುತ ಭಾರತದ ಜನಸಂಖ್ಯೆಯ ಶೇಕಡಾ 50 ಅಥವಾ ಸುಮಾರು 600 ಮಿಲಿಯನ್ ಜನರು 25ಕ್ಕಿಂತ ಒಳಗಿನ ವಯಸ್ಸಿನವರಾಗಿದ್ದಾರೆ. ಇನ್ನು ಐದು ವರ್ಷಗಳ ಒಳಗಾಗಿ ಭಾರತ ಜಗತ್ತಿನಲ್ಲಿ ಅತ್ಯಂತ ಹೆಚ್ಚು ವಯಸ್ಕ ಜನರನ್ನು ಹೊಂದಿರುವ ದೇಶವಾಗಲಿದೆ. ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಿರುವ ಮಧ್ಯಮ ವರ್ಗದ ಜನರ ಸಂಖ್ಯೆ 500 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಜಿಡಿಪಿ ದರವು ಶೇ. 8ನ್ನು ದಾಟುವ ಸೂಚನೆಯಿರುವುದರಿಂದ ಉನ್ನತ ಶಿಕ್ಷಣಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ ಮತ್ತು ಸ್ಟಾರ್ಟ್-ಅಪ್ ಇಂಡಿಯಾ ಮುಂತಾದ ಸುಧಾರಣಾ ಮತ್ತು ಯೋಜನೆಗಳ ಸರಣಿಗಳ ಮೂಲಕ ತನ್ನ ಕಲಾಶಾಸ್ತ್ರದಲ್ಲಿ ಶಿಕ್ಷಣ, ವೃತ್ತಿಪರತೆ ಮತ್ತು ಅನ್ವೇಷಣೆಯನ್ನು ಹರಡುವ ಸಂಸ್ಥೆಗಳ ಜೊತೆ ಜೊತೆಗಾರಿಕೆಗೆ ವಿಫುಲ ಅವಕಾಶಗಳನ್ನು ಒದಗಿಸಿದೆ. ವೃತ್ತಿಪರ ಶಿಕ್ಷಣ ಮತ್ತು ತರಬೇತಿಗಳಿಗೆ ಕೂಡಾ ಬೇಡಿಕೆ ಬಹಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

21ನೆ ಶತಮಾನದಲ್ಲಿ ಭಾರತವು ಗುಣಮಟ್ಟದ ಅಂತಾರಾಷ್ಟ್ರೀಯ ಶಿಕ್ಷಣ ಪೂರೈಕೆದಾರರಿಗೆ ಬಹುದೊಡ್ಡ ಅವಕಾಶವಾಗಿ ಹೊರಹೊಮ್ಮಲಿದೆ. ಭಾರತ ಸರಕಾರವು ಗುಣಮಟ್ಟದ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಅರಿವನ್ನು ಹೊಂದಿದೆ. ಅದರ ಹೊರತಾಗಿ ಭೌಗೋಳಿಕ ಪ್ರತಿಫಲದ ಲಾಭವು ಪೋಲಾಗಬಹುದು ಮತ್ತು ಕುಂಠಿತಗೊಳ್ಳಬಹುದು, ಇದೊಂದು ಭೌಗೋಳಿಕ ಅಧಃಪತನವಾಗಬಹುದು. ನಿರುದ್ಯೋಗಿ ಯುವಪೀಳಿಗೆಯನ್ನು ಸುಲಭವಾಗಿ ಅಪರಾಧಿ ಮತ್ತು ಕಾನೂನು ಬಾಹಿರ ಕಾರ್ಯಗಳನ್ನು ನಡೆಸಲು ಸೆಳೆಯಬಹುದು. ಭಾರತದ ನಿರುದ್ಯೋಗಿಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಸುಶಿಕ್ಷಿತರೇ ಇದ್ದಾರೆ.

ಉನ್ನತ ಶಿಕ್ಷಣಕ್ಕೆ ಹೆಚ್ಚುತ್ತಿರುವ ಬೇಡಿಕೆ

ಭಾರತೀಯ ಕಾರ್ಮಿಕವರ್ಗವು ಜಾಗತಿಕ ದರ್ಜೆ ಮತ್ತು ಆವಿಷ್ಕಾರವನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಇದು ಕೇವಲ 19ನೇ ಶತಮಾನದ ಮಾನಸಿಕತೆಯಿಂದ ಬೇರ್ಪಟ್ಟ ಶಿಕ್ಷಣದಿಂದ ಮಾತ್ರ ಸಾಧಿಸಲು ಸಾಧ್ಯ. ಕೇಂದ್ರ ಸರಕಾರವು ಈ ಸವಾಲನ್ನು ಎದುರಿಸುವ ಅಗತ್ಯತೆಯ ಬಗ್ಗೆ ಅರಿವು ಹೊಂದಿದೆ. 2020ರ ವೇಳೆಗೆ ಭಾರತಕ್ಕೆ 40 ಮಿಲಿಯನ್ ವಿಶ್ವವಿದ್ಯಾನಿಲಯ ಸ್ಥಾನಗಳ, ಅಂದರೆ ಮುಂದಿನ ನಾಲ್ಕು ವರ್ಷಗಳಲ್ಲಿ 14 ಮಿಲಿಯನ್‌ಗಳ ಏರಿಕೆ ಮತ್ತು 500 ಮಿಲಿಯನ್ ನುರಿತ ಕಾರ್ಮಿಕರ ಅಗತ್ಯವಿದೆ. ಅಂತರ್ಜಾಲ ಆಧಾರಿತ ಶಿಕ್ಷಣವು ಈ ಸಮಸ್ಯೆಗೆ ಒಂದಷ್ಟು ಪರಿಹಾರ ಒದಗಿಸಬಹುದಷ್ಟೇ ವಿನಃ ಅದೊಂದೇ ಪರಿಹಾರವಲ್ಲ ಮುಖ್ಯವಾಗಿ ವೃತ್ತಿಪರ ತರಬೇತಿ ಕ್ಷೇತ್ರಗಳಲ್ಲಿ. ಭಾರತವು 2020ರ ವೇಳೆಗೆ ಅದರ ಸಮಗ್ರ ನೋಂದಣಿ ದರವಾದ ಶೇ. 30ನ್ನು ಸಾಧಿಸಿದರೂ 100 ಮಿಲಿಯನ್ ಅರ್ಹ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಶಿಕ್ಷಣದಿಂದ ವಂಚಿತರಾಗಬಹುದು ಎಂದು ಅಂದಾಜಿಸಲಾಗಿದೆ. ಭಾರತವು ತನ್ನ ಭೌಗೋಳಿಕ ಲಾಭವನ್ನು ಪಡೆದುಕೊಳ್ಳಬೇಕಾದರೆ ಅದು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ತನ್ನ ಯುವಜನರ ಸಂಖ್ಯೆಯನ್ನು ವೃದ್ಧಿಮಾಡಬೇಕಾಗಿದೆ, ಅದು ಭಾರತದಲ್ಲಿಯೇ ಆಗಬಹುದು ಅಥವಾ ವಿದೇಶದಲ್ಲಿ.

ಆಸ್ಟ್ರೇಲಿಯಾದ ಅವಕಾಶ

ಉನ್ನತ ಶಿಕ್ಷಣ ಪಡೆಯಲು ಸಮರ್ಥವಾ ಗಿರುವ ಮಧ್ಯಮ ವರ್ಗದ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಪ್ರಸ್ತುತ ಪೂರೈಕೆಯ ಕೊರತೆ ಆಸ್ಟ್ರೇಲಿಯಾದ ವಿಶ್ವ ದರ್ಜೆಯ ಶಿಕ್ಷಣ ಪೂರೈಕೆದಾರರಿಗೆ ಆಕರ್ಷಕ ಅವಕಾಶವನ್ನು ಒದಗಿಸಿದೆ. ಆಸ್ಟ್ರೇಲಿಯಾ ಪೂರೈಸಬೇಕಾದ ಬೇಡಿಕೆಯ ಮಟ್ಟ ಅಭೂತಪೂರ್ವವಾದದ್ದು ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಆದರೆ ಈ ಅವಕಾಶವನ್ನು ನಾವು ಸಾಮಾನ್ಯ ವ್ಯವಹಾರ ಎಂಬ ಮಾನಸಿಕತೆಯಿಂದ ನೋಡಲು ಸಾಧ್ಯವಿಲ್ಲ. ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚು ಸ್ಥಾನಗಳನ್ನು ಮೀಸಲಿಡುವುದು ಸ್ವಾಗತಾರ್ಹವಾದರೂ ಅದೊಂದೇ ಉತ್ತರವಲ್ಲ. ಆಸ್ಟ್ರೇಲಿಯಾವು ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳು ಮತ್ತು ವೃತ್ತಿಪರ ತರಬೇತಿ ಕೇಂದ್ರಗಳ ಸಹಭಾಗಿತ್ವದಲ್ಲಿ ನೂತನ ಆವಿಷ್ಕಾರಗಳನ್ನು ಹಮ್ಮಿಕೊಳ್ಳಬೇಕಿದೆ. ಸಹಕಾರವು ಭಾರತೀಯ ಜೊತೆಗಾರ ಸಂಸ್ಥೆಗಳೊಂದಿಗೆ ಜಂಟಿ ಸಂಶೋಧನೆ ಮತ್ತು ಕಾರ್ಪೊರೇಟ್ ಕ್ಷೇತ್ರಗಳ ಜೊತೆಗೆ ಸಕ್ರಿಯ ಸಹಭಾಗಿತ್ವವನ್ನು ಒಳಗೊಂಡಿರಬೇಕು. ಮೋದಿಯ ದೃಷ್ಟಿಕೋನದ ಪ್ರಕಾರ, ವಿಪುಲ ಅವಕಾಶಗಳನ್ನು ಮತ್ತು ಹೆಚ್ಚಿನ ಜವಾಬ್ದಾರಿಯನ್ನು ಪ್ರತಿನಿಧಿಸುವ ಈ ಐತಿಹಾಸಿಕ ಸವಾಲು ಭಾರತ ಆಸ್ಟ್ರೇಲಿಯಾ ನಡುವಿನ ಸಂಬಂಧಕ್ಕೆ ಬಹುಮುಖ್ಯವಾಗಿದೆ. ಇದು ನಿಜವಾದ ಜೊತೆಗಾರಿಕೆಯ ಪರೀಕ್ಷೆಯಾಗಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಸಂಬಂಧ ಇತಿಹಾಸದಲ್ಲೇ ಇಷ್ಟೊಂದು ನಿರೀಕ್ಷೆ ಮತ್ತು ನಂಬಿಕೆಯನ್ನು ಹುಟ್ಟುಹಾಕಿರಲಿಲ್ಲ. ಮೂವತ್ತು ವರ್ಷಗಳ ಕಾಲ ನಿರ್ಲಕ್ಷಕ್ಕೊಳಪಟ್ಟ ನಂತರ ಇದೀಗ ಈ ಸಂಬಂಧ ಕಳೆಯೇರುವ ಸಮಯ ಬಂದಿದೆ. ಆ ಮೂಲಕ ಬಹಳ ನಿರೀಕ್ಷೆಯ ಶಿಕ್ಷಣ ಮತ್ತು ತರಬೇತಿ ಕ್ಷೇತ್ರಗಳ ಜೊತೆಗಾರಿಕೆಯ ಅವಕಾಶ ಕೂಡಿಬರಲಿದೆ. ಅವಕಾಶವನ್ನು ಕಳೆದುಕೊಂಡರೆ ಅದು ಬಹುದೊಡ್ಡ ಯೋಜನಾ ಹಿನ್ನಡೆ ಮತ್ತು ಒಂದು ಉತ್ತಮ ಅವಕಾಶವನ್ನು ಹಾಳು ಮಾಡಿದಂತೆ.

share
ಅಮಿತ್ ದಾಸ್ ಗುಪ್ತಾ
ಅಮಿತ್ ದಾಸ್ ಗುಪ್ತಾ
Next Story
X