ಚೀನಾ ಸಮುದ್ರದಲ್ಲಿ ಎಂದಿನಂತೆ ಕಾರ್ಯಾಚರಣೆ: ಅಮೆರಿಕ

ಬೀಜಿಂಗ್, ಜು. 20: ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಅಮೆರಿಕದ ಸೇನಾ ಪಡೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ ಎಂದು ಅಮೆರಿಕದ ನೌಕಾ ಪಡೆ ಮುಖ್ಯಸ್ಥ ಜಾನ್ ರಿಚರ್ಡ್‌ಸನ್ ಬುಧವಾರ ಹೇಳಿದ್ದಾರೆ.
ದ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಮಂಡಳಿಯು ಇತ್ತೀಚೆಗೆ ನೀಡಿರುವ ತೀರ್ಪನ್ನು ಮಾನ್ಯ ಮಾಡಲು ಚೀನಾ ನಿರಾಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂಬುದಾಗಿ ನ್ಯಾಯಮಂಡಳಿ ತೀರ್ಪು ನೀಡಿತ್ತು. ಇದೇ ಸಮುದ್ರದ ಮೇಲೆ ಬ್ರೂನೈ, ಮಲೇಶ್ಯ, ಫಿಲಿಪ್ಪೀನ್ಸ್, ತೈವಾನ್ ಮತ್ತು ವಿಯೆಟ್ನಾಂಗಳೂ ಸಮಾನಾಂತರ ಹಕ್ಕು ಸ್ಥಾಪಿಸಿವೆ.
ಈ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಕಾನೂನು ಸಮ್ಮತಿಸುವಲ್ಲೆಲ್ಲ ಅಮೆರಿಕದ ಪಡೆಗಳು ತಿರುಗಾಟ, ಹಾರಾಟ ಮತ್ತು ಕಾರ್ಯಾಚರಣೆಗಳನ್ನು ನಡೆಸುತ್ತವೆ ಎಂದು ರಿಚರ್ಡ್‌ಸನ್ ಹೇಳಿದರು.
Next Story





