ಜೂಜಾಟ: 20 ಮಂದಿಯ ಬಂಧನ
ಮಂಗಳೂರು, ಜು. 20: ನಗರದ ಹಂಪನಕಟ್ಟೆಯಲ್ಲಿರುವ ಕ್ಲಬ್‌ವೊಂದರಲ್ಲಿ ಜೂಜಾಡುತ್ತಿದ್ದ 20 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಈ ದಾಳಿ ನಡೆದಿದ್ದು, ಜೂಜಾಟದಲ್ಲಿ ನಿರತರಾಗಿದ್ದ ಒಟ್ಟು 20 ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 1,10,700 ರೂ. ಹಾಗೂ ಜೂಜಾಟಕ್ಕೆ ಉಪಯೋಗಿಸಿದ್ದ ಮೂರು ಮರದ ಟೇಬಲ್ಗಳು ಮತ್ತು 20 ಕುರ್ಚಿಗಳನ್ನು ವಶಪಡಿಸಿಕೊಂಡಿರುವ ಸಿಸಿಬಿ ಪೊಲೀಸರು, ಮುಂದಿನ ಕ್ರಮಕ್ಕೆ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
Next Story





