ವಾರಸುದಾರರ ಗಮನಕ್ಕೆ
ಉಡುಪಿ, ಜು.20: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಜು.3ರಂದು ಒಳರೋಗಿಯಾಗಿ ದಾಖಲಾಗಿದ್ದ ಸುಮಾರು 60 ವರ್ಷ ಪ್ರಾಯದ ಮಂಜ, ಕೇರಾಫ್ ಶಶಿಕಾಂತ, ಅಂಬಲಪಾಡಿ ಆಟೊ ಚಾಲಕರು ಉಡುಪಿ ಎಂಬ ವಿಳಾಸದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಇವರ ವಾರಸುದಾರರು ಯಾರಾದರೂ ಇದ್ದಲ್ಲಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರದ ದೂ.ಸಂ.: 0820-2520555ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





