ಇಂಡೋ ಕೆನಡಿಯನ್ ತ್ರಿಕೋನ ಪ್ರೇಮ ಹತ್ಯೆ ಪ್ರಕರಣ
ಪತಿ, ಪ್ರಿಯತಮೆ ಅಪರಾಧಿಗಳು

ಟೊರಂಟೋ, ಜು.21: ಭಾರೀ ಸಂಚಲನ ಮೂಡಿಸಿದ್ದ ಇಂಡೋ ಕೆನಡಿಯನ್ ತ್ರಿಕೋನ ಪ್ರೇಮ ಹತ್ಯೆ ಪ್ರಕರಣವೊಂದರ ತೀರ್ಪು ಬುಧವಾರ ಹೊರ ಬಿದ್ದಿದೆ. ಜಗತಾರ್ ಗಿಲ್ ಎಂಬ 43 ವರ್ಷದ ಮಹಿಳೆಯನ್ನು ಅವಳ ನಿವಾಸದಲ್ಲಿ ಜನವರಿ 2014 ರಂದು ಹತ್ಯೆಗೈದ ಘಟನೆಯ ಸಂಬಂಧ ಆಕೆಯ ಪತಿ ಗುರುಪ್ರೀತ್ ರೊನಾಲ್ಡ್ (37) ಹಾಗೂ ಆತನ ಪ್ರಿಯತಮೆ ಭುಪೀಂದರ್ ಪಾಲ್ ಗಿಲ್ (41) ಅಪರಾಧಿಗಳೆಂದು ಒಟ್ಟಾವ ನ್ಯಾಯಾಲಯವೊಂದು ತೀರ್ಪು ನೀಡಿದೆ.
ಮೂರು ಮಕ್ಕಳ ತಾಯಿಯಾಗಿರುವ ಜಗತಾರ್ ಅವರನ್ನು ಅವರ 17ನೆ ವಿವಾಹ ವಾರ್ಷಿಕೋತ್ಸವದ ದಿನದಂದು ಇರಿದು ಸಾಯಿಸಲಾಗಿತ್ತು. ಆಕೆಯ ಕೊಲೆಯಾಗುವ ಹಿಂದಿನ ದಿನವಷ್ಟೇ ಆಕೆ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಈ ಪ್ರಕರಣದ ಅಪರಾಧಿಗಳಾಗಿರುವ ಗುರುಪ್ರೀತ್ ರೊನಾಲ್ಡ್ ಹಾಗೂ ಭುಪೀಂದರ್ ಪಾಲ್ ಗಿಲ್ ಒಟ್ಟಾವಾದ ಓಸಿ ಟ್ರಾನ್ಸ್ ಪೋದಲ್ಲಿ ಚಾಲಕ ಸಹೋದ್ಯೋಗಿಗಳಾಗಿದ್ದು ಅವರ ನಡುವೆ ಪ್ರೇಮ ವ್ಯವಹಾರವಿದ್ದ ಕಾರಣ ಅವರಿಬ್ಬರೂ ಜತೆಯಾಗಿ ಬಾಳಲು ನಿರ್ಧರಿಸಿ ಗುರುಪ್ರೀತ್ ನ ಪತ್ನಿಯನ್ನು ಕೊಲ್ಲುವ ಸಂಚು ಹೂಡಿದ್ದರು.
ಅಪರಾಧಿ ಸ್ಥಾನದಲ್ಲಿರುವ ಗುರುಪ್ರೀತ್ ಇಬ್ಬರು ಮಕ್ಕಳ ತಾಯಿಯಾಗಿದ್ದು ಆಕೆ ಅದೇ ಸಂಸ್ಥೆಯಲ್ಲಿ ಚಾಲಕನಾಗಿರುವ ಜೇಸನ್ ರೊನಾಲ್ಡ್ ಎಂಬವನ ಪತ್ನಿಯಾಗಿದ್ದಳು. ತನಗೆ ಗಿಲ್ ಜತೆ ಪ್ರೇಮ ವ್ಯವಹಾರವಿತ್ತಾದರೂ ಆತನೊಂದಿಗಿನ ಲೈಂಗಿಕ ಸಂಬಂಧ `ಅತೃಪ್ತಿಕರ' ವಾಗಿದ್ದುದರಿಂದ ಇನ್ನೊಬ್ಬ ಸಹೋದ್ಯೋಗಿ ಚಾಲಕನೊಂದಿಗೂ ತನಗೆ ಸಂಬಂಧವಿತ್ತೆಂದು ವಿಚಾರಣೆ ವೇಳೆ ಗುರುಪ್ರೀತ್ ಹೇಳಿದ್ದಾಳೆ.
ಆಕೆ ಗಿಲ್ ಮೇಲೆ `ಭಾವನಾತ್ಮಕ ಬೆಂಬಲಕ್ಕಾಗಿ' ಅವಲಂಬಿಸಿದ್ದಳಲ್ಲದೆ ಆತನ ಜತೆ ಬಾಳುವ ಉದ್ದೇಶ ಹೊಂದಿರಲಿಲ್ಲ, ಎಂದು ಆಕೆಯ ವಕೀಲರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ತಾನು ಗುರುಪ್ರೀತ್ ಜತೆಗಿನ ಸಂಬಂಧವನ್ನು 2013 ರಲ್ಲೇ ಕಡಿದಿದ್ದಾಗಿ ಗಿಲ್ ನ್ಯಾಯಾಲಯಕ್ಕೆ ಹೇಳಿದ್ದನು.







