ಗೇರು ಬೀಜ ಗಂಟಲಲ್ಲಿ ಸಿಕ್ಕಿ 2 ವರ್ಷದ ಮಗು ಮೃತ್ಯು!

ಕೋಟ್ಟಯಂ, ಜುಲೈ 21: ಗೇರುಬೀಜ ಗಂಟಲಲ್ಲಿ ಸಿಲುಕಿದ ಪರಿಣಾಮ ಎರಡು ವರ್ಷ ಪ್ರಾಯದ ಮಗುವೊಂದು ಮೃತರಾದ ಘಟನೆ ಕೇರಳದ ಕನ್ನಲ್ಲೂರ್‌ನಿಂದ ವರದಿಯಾಗಿದೆ. ಕನ್ನಲ್ಲೂರ್ ರಫೀಕ್ ಮಂಝಿಲ್‌ನ ಅಡ್ವೊಕೇಟ್ ಮುಹಮ್ಮದ್ ರಫೀಕ್ ಹಾಗೂ ಸಬೀನಾ ದಂಪತಿಯ ಎರಡು ವರ್ಷದ ರಿಯಾಝ್ ಎಂಬ ಬಾಲಕನ ಗಂಟಲಲ್ಲಿ ಗೇರುಬೀಜ ಸಿಕ್ಕಿಹಾಕಿಕೊಂಡು ಮೃತನಾದನು ಎಂದು ವರದಿ ತಿಳಿಸಿದೆ. ಮಗುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಗಂಟಲಲ್ಲಿ ಸಿಕ್ಕಿಕೊಂಡಿದ್ದ ಗೇರು ಬೀಜವನ್ನು ಅಲ್ಲಿ ಹೊರತೆಗೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ ಮಗುವಿನ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ.
Next Story





