ಬುರ್ಹಾನ್ ವಾನಿಯನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲುವ ಬದಲು ಬಂಧಿಸಬಹುದಾಗಿತ್ತು: ಪಿಡಿಪಿ ಸಂಸದ

ಜಮ್ಮು,ಜುಲೈ 21: ಜಮ್ಮುಕಾಶ್ಮೀರದ ಆಡಳಿತಾರೂಢ ಪಿಡಿಪಿ ಕಾಶ್ಮೀರದಲ್ಲಿ ನೆಲೆಸಿರುವ ಅಶಾಂತಿಗೆ ಬಿಜೆಪಿಯೊಂದಿಗೆ ಅದು ಮೈತ್ರಿಮಾಡಿಕೊಂಡಿದ್ದು ಕಾರಣವೆಂಬುದನ್ನು ಅಲ್ಲಗೆಳೆದಿದ್ದು. ಪಕ್ಷದ ಲೋಕಸಭಾ ಸದಸ್ಯ ಮುಝಪ್ಫರ್ ಹುಸೈನ್ ಕಾಶ್ಮೀರ ಕಣಿವೆಯಲ್ಲಿ ಜನರು ಪ್ರಜಾಪ್ರಭುತ್ವದ ಬಗ್ಗೆ ಭರವಸೆ ಕಳೆದುಕೊಳ್ಳಲು 1948ರಿಂದ ಜಾರಿಯಲ್ಲಿದ್ದ ಕಾಂಗ್ರೆಸ್ ನ್ಯಾಶನಲ್ ಕಾಂಗ್ರೆಸ್ ಆಳ್ವಿಕೆಯೇ ಕಾರಣವೆಂದು ಹೇಳಿದ್ದಾರೆಂದು ವರದಿಯಾಗಿದೆ.
ಸೇನೆಯ ಹೊರತಾಗಿ ಕಾಶ್ಮೀರದಲ್ಲಿ ನೈತಿಕ ಹಕ್ಕುಗಳು ಜಾರಿಗೊಳ್ಳಬೇಕಾಗಿದೆ ಎಂದಿದ್ದಾರೆ. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ಹಸ್ತಕ್ಷೇಪವನ್ನು ಖಂಡಿಸಿದ ಮುಝಪ್ಫರ್ ಹುಸೈನ್ ಕಾಶ್ಮೀರದ ಜನರನ್ನು ಪಾಕಿಸ್ತಾನ ದಾರಿತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆಂದು ವರದಿತಿಳಿಸಿದೆ.
ಮೋದಿ ಸರಕಾರದಲ್ಲಿ ಭರವಸೆಯನ್ನು ವ್ಯಕ್ತಪಡಿಸಿದ ಹುಸೈನ್ ಮೋದಿ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡು ಹುಡುಕದಿದ್ದರೆ ಇನ್ನು ಯಾರು ತಾನೆ ಪರಿಹಾರವನ್ನು ಕಂಡು ಹುಡುಕಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಬುರ್ಹಾನ್ ವಾನಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡುವ ಬದಲಾಗಿ ಸೆರೆಹಿಡಿಯಬಹುದಾಗಿತ್ತು ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅವರುಕೆಲವು ಮಾಜಿಭಯೋತ್ಪಾದಕರ ಹೆಸರನ್ನು ಪ್ರಸ್ತಾಪಿಸಿ ಅವರು ಬಂದೂಕು ತೊರೆದು ಮುಖ್ಯಧಾರೆಯಲ್ಲಿ ಸೇರಲಿಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರು ಎಂದು ಸ್ಮರಿಸಿದರೆಂದು ವರದಿ ತಿಳಿಸಿದೆ.







