Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾರ್ಪೋರೇಟ್ ಕೆಲಸ ಬಿಟ್ಟು 30,000 ಕಿಮೀ...

ಕಾರ್ಪೋರೇಟ್ ಕೆಲಸ ಬಿಟ್ಟು 30,000 ಕಿಮೀ ಏಕಾಂಗಿ ಬೈಕ್ ಪ್ರಯಾಣ ಮಾಡಿದ ಸಾಹಸಿ

ಈಕೆಯ ಉದ್ದೇಶ ಏನು ಗೊತ್ತೆ?

ವಾರ್ತಾಭಾರತಿವಾರ್ತಾಭಾರತಿ21 July 2016 2:49 PM IST
share
ಕಾರ್ಪೋರೇಟ್ ಕೆಲಸ ಬಿಟ್ಟು 30,000 ಕಿಮೀ ಏಕಾಂಗಿ ಬೈಕ್ ಪ್ರಯಾಣ ಮಾಡಿದ ಸಾಹಸಿ

ಭಾರತ ಮಹಿಳಾ ಪ್ರವಾಸಿಗರಿಗೆ ಸುರಕ್ಷಿತ ತಾಣವೆಂದು ಸಾಬೀತು ಮಾಡಲು 37 ವರ್ಷದ ಇಶಾ ಗುಪ್ತಾ 110 ದಿನಗಳಲ್ಲಿ 16 ರಾಜ್ಯಗಳನ್ನು ಏಕಾಂಗಿಯಾಗಿ ಬೈಕಿನಲ್ಲಿ ಓಡಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಅತೀ ವಿಶಿಷ್ಟ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಲಖ್ನೌ ನಿವಾಸಿಯಾದ ಇಶಾ ಕೇರಳ ಮೂಲದವರು. ಇಶಾಳ ತಾಯಿ ಕೇರಳದವರು. ವಿದ್ಯಾಭ್ಯಾಸದ ನಂತರ ಇಶಾ ಒಬೆರಾಯ್ ಗ್ರೂಪ್ ಸೇರಿದ್ದರು. ನಂತರ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ತನ್ನ ಸ್ನೇಹಿತರ ನೆರವಿನಿಂದ ಬೈಕ್ ಓಡಿಸುವುದನ್ನು ಕಲಿತಿದ್ದರು. 2012ರಲ್ಲಿ ಇಶಾರಿಗೆ ಬೈಕ್ ಹೊಸ ಗುರುತನ್ನೇ ನೀಡಿತ್ತು. ಆಕೆಯ ಬೈಕ್ ಹವ್ಯಾಸ ಬೈಕರ್ ಸಮುದಾಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದರೂ ಈಗ ಒಂದೇ ದೇಶದೊಳಗೆ ಧೀರ್ಘ ಪ್ರಯಾಣ ಮಾಡಿದ ಮಹಿಳಾ ಬೈಕರ್ ಎನ್ನುವ ಹಿರಿಮೆಯೂ ಸಿಕ್ಕಿದೆ. ಸಾಮಾನ್ಯವಾಗಿ ಏಕಾಂಗಿಯಾಗಿ ಪ್ರಯಾಣ ಮಾಡುವ ಮಹಿಳೆಯರಿಗೆ ಭಾರತ ತಮಗೆ ಅಸುರಕ್ಷಿತ ಎಂದು ಹೇಳುವವರಿಗೆ ಭಿನ್ನವಾಗಿದ್ದಾರೆ ಇಶಾ.

2016 ಜನವರಿ 26ರಂದು ಇಶಾ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ 30,000 ಕಿಮೀ ಬೈಕ್ ಓಡಿಸಿ 2016 ಮೇ 14ರಂದು ವಾಪಾಸಾಗಿದ್ದಾರೆ. ಈ ಪ್ರಯಾಣದಲ್ಲಿ ಅವರು ತಮಿಳುನಾಡು, ಕೇರಳ, ಕರ್ನಾಟಕ, ಸೀಮಾಂದ್ರ, ತೆಲಂಗಾಣ, ಒರಿಸ್ಸಾ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಖಂಡ ಮತ್ತು ಉತ್ತರ ಪ್ರದೇಶ ಮೊದಲಾಗಿ 16 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಫೋಟೋಗ್ರಫಿ ಅಭ್ಯಾಸವಿರುವ ಇಶಾ ತಮ್ಮ ಇಡೀ ಪ್ರಯಾಣವನ್ನು ಫೋಟೋಗಳಲ್ಲಿ ಸೆರೆಹಿಡಿದಿದ್ದಾರೆ. ಅವರ ಈ ಪ್ರಯಾಣಕ್ಕೆ ಬೈಕರ್ ಸಮುದಾಯ ಥ್ರಾಟಲ್, ಒಎಸ್‌ಎಸ್ ಟ್ರಾಕಿಂಗ್ ಸೊಲ್ಯುಷನ್ಸ್, ಇಂಡಿಯನ್ ಆಯಿಲ್, ಬಜಾಜ್ ಅವೆಂಜರ್ ಕ್ಲ್ ಮತ್ತು ಫ್ಲಿಪಕಾರ್ಬನ್ ಬೆಂಬಲಿಸಿದೆ.

ಇಶಾ ತಮ್ಮ ಪ್ರಯಾಣದ ಸಂದರ್ಭ ವಿಶಿಷ್ಟ ಅನುಭವ ಪಡೆದಿದ್ದಾರೆ. ಮಧುರೈನಲ್ಲಿ ಅವರು ಸ್ಥಳೀಯ ಬಡ ಕುಟುಂಬವೊಂದರ ಜೊತೆಗೆ ನೆಲದ ಮೇಲೆ ಮಲಗಿದ್ದಾರೆ. ಒರಿಸ್ಸಾದಲ್ಲಿ ಮಳೆಯ ಋತುವನ್ನು ಅನುಭವಿಸಿದ್ದಾರೆ. ನೀರು ತುಂಬಿದ ರಸ್ತೆಯಲ್ಲಿ ಬೈಕಿನ ಸ್ಪೀಡೋಮೀಟರ್ ವೈರ್ ತುಂಡಾಗಿ ಕಷ್ಟವೂ ಎದುರಿಸಿದ್ದಾರೆ. ಮೊಬೈಲ್ ನೆಟ್ವರ್ಕ್ ಇಲ್ಲದ ಕಡೆಗೆ ಬೈಕ್ ಕೆಟ್ಟು ಹೋದಾಗ ಸ್ಥಳೀಯ ಹೊಟೇಲ್ ಒಂದರ ಸಿಬ್ಬಂದಿ ಆಕೆಯ ಪ್ರಯಾಣದ ಬಗ್ಗೆ ತಿಳಿದು ಆಹಾರ ಕೊಟ್ಟು ಸತ್ಕರಿಸಿದ್ದರು.

ಈ ಪ್ರಯಾಣದುದ್ದಕ್ಕೂ ಇಶಾಗೆ ಜನರ ಮೇಲಿನ ನಂಬಿಕೆ ಹೆಚ್ಚಾಗಿದೆ. ಅಪರಿಚಿತಳನ್ನು ಮನೆಗೆ ಕರೆದು ಸತ್ಕರಿಸಿ ಬಟ್ಟೆಗಳನ್ನು ಕೊಟ್ಟವರನ್ನು ಈಗಲೂ ಇಶಾ ನೆನಪಿಸಿಕೊಳ್ಳುತ್ತಾರೆ. ಮಾಧ್ಯಮಗಳು ನಕಾರಾತ್ಮಕ ಅಂಶಗಳನ್ನೇ ದೊಡ್ಡದು ಮಾಡಿ ಜನರನ್ನು ಬೆದರಿಸುತ್ತಾರೆ ಎನ್ನುವುದು ಇಶಾಳ ಅನುಭವದ ಮಾತು.

ಈ ಮೊದಲು ಭಾರತದಲ್ಲಿ ರೋಶಿನಿ ಶರ್ಮಾ ಮತ್ತು ವೀನು ಪಲಿವಾಲ್ ಹೀಗೇ ಏಕಾಂಗಿಯಾಗಿ ಬೈಕ್ ಸವಾರಿ ಮಾಡಿ ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ ನಡೆದಿದ್ದಾರೆ. ರೋಶಿನಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 5,453 ಕಿಮೀ ಬೈಕ್‌ನಲ್ಲಿ ಸವಾರಿ ಮಾಡಿದ ಮೊದಲ ಮಹಿಳೆ. ವೀನು 10,000 ಕಿಮೀ ದೂರ ಕ್ರಮಿಸಿದಾಗ ಗಂಭೀರ ಅಪಘಾತ ಎದುರಿಸಿದ್ದರು. ಇಶಾ ಜಾಗತಿಕವಾಗಿ ಮಹಿಳೆಯರಿಗೆ ಸ್ಫೂರ್ತಿ.

ಕೃಪೆ:her.yourstory.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X