ನನ್ನ ಮಗನಿಗೆ ದಲಿತರ ಮೇಲೆ ಹಲ್ಲೆ ನಡೆಸುವಂತೆ ಬಲಪ್ರಯೋಗ ಮಾಡಲಾಗಿತ್ತು; ಬಂಧಿತ ಯುವಕನ ತಂದೆಯಿಂದ ಹೇಳಿಕೆ
ದಲಿತರೊಂದಿಗೆ ಧರಣಿ ನಡೆಸಲು ಸಿದ್ದ

ಅಹ್ಮದಾಬಾದ್, ಜು.21: ನನ್ನ ಮಗನಿಗೆ ದಲಿತರ ಮೇಲೆ ಹಲ್ಲೆ ನಡೆಸಲು ಬಲಪ್ರಯೋಗ ಮಾಡಲಾಗಿತ್ತು ಎಂದು ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಉನಾ ಪಟ್ಟಣದಲ್ಲಿ ದಲಿತ ಯುವಕರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತ 9 ಮಂದಿ ಯುವಕರ ಪೈಕಿ ಹದಿನೇಳರ ಹರೆಯದ ಮುಸ್ಲಿಂ ಯುವಕನ ತಂದೆ ಆರೋಪಿಸಿದ್ದಾರೆ.
" ಮುಸ್ಲಿಂರು ಗೋರಕ್ಷಕರೊಂದಿಗೆ ಇದ್ದಾರೆ ಎನ್ನುವುದನ್ನು ತೋರಿಸಿಕೊಡುವುದಕ್ಕಾಗಿ ನನ್ನ ಮಗನನ್ನು ಬಳಸಿಕೊಂಡಿದ್ದಾರೆ ” ಎಂದು ಹೇಳಿದ್ದಾರೆ.
" ನಾನು ಮಗನನ್ನು ಬಾಳೆ ಹಣ್ಣು ತರಲು ಬಸ್‌ನಿಲ್ದಾಣದ ಪಕ್ಕದ ಅಂಗಡಿಗೆ ಕಳುಹಿಸಿದ್ದೆ. ಅಲ್ಲಿ ತಲುಪಿದಾಗ ಪ್ರಮೋದ್‌ಗಿರಿ ಗೋಸ್ವಾಮಿ ಮತ್ತು ಇತರರು ಕಾರಿನಲ್ಲಿ ಆಗಮಿಸಿದರು. ನಾಲ್ವರನ್ನು ಕಾರಿನಿಂದ ಹೊರಗೆ ಎಳೆದು ಕಾರಿಗೆ ಕಟ್ಟಿ ಹಾಕಿದರು. ನನ್ನ ಮಗ ಕುತೂಹಲದಿಂದ ಈ ಘಟನೆಯನ್ನು ನೋಡುತ್ತಿದ್ದಾಗ , ಆತನನ್ನು ಗೋ ರಕ್ಷಕ ಸಮಿತಿಯವರು ಕರೆದು ದಲಿತರ ಮೇಲೆ ಹೊಡೆಯಲು ಸೂಚಿಸಿದರು.
ಯುವಕ ಹಿಂದೆಟು ಹಾಕಿದಾಗ ಆತನ ಕೈಗೆ ಲಾಠಿ ಕೊಟ್ಟು ಬಲವಂತವಾಗಿ ಹಲ್ಲೆ ನಡೆಸುವಂತೆ ಒತ್ತಡ ಹೇರಿದರು” ಎಂದು ಯುವಕನ ತಂದೆ ಹೇಳಿದ್ದಾರೆ.
ಯುವಕನ ತಂದೆ ಸಾರಿಗೆ ಉದ್ಯಮ ನಡೆಸುತ್ತಿದ್ದಾರೆ. " ಅನಾರೋಗ್ಯದ ಕಾರಣಕ್ಕಾಗಿ ಮಗನ ಓದನ್ನು ಕಳೆದ ವರ್ಷ ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಡಿಪ್ಲೊಮಾ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಲು ಅರ್ಜಿ ಸಲ್ಲಿಸಲಾಗಿತ್ತು. ರೆ ಇದೀಗ ಹುಡುಗನ ಶಿಕ್ಷಣಕ್ಕೆ ಅಡ್ಡಿಯಾಗಿದೆ ” ಎಂದು ಹುಡುಗ ತಂದೆ ಹೇಳಿದ್ದಾರೆ.





