ಸಿಎ ಪರೀಕ್ಷೆಯಲ್ಲಿ ಉಡುಪಿಯ ಝೋಯಾ ಪರ್ವೀನ್ ತೇರ್ಗಡೆ

ಉಡುಪಿ, ಜು.21: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ 2016ರ ಮೇ ತಿಂಗಳಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ಉಡುಪಿಯ ಝೋಯಾ ಪರ್ವೀನ್ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಗೊಂಡಿದ್ದಾರೆ.
ಇವರು ಉಡುಪಿಯ ಮೇ. ಶಬ್ಬೀರ್ ಆ್ಯಂಡ್ ಗಣೇಶ್ ಲೆಕ್ಕಪರಿಶೋಧಕರ ಸಂಸ್ಥೆಯ ಮಾರ್ಗದರ್ಶನದಲ್ಲಿ ಆರ್ಟಿಕಲ್ ವ್ಯಾಸಂಗ ಮಾಡಿದ್ದರು.
ಝೋಯಾ ಅವರು ಕುಂಜಿಬೆಟ್ಟು ಫಿಶ್‌ಮಾರ್ಕೆಟ್ ಬಳಿ ನಿವಾಸಿ ಮುಹಮ್ಮದ್ ಹನೀಫ್ ಹಾಗೂ ಯಾಸ್ಮೀನ್ ಬಾನು ದಂಪತಿ ಪುತ್ರಿ.
Next Story





