ಗುಜರಾತಿನ ಜಾತಿ ಪೀಡಕರ ವಿರುದ್ಧ ಕ್ರಮಕ್ಕೆ ಪಿಎಫ್‌ಐ ಆಗ್ರಹ

ಬೆಂಗಳೂರು, ಜು. 21: ಗುಜರಾತಿನಲ್ಲಿ ಹಿಂದುತ್ವ ಶಕ್ತಿಗಳಿಂದಾದ ದಲಿತ ದೌರ್ಜನ್ಯ ಪ್ರಕರಣದ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮ್ಯಾನ್ ಕೆ.ಎಂ ಶರೀಫ್ ಆಗ್ರಹಿಸಿದ್ದಾರೆ .ಕೇವಲ ಆಹಾರ ಪದ್ಧತಿಯ ಕಾರಣಕ್ಕಾಗಿ, ಸಾರ್ವಜನಿಕವಾಗಿ ಅದರಲ್ಲೂ ಪೊಲೀಸರ ಸಮ್ಮುಖದಲ್ಲಿ ಗೂಂಡಾ ಗುಂಪುಗಳು ದಾಳಿ ನಡೆಸಿರುವಂತಹದ್ದು ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಆದ ಅವಮಾನ ಎಂದು ಕೆ.ಎಂ .ಶರೀಫ್ ಅವರು ಪ್ರತಿಕ್ರಿುಸಿದ್ದಾರೆ . ಈ ರೀತಿಯ ದಾಳಿಗಳ ಮೂಲಕ ಹಿಂದುತ್ವ ಪ್ರತಿಪಾದಕರು ಸಾಂಪ್ರದಾಯಿಕ ಆರ್ಥಿಕ ಮೂಲವಾಗಿರುವ ಮತ್ತು ಬಡವರಿಗೆ ಕಡಿಮೆ ದರದಲ್ಲಿ ಸಿಗುವ ಪೌಷ್ಠಿಕ ಅಹಾರವನ್ನು ತಡೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಈ ರೀತಿಯ ಘಟನೆಗಳು ನಾಗರಿಕ ಸಮಾಜದಲ್ಲಿ ನಡೆಯಬಾರದು. ಇಲ್ಲಿಯವರೆಗೆ ದಲಿತರು ಮೇಲ್ವರ್ಗದ ರಾಜಕೀಯಕ್ಕೆ ಬಲಿಯಾಗಿ ದಲಿತ ವಿರೋಧಿ ಆಶಯಗಳಿಗೆ ಆಯುಧಗಳಾಗಿ ಬಳಸಲ್ಪಟ್ಟಿದ್ದಾರೆ. ಇನ್ನು ಮುಂದಾದರೂ ದಲಿತರು ಎಚ್ಚೆತುತಿಕೊಳ್ಳುವ ಭರವಸೆ ಇದೆ. ಈ ಘಟನೆುಂದ ೞಂದುಗಳ ಐಕ್ಯತೆೞ ಎಂಬ ಸಂಘಪರಿವಾರದ ಕೂಗು ಕೇವಲ ದಲಿತರನ್ನು ದಾಸ್ಯರನ್ನಾಗಿ ಇರಿಸಿಕೊಳ್ಳುವ ಪ್ರಯತ್ನ ಎಂಬುದು ಖಚಿತವಾಗಿದೆ ಎಂದು ಶರೀಫ್ ಹೇಳಿದ್ದಾರೆ.ನ್ಯಾಯ ಮತ್ತು ಹಕ್ಕುಗಳಿಗಾಗಿ ದಲಿತರ ಹೋರಾಟಗಳಿಗೆ ಚೆಯರ್ ಮ್ಯಾನ್ ಬೆಂಬಲ ವ್ಯಕತಿಪಡಿಸಿದ್ದಾರೆ. ಅದೇ ರೀತಿ ದುಷ್ಕರ್ಮಿಗಳನ್ನು ಬಂಧಿಸಲು ಮತ್ತು ಸಂತ್ರಸ್ತರಿಗೆ ಪರಿಹಾರವನ್ನು ನೀಡಲು ಅವರು ಆಗ್ರಹಿಸಿದ್ದಾರೆ.





