ಸಿರಿಯದಲ್ಲಿ ಮಕ್ಕಳ ಹತ್ಯೆ: ಯುನಿಸೆಫ್ ಖಂಡನೆ

ಬೆರೂತ್, ಜು. 21: ಸಿರಿಯದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ವೇಳೆ ನಡೆಯುತ್ತಿರುವ ಮಕ್ಕಳ ಹತ್ಯೆಯನ್ನು ವಿಶ್ವಸಂಸ್ಥೆಯ ಮಕ್ಕಳ ಘಟಕ ಯುನಿಸೆಫ್ ಖಂಡಿಸಿದೆ.
ಮನ್‌ಬಿಜ್ ಪಟ್ಟಣ ಮತ್ತು ಅದರ ಸುತ್ತಮುತ್ತ ನಡೆದ ಘರ್ಷಣೆಯಲ್ಲಿ ಡಝನ್‌ಗಟ್ಟಳೆ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಿಡುಗಡೆ ಮಾಡಲಾದ ಹೇಳಿಕೆಯೊಂದರಲ್ಲಿ ಯುನಿಸೆಫ್ ತಿಳಿಸಿದೆ. ಇಲ್ಲಿ ಕಳೆದ ಕೆಲವು ದಿನಗಳಲ್ಲಿ ಅಮೆರಿಕ ನೇತೃತ್ವದ ಮೈತ್ರಿಕೂಟ ನಡೆಸಿದೆಯೆನ್ನಲಾದ ವಾಯ ದಾಳಿಗಳಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ.
‘‘ಮಕ್ಕಳು ಸಿರಿಯದ ಯಾವುದೇ ಭಾಗದಲ್ಲಿರಲಿ ಹಾಗೂ ಯಾರದೇ ನಿಯಂತ್ರಣದ ಪ್ರದೇಶಗಳಲ್ಲಿ ಅವರು ಬದುಕಲಿ ಅವರ ಮೇಲೆ ನಡೆಯುವ ದಾಳಿಗಳಿಗೆ ಯಾವುದೇ ಸಮರ್ಥನೆಯಿಲ್ಲ’’ ಎಂದು ಯುನಿಸೆಫ್ ಹೇಳಿದೆ.
Next Story





