ವಿಕೋಪ ನಿರ್ವಹಣೆಗಿಂತ ತಡೆಗೆ ಒತ್ತು
ಹೊಸ ದೃಷ್ಟಿಕೋನಕ್ಕೆ ಸಕಾಲ

ಇತರ ನೆರೆಯ ದೇಶಗಳಿಗಿಂತ ಭಿನ್ನವಾಗಿ ಪುರಾತನ ನದಿಗಳು ಹರಿಯುವ ಉಪಖಂಡ ಭಾರತ. ಬಹುತೇಕ ನದಿಗಳು ಭಾರತದಲ್ಲೇ ಹುಟ್ಟಿ ಇಲ್ಲೇ ಕೊನೆಗೊಳ್ಳುವುದು ವಿಶೇಷ. ಇದರಿಂದ ನೀರು ಸರಬರಾಜಿಗೆ ಅಡ್ಡಿ ಇಲ್ಲ. ಆದರೆ ಇದರ ಜತೆಗೆ ಇಂತಹ ನದಿಗಳನ್ನು ಆರೋಗ್ಯಕರವಾಗಿ ಇಡುವುದು ಕೂಡಾ ನಮ್ಮ ಮೇಲಿರುವ ದೊಡ್ಡ ಜವಾಬ್ದಾರಿ. ಆದರೆ ಪ್ರತಿ ವರ್ಷ ಪ್ರವಾಹ ಹಾಗೂ ಬರ ಪರಿಸ್ಥಿತಿ ಹೆಚ್ಚುತ್ತಿರುವುದು, ನಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ನಾವು ವಿಫಲರಾಗಿದ್ದೇವೆ ಎನ್ನುವುದನ್ನು ಎಚ್ಚರಿಸುತ್ತಿದೆ.
ನಾವು ಏನು ತಪ್ಪುಮಾಡಿದ್ದೇವೆ? ಅಥವಾ ನಾವು ಎಲ್ಲಿ ಎಡವಿದ್ದೇವೆ?
ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನದಿಗಳನ್ನು ನಾವು ಪ್ರತ್ಯೇಕವಾಗಿ ನೋಡಬಾರದು. ಬದಲಾಗಿ ಇದು ಇಡೀ ಪರಿಸರ ವ್ಯವಸ್ಥೆಯ ಒಂದು ಭಾಗ ಎಂಬ ಅರ್ಥದಲ್ಲಿ ನೋಡಬೇಕು.
ನೈಸರ್ಗಿಕ ಪರಿಸರ
ಒಂದು ನದಿ ಹೇಗೆ ಹರಿಯುತ್ತದೆ ಎಂದು ನಿರ್ಧರಿಸಲು, ಅದರ ನಿರಂತರತೆ ಹಾಗೂ ಅದರ ನೀರಿನ ತಂಗುವಿಕೆ ಪ್ರಮಾಣ ಮಹತ್ವದ ಅಂಶಗಳಾಗುತ್ತವೆ. ಉದಾಹರಣೆಗೆ ಅರೇಬಿಯನ್ ದ್ವೀಪಕಲ್ಪದ ಕಣಿವೆಗಳಲ್ಲಿ, ಅಪರೂಪದ, ಧಾರಾಕಾರ ಮಳೆ, ಒಣ ಕಂದಕಗಳಲ್ಲಿ ಪ್ರವಾಹ ತರಬಹುದು. ಆದರೆ ಮಳೆ ಬಂದ ಕೆಲವೇ ಗಂಟೆಗಳಲ್ಲಿ ಅಂಥ ಕಣಿವೆ ಬರಿದಾಗಬಹುದು. ಆದರೆ ನಮ್ಮಲ್ಲಿ, ಪ್ರಶಾಂತ ನದಿಗಳಾದ ನರ್ಮದಾದಂಥ ನದಿಗಳು ವರ್ಷವಿಡೀ ಮಂದ ಹಾಗೂ ಸುಲಲಿತವಾಗಿ ಹರಿಯುತ್ತದೆ. ಮಳೆಗಾಲದಲ್ಲಿ ಒಂದಷ್ಟು ರಭಸ ಪಡೆಯುತ್ತದೆ.
ನದಿಗಳ ಹರಿವಿನ ಮೇಲೆ ಲಕ್ಷಾಂತರ ವರ್ಷದಿಂದ ಪ್ರಭಾವ ಬೀರಿದ ಹೆಚ್ಚುವರಿ ಅಂಶಗಳೆಂದರೆ, ನೈಸರ್ಗಿಕ ಪರಿಸರ. ಇದರಲ್ಲಿ ವರ್ಷಗಳ ಕಾಲ ಸುಪ್ತವಾಗಿದ್ದು, ಕೆಲವೇ ಗಂಟೆಗಳ ಮಳೆ ಬಿದ್ದ ತಕ್ಷಣ ಚಿಗುರಿಕೊಂಡು ಇಡೀ ಪ್ರದೇಶದಲ್ಲಿ ಗಿಡ ಬೆಳೆದು ಹೂ ಅರಳುವಂತೆ ಮಾಡುವ ಮರುಭೂಮಿ ವ್ಯವಸ್ಥೆಯಿಂದ ಹಿಡಿದು, ದಿನನಿತ್ಯ ಸಾವಿರಾರು ಘನ ಮೀಟರ್ ನೀರನ್ನು ಪ್ರಸರಿಸುವ ಉಷ್ಣವಲಯದ ನಿತ್ವಹರಿದ್ವರ್ಣದ ಕಾಡುಗಳು ಇದರಲ್ಲಿ ಸೇರಿವೆ. ಸಮಶೀತೋಷ್ಣ ವಲಯದಲ್ಲಿ, ನಾಲ್ಕು ಋತುಮಾನಗಳ ಪರಿಸರ ವ್ಯವಸ್ಥೆ ಅಭಿವೃದ್ಧಿಯಾಗಿದೆ. ಇಲ್ಲಿ ಚಳಿಗಾಲದ ತಿಂಗಳುಗಳಲ್ಲಿ ಎಲ್ಲವೂ ಸುಪ್ತವಾಗಿದ್ದು, ಉಳಿದ ಮೂರು ಋತುಗಳಲ್ಲಿ, ಪತನಶೀಲ ಕಾಡುಗಳು ರೂಪುಗೊಳ್ಳುತ್ತವೆ. ಮತ್ತೆ ಕಡುಬೇಸಿಗೆಯಲ್ಲಿ ಸುಪ್ತವಾಗುತ್ತವೆ. ಇವೆಲ್ಲವೂ ಎಲ್ಲರಿಗೂ ಗೊತ್ತಿರುವ ಅಂಶಗಳೇ
ಇಷ್ಟಾಗಿಯೂ ಸರಳವಾದ ಸಂಪರ್ಕವೆಂದರೆ, ಕೆಲ ನಿರ್ದಿಷ್ಟ ಬಗೆಯ ಅರಣ್ಯಗಳು, ಕೆಲ ಪರಿಸ್ಥಿತಿಗಳನ್ನು ಶೋಷಿಸುವ ಸಲುವಾಗಿಯೇ ರೂಪುಗೊಳ್ಳುತ್ತವೆ. ಅದರಲ್ಲೂ ಮುಖ್ಯವಾಗಿ ಮಳೆ ಬೀಳುವ ವಿಧಾನ ಹಾಗೂ ಮುಕ್ತ ಹಾಗೂ ಯೋಜನಾಬದ್ಧ ಪ್ರಕ್ರಿಯೆಯಿಂದ ರೂಪುಗೊಂಡಂತಿರುತ್ತವೆ.
ವಾಸಕ್ಕಾಗಿ ಅರಣ್ಯ ನಾಶ
ಪಶುಸಂಗೋಪನೆ ಹಾಗೂ ಕೃಷಿ ಅಭಿವೃದ್ಧಿಯು ನೈಸರ್ಗಿಕ ಸಂಪನ್ಮೂಲದ ಐತಿಹಾಸಿಕ ಶೋಷಣೆಗೆ ಕಾರಣವಾಗಿದೆ. ಕೆಲ ಪ್ರದೇಶಗಳಲ್ಲಿ ಇಂಥ ಪದ್ಧತಿಗಳು ಸುಸ್ಥಿರವಾಗಿ ಉಳಿಯುವುದಿಲ್ಲ. ಕೆಲ ಪ್ರದೇಶಗಳು ಇಂದು ಮರುಭೂಮಿಯಾಗಿವೆ. ಉದಾಹರಣೆಗೆ, ಉತ್ತರ ಅಮೆರಿಕದ ಅಟ್ಲಾಸ್ ಪರ್ವತಗಳು ಹಾಗೂ ಲೆಬನಾನ್‌ನ ಭಾಗಗಳು. ಕೆಲ ಪ್ರದೇಶಗಳು ಇನ್ನೂ ಸುಸ್ಥಿರವಾಗಿಯೇ ಉಳಿದಿದೆ.
ಹಾಗಾದರೆ ಅರಣ್ಯ ಅಥವಾ ನೈಸರ್ಗಿಕ ಪರಿಸರ ನೀರಿನ ಹರಿವಿನ ಮೇಲೆ ಯಾವ ಪರಿಣಾಮ ಬೀರುತ್ತವೆ?
ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಮರುಭೂಮಿಯ ಕಣಿವೆಯಲ್ಲಿ ಕೆಲವೇ ಗಂಟೆಗಳ ಮಳೆಗೆ ಪ್ರವಾಹ ಬರುತ್ತದೆ. ಕೆಲವೇ ಕ್ಷಣಗಳಲ್ಲಿ ಮತ್ತೆ ಅವು ಒಣಗುತ್ತವೆ. ಏಕೆಂದರೆ ಕಲ್ಲು ಅಲ್ಲಿ ನೀರು ಇಂಗಲು ಅವಕಾಶ ನೀಡುವುದಿಲ್ಲ. ಆದರೆ ಅರಣ್ಯ ಅಥವಾ ಹುಲ್ಲುಗಾವಲಿನ ಮೇಲೆ ಬೀಳುವ ಮಳೆಯ ಬಹುಪಾಲು ನೆಲಕ್ಕೆ ಹೀರಿಕೊಳ್ಳುತ್ತದೆ. ಇದು ತಿಂಗಳುಗಳ ಕಾಲ ತೊರೆ ಹಾಗೂ ನದಿಗಳಿಗೆ ನೀರನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ.
ಎಲ್ಲಿ ಮಳೆ ನೀರು ಹೀರಿಕೊಳ್ಳುತ್ತದೆಯೋ ಅಥವಾ ಅಂಥ ಪ್ರದೇಶಗಳ ಕಾಡುಗಳು ಶತಮಾನಗಳ ಕಾಲದಿಂದ ಯಾವ ತೊಂದರೆಯೂ ಇಲ್ಲದೆ ಸ್ಥಳೀಯ ಹವಾಮಾನದೊಂದಿಗೆ ಸಮನ್ವಯದಿಂದ ಉಳಿದುಕೊಂಡಿವೆಯೋ ಅಂಥ ಕಡೆಗಳಲ್ಲಿ ಹರಿವು ಇರುವುದಿಲ್ಲ ಹಾಗೂ ಪ್ರವಾಹದ ಅಪಾಯ ಇರುವುದಿಲ್ಲ. ನೆನಪಿನಲ್ಲಿಡಬೇಕಾದ ಅಂಶವೆಂದರೆ ನೀರು ಅಮೂಲ್ಯ ಸಂಪನ್ಮೂಲ. ಕೇವಲ ನಮಗಷ್ಟೇ ಅಲ್ಲ; ಗಿಡಮರಗಳಿಗೆ ಕೂಡಾ. ಈ ಹಿನ್ನೆಲೆಯಲ್ಲಿ ನಿಸರ್ಗ ಮಳೆನೀರನ್ನು ಸಾಧ್ಯವಾದಷ್ಟು ಮಟ್ಟಿಗೆ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತದೆ.
ನೀರು ಹಿಡಿದಿಡುವ ಅರಣ್ಯ
ನೀರನ್ನು ಉಳಿಸಿಕೊಂಡ ಪ್ರಮಾಣ ನಿಜಕ್ಕೂ ದಿಗ್ಭ್ರಮೆಗೊಳಿಸು ವಂಥದ್ದು. ಇತ್ತೀಚೆಗೆ ಉತ್ತರಾಖಂಡದ ಭೀಮತಲ ನದಿಪಾತ್ರದಲ್ಲಿ 20 ಸೆಂಟಿಮೀಟರ್ ಮಳೆಬಿದ್ದಿತು. ಇಷ್ಟಾಗಿಯೂ ಕೆರೆಗಳಿಗೆ ಹರಿಯುವ ತೊರೆಗಳು ಬಹುತೇಕ ಒಣಗಿಯೇ ಇದ್ದವು. ಅಂದರೆ ಬಿದ್ದ ಅಷ್ಟೂ ಮಳೆ ಅಂತರ್ಜಲವನ್ನು ರೀಚಾರ್ಜ್ ಮಾಡಲು ಭೂಮಿಯಲ್ಲಿ ಇಂಗಿಹೋಯಿತು. ಉದಾಹರಣೆಗೆ 10 ಕಿಲೋಮೀಟರ್ ಉದ್ದ ಹಾಗೂ ಎರಡು ಕಿಲೋಮೀಟರ್ ಅಗಲದಷ್ಟು ವಿಸ್ತಾರ ಪ್ರದೇಶದಲ್ಲಿ, ಒಂದು ಲಕ್ಷ ಘನ ಮೀಟರ್ ನೀರನ್ನು ಇಂಥ ಹಿಮಾಲಯನ್ ಕಣಿವೆಯ ಬೆಟ್ಟಪ್ರದೇಶ ಹಿಡಿದಿಟ್ಟುಕೊಳ್ಳಬಹುದು.
ಇದರ ಹತ್ತು ಪಟ್ಟು ಮಳೆ ವರ್ಷವಿಡೀ ಬೀಳುವ ಉತ್ತರಾಖಂಡ ಅಥವಾ ದೇಶದ ಇತರ ಭಾಗಗಳಲ್ಲಿ, ಎಷ್ಟು ಪ್ರಮಾಣದ ನೀರು ಸಂಗ್ರಹವಾಗಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು.
ಇದಕ್ಕೆ ವಿಲೋಮವಾಗಿ, ನೈಸರ್ಗಿಕ ಕಾಡುಗಳು ನಾಶವಾದ ಪ್ರದೇಶಗಳಲ್ಲಿ, ಇಷ್ಟೊಂದು ಪ್ರಮಾಣದ ನೀರನ್ನು ಬೆಟ್ಟ ಹಿಡಿದಿಡಲಾರದು. ಇದಕ್ಕೆ ಬದಲಾಗಿ ಮರುಭೂಮಿಯ ಕಣಿವೆಗಳಲ್ಲಿ, ರಭಸದಿಂದ ಬೆಟ್ಟದ ತಪ್ಪಲಿನತ್ತ ನೀರು ಹರಿದು, ನದಿ ಸೇರುತ್ತದೆ. ಇಂಥ ನದಿಗಳು ಹೆಚ್ಚು ಭಯಾನಕವಾಗಿರುತ್ತವೆ.
ಹೀಗೆ ನೈಸರ್ಗಿಕ ವ್ಯವಸ್ಥೆಗೆ ತೊಂದರೆ ಉಂಟಾಗಿರುವ ಪ್ರದೇಶಗಳಲ್ಲಷ್ಟೇ ಪ್ರವಾಹ ಆರಂಭವಾಗಿದೆ. ಇದು ಇತ್ತೀಚೆಗಿನ ಬೆಳವಣಿಗೆಯೇನೂ ಅಲ್ಲ. ಉತ್ತರಾಖಂಡದ ಅರಣ್ಯಗಳು ಶತಮಾನಗಳ ಹಿಂದೆಯೇ ನಾಶವಾಗಿವೆ. ಬಯಲು ಪ್ರದೇಶದ ಮಂದಿ ಈ ಪ್ರದೇಶವನ್ನು ರೋಗ ಹಾಗೂ ಕಾನೂನುಕ್ರಮಗಳಿಂದ ರಕ್ಷಣೆ ಪಡೆಯಲು ಪ್ರಶಸ್ತ ತಾಣ ಎಂದು ಭಾವಿಸಿದರು. ಇಲ್ಲಿ ಸಹಜವಾಗಿಯೇ ದೊಡ್ಡ ಪ್ರಮಾಣದ ಜನಸಂಖ್ಯೆ, ಪಶುಸಂಗೋಪನೆ, ಕೃಷಿ ಚಟುವಟಿಕೆಗಳು ಬೆಳೆಯಿತು. ಕೆಲವೇ ನದಿ ಕಣಿವೆಗಳು ಅತಿಕ್ರಮಣಕ್ಕೆ ಒಳಗಾದವು. ಬೆಟ್ಟದ ತಪ್ಪಲಲ್ಲೆಲ್ಲ ಕಾಂಕ್ರೀಟ್ ಕಾಡು ತಲೆ ಎತ್ತಿತ್ತು. ಮುಖ್ಯ ಬೆಳೆಗಳೆಂದರೆ ಗೋಧಿ, ತೃಣಧಾನ್ಯ ಹಾಗೂ ಭತ್ತ. ಜೋಳ, ಟೊಮೆಟೊ, ಆಲೂಗಡ್ಡೆ, ಸೇಬು, ಕಲ್ಲಂಗಡಿಯಂಥ ಬೆಳೆಗಳನ್ನು ಬ್ರಿಟಿಷರು 19ನೆ ಶತಮಾನದಲ್ಲಿ ಪರಿಚಯಿಸಿದರು. ಗೋಧಿ, ತೃಣಧಾನ್ಯ ಹಾಗೂ ಭತ್ತ ಎಲ್ಲವೂ ಹುಲ್ಲಿನ ಬೆಳೆಗಳು. ಆದ್ದರಿಂದ ಅರಣ್ಯದ ಬದಲಾಗಿ ಹುಲ್ಲು ಪ್ರದೇಶ ಹೆಚ್ಚಿತು.
ತುಪ್ಪದ ಉತ್ಪಾದನೆಗಾಗಿ ದೊಡ್ಡ ಪ್ರಮಾಣದಲ್ಲಿ ಜಾನುವಾರು ಗಳನ್ನು ಸಾಕಲಾಯಿತು. ನಾನು ಮಾತನಾಡಿಸಿದ ವೃದ್ಧ ಮಹಿಳೆ ಯೊಬ್ಬರು ಹೆಮ್ಮೆಯಿಂದ, ನನ್ನ ತಂದೆ ನೂರಕ್ಕೂ ಹೆಚ್ಚು ಹಸುಗಳನ್ನು ಸಾಕುತ್ತಿದ್ದರು. ಬಕೆಟ್‌ಗಟ್ಟಲೆ ಮಜ್ಜಿಗೆಯನ್ನು ಚೆಲ್ಲಲಾಗುತ್ತಿತ್ತು. ಮಹತ್ವದ ಅಂಶವೆಂದರೆ ಒಂದಷ್ಟು ಹುಲ್ಲನ್ನೂ ಬೆಳೆಯುತ್ತಿರಲಿಲ್ಲ. ಇಡೀ ಕಾರ್ಯಾಚರಣೆ ಸ್ಥಳೀಯ ಕಾಡುಗಳನ್ನೇ ಅವಲಂಬಿಸಿತ್ತು. ಗಂಗೆಯಲ್ಲಿ ಪ್ರವಾಹ ಹೊಸದಲ್ಲ ಎನ್ನುವುದು ಅಚ್ಚರಿಯಲ್ಲವೇ?
ಇದು ಬಹುತೇಕ ದಕ್ಷಿಣ ಭಾರತದ ನದಿಗಳಿಗೂ ಅನ್ವಯಿಸುತ್ತದೆ. ಭಾರತದಲ್ಲಿ ಎಂದೂ ಇಂತಹ ಒಳಪ್ರದೇಶವನ್ನು ಪರಿಗಣಿಸಿಲ್ಲ. ಸಮರ್ಪಕವಾಗಿ ನಿರ್ಹಹಿಸದ, ದಟ್ಟವಾದ ಮಾನವ ವಾಸದ ಪ್ರದೇಶಗಳಲ್ಲಿ ವಿಕೋಪಗಳ ಮೇಲೆ ವಿಕೋಪಗಳು ಬರುತ್ತಿರುವುದು ಅಚ್ಚರಿಯೇ?
2013ರ ಕೇದಾರನಾಥ ವಿಕೋಪದಲ್ಲಿ ಸಾವಿರಾರು ಮಂದಿ ಮೃತಪಟ್ಟರು. ರುದ್ರಪ್ರಯಾಗ ಜಿಲ್ಲೆಯೊಂದರಲ್ಲೇ 30 ಹೊಟೇಲ್‌ಗಳು ಕೊಚ್ಚಿಕೊಂಡು ಹೋದವು. ಇವೆಲ್ಲವೂ ಸುಪ್ರೀಂಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳು. ನದಿಗಳ ಗರಿಷ್ಠ ನೀರಿನ ಮಟ್ಟಕ್ಕಿಂತ 200 ಮೀಟರ್ ವ್ಯಾಪ್ತಿಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಇಷ್ಟಾಗಿಯೂ ಯಾರನ್ನೂ ವಿಚಾರಣೆಗೂ ಗುರಿಪಡಿಸಲಿಲ್ಲ ಅಥವಾ ಹೊಟೇಲ್ ನಿರ್ಮಿಸಲು ಅನುಮತಿ ನೀಡಿದವರನ್ನು ಶಿಕ್ಷೆಗೂ ಗುರಿಪಡಿಸಲಿಲ್ಲ. ನಾನು ಈ ವಿಷಯ ಎತ್ತಿದಾಗ, ಇಂಥ ಬೇಸರದ ಪರಿಸ್ಥಿತಿಯಲ್ಲೂ ಗೂಬೆ ಕೂರಿಸಲು ಹೊರಟಿದ್ದೀರಿ ಎಂದು ತಿರುಗಿ ಬಿದ್ದು, ನನ್ನ ಬಾಯಿ ಮುಚ್ಚಿಸಿದರು. ಆದ್ದರಿಂದ ಅಂಥ ದೊಡ್ಡ ಪ್ರಮಾಣದ ಜೀವಹಾನಿಗೆ ಜನರೇ ನೇರ ಹೊಣೆ. ಅಂಥದ್ದೇ ಪರಿಸ್ಥಿತಿ ಸಣ್ಣ ಪ್ರಮಾಣದಲ್ಲಿ ಇದೀಗ ಮರುಕಳಿಸುತ್ತಿದ್ದು, ಸರಕಾರಗಳು ತಪ್ಪಿತಸ್ಥರ ಬೆನ್ನ ಹಿಂದೆ ಬೀಳುವ ಬದಲು ನೆರವಿನ ಹಿಂದೆ ಬಿದ್ದಿವೆ.
ವಿಕೋಪ ತಡೆ ಅಗತ್ಯ
ನಮ್ಮ ಯೋಜನಾ ಪ್ರಕ್ರಿಯೆಯ ಒತ್ತು ವಿಕೋಪ ನಿರ್ವಹಣೆ ಮತ್ತು ವಿಕೋಪ ಸ್ಪಂದನೆ ಬಗ್ಗೆ ಇದೆಯೇ ವಿನಃ ತಡೆಯ ಬಗೆಗಲ್ಲ. ಈ ವಿಷಯದಲ್ಲಿ ನಾವು ಎಂದೂ ಪ್ರಬಲವಾಗಿ ಯೋಚಿಸಿಯೇ ಇಲ್ಲ. ಈ ಕಾರಣದಿಂದಲೇ ಲಾರ್ಡ್‌ಮೌಂಟ್ ಬ್ಯಾಟನ್, ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಆಗಲು ಮುಂದೆ ಬಂದಿದ್ದರು. ವಿಭಜನೆ ವೇಳೆ, ಪಾಕಿಸ್ತಾನದಿಂದ ಬರುವ ರೈಲುಗಳು ಪೂರ್ಣ ಪ್ರಮಾಣದಲ್ಲಿ ಶವಗಳನ್ನು ಹೊತ್ತು ತರುತ್ತಿದ್ದರೂ, ದೇಶಾದ್ಯಂತ ಕೋಮುದಳ್ಳುರಿ ವ್ಯಾಪಿಸಿದ್ದರೂ, ನೆಹರೂ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು, ಸರಕಾರದ ಪ್ರಭುತ್ವವನ್ನು ಪಡೆಯುವಂತೆ ಕೋರಿದರು. ತಾವು ಅಧಿಕಾರ ಹಸ್ತಾಂತರಿಸಲು ಬ್ರಿಟನ್‌ನ ಪ್ರತಿನಿಧಿಯಾಗಿ ಮಾತ್ರ ಬಂದಿದ್ದೇನೆ ಎಂಬ ಹಿನ್ನೆಲೆಯಲ್ಲಿ ಈ ನಡೆಯ ಹಿಂದಿನ ಜಾಣತನವನ್ನು ಮೌಂಟ್‌ಬ್ಯಾಟನ್ ಪ್ರಶ್ನಿಸಿದರು. ಆಗ ನೆಹರೂ ಈ ನಡೆಯನ್ನು ಸಮರ್ಥಿಸಿಕೊಂಡು, ಕಾಂಗ್ರೆಸ್ ಪ್ರತಿಭಟನೆ ವಿಚಾರದಲ್ಲಿ ಸಾಕಷ್ಟು ಅನುಭವ ಹೊಂದಿದೆ; ಆಡಳಿತದಲ್ಲಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.ಬಳಿಕ ಮೌಂಟ್‌ಬ್ಯಾಟನ್ ಅಧಿಕಾರ ಸ್ವೀಕರಿಸಿದರು. ತಕ್ಷಣ ಎಲ್ಲ ರೈಲ್ವೆ ಗಾರ್ಡ್‌ಗಳಿಗೆ ಶವಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಸೂಚಿಸಿದರು. ಜತೆಗೆ ತಡೆಯುವ ಹಾಗೂ ದಂಡಾನಾತ್ಮಕ ಕ್ರಮಗಳಿಗೆ ಆದೇಶ ನೀಡಿದರು. ತಕ್ಷಣ ಸುವ್ಯವಸ್ಥೆ ಮರುಕಳಿಸಿತು.
ಕಳೆದ 30 ವರ್ಷಗಳಲ್ಲಿ, ಕಿಡಿಗೇಡಿಗಳು ಹಾಗೂ ಅಪರಾಧಿಗಳು ಹಿಮಾಲಯನ್ ಅರಣ್ಯಕ್ಕೆ ಬೆಂಕಿ ಇಡುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಅವರ ಬೆಂಬಲಿಗರು ಕಾಳ್ಗಿಚ್ಚು ಸಾಮಾನ್ಯ; ಇದು ಪಶುಸಂಗೋಪನೆ ಪದ್ಧತಿಯ ಅಂಗ. ಇದರಿಂದಾಗಿ ಕಾಳ್ಗಿಚ್ಚು ತಡೆಯುವ ಹೊಸ ಸಾಧನಗಳು ಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.
ಕಳೆದ ಮೇ ತಿಂಗಳ ಮೊದಲಾರ್ಧದಲ್ಲಿ ಹಲವು ಕಾಳ್ಗಿಚ್ಚಿನ ಪ್ರಕರಣಗಳು ಸಂಭವಿಸಿದ ಬಳಿಕ, ಸರಕಾರ 200ಕ್ಕೂ ಹೆಚ್ಚು ಮಂದಿಯನ್ನು ಉತ್ತರಾಖಂಡದಲ್ಲೇ ಬಂಧಿಸಿತು. ಇದರ ಫಲಿತಾಂಶ ತಕ್ಷಣ ಕಂಡುಬಂತು. ಮೇ ಉತ್ತರಾರ್ಧ ಹಾಗೂ ಜೂನ್ ತಿಂಗಳಲ್ಲಿ, ಇಡೀ ಹಿಮಾಲಯನ್ ಅರಣ್ಯ ಪ್ರದೇಶ ಒಣಮರಗಳಿಂದ ಕೂಡಿದ್ದಾಗ ಯಾವ ಕಾಳ್ಗಿಚ್ಚು ಪ್ರಕರಣಗಳೂ ವರದಿಯಾಗಲಿಲ್ಲ.
ಅಂತೆಯೇ ಪ್ರವಾಸ ಸಮಸ್ಯೆಗೆ ಪರಿಹಾರ ಕೂಡಾ ಸಾಧ್ಯವಾಗು ವುದು, ನಾವು ಹಾನಿ ನಿಯಂತ್ರಣದ ಬದಲು ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕ್ರಮದ ಬಗ್ಗೆ ಯೋಚಿಸಿದಾಗ.








