ಯುವಕ ನಾಪತ್ತೆ
ಉಡುಪಿ, ಜು.21: ಕಾರ್ಕಳ ತಾಲೂಕು ಬೇಳಂಜೆ ಗ್ರಾಮ ಮಾಬ್ಳಿ ಮನೆಯ ಸುಮಾರು 26 ವರ್ಷ ಪ್ರಾಯದ ಮೋಹಿತ್ ಶೇಟ್ಟಿ ಎಂಬವರು ಜು.15 ರಂದು ಬೆಳಗ್ಗೆ ಮನೆಯಿಂದ ಹಾಲಾಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಸ್ ಬಾರದೆ ಕಾಣೆಯಾಗಿದ್ದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಕಾಣೆಯಾದ ಯುವಕನ ಎತ್ತರ 173 ಸೆ.ಮಿ., ಗುಂಗುರು-ಕಪ್ಪುಕೂದಲು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಿಳಿ-ಕಾಫಿ ಬಣ್ಣದ ಚೌಕುಳಿ ಇರುವ ತುಂಬು ತೋಳಿನ ಅಂಗಿ ಧರಿಸಿದ್ದಾರೆ. ಕನ್ನಡ, ಇಂಗ್ಲಿಷ್ ಹಿಂದಿ ಭಾಷೆ ಬಲ್ಲರು. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಪೊಲೀಸ್ ಠಾಣೆ ದೂ.ಸಂ: 08253-251116ನ್ನು ಅಥವಾ ಸರ್ಕಲ್ ಕಚೇರಿ ದೂ.ಸಂ: 08258-230213ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





