ಮಲೇಷ್ಯಾದಲ್ಲಿ ಕಬಾಲಿ ಚಿತ್ರದ ಟಿಕೆಟ್ ಸಿಗದಕ್ಕೆ ಅಭಿಮಾನಿಯೊಬ್ಬಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನ

ಹೊಸದಿಲ್ಲಿ, ಜು.22: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ "ಕಬಾಲಿ" ಚಿತ್ರದ ಟಿಕೆಟ್ ಸಿಗದಕ್ಕೆ ಮಲೇಷ್ಯಾದಲ್ಲಿ ಅಭಿಮಾನಿಯೊಬ್ಬರು ಹದಿನೈದು ಅಂತಸ್ತಿನ ಕಟ್ಟದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮಾಲೊಂದರಲ್ಲಿ ಚಿತ್ರದ ಟಿಕೆಟ್ ಖರೀದಿಗೆ ಹೋಗಿದ್ದ ರಜನಿ ಅಭಿಮಾನಿಗೆ ನಿರಾಸೆ ಉಂಟಾಗಿತ್ತು. ಇದರಿಂದ ನೊಂದುಕೊಂಡ ಆತ ಕಟ್ಟಡದಿಂದ ಕೆಳಕ್ಕೆ ಧುಮಿಕಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಪಂಚದ ನಾನಾ ದೇಶಗಳಲ್ಲಿ ಕಬಾಲಿ ಚಿತ್ರ ವೀಕ್ಷಿಸಲು ಚಿತ್ರ ಪ್ರಿಯರು ಚಿತ್ರ ಮಂದಿರಗಳಿಗೆ ಮುಗಿ ಬಿದ್ದಿದ್ದಾರೆ. ಕೆಲವು ಕಡೆಗಳಲ್ಲಿ ಟಿಕೆಟ್‌ಗಾಗಿ ನೂಕುನುಗ್ಗಲು ಉಂಟಾಗಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ವರದಿಯಾಗಿದೆ.
ಟಿಕೆಟ್ ಪಡೆಯಲು ಜನದಟ್ಟಣೆ ತೀವ್ರವಾಗಿ ನೂಕು ನುಗ್ಗಲು ಉಂಟಾದ ಕಾರಣ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಪೊಲೀಸರು ಲಾಠಿ ಜಾರ್ಜ್ ಮಾಡಿದರು.
Next Story





