ಮಾನಸಿಕ ದೌರ್ಬಲ್ಯವಿರುವ ವ್ಯಕ್ತಿಗೆ ಸಹಾಯ ಮಾಡುತ್ತಿದ್ದ ಕರಿಯನಿಗೆ ಗುಂಡಿಕ್ಕಿದ ಫ್ಲೋರಿಡಾ ಪೊಲೀಸ್
ವಿಡಿಯೋ ಬಹಿರಂಗ

ರಸ್ತೆಯ ಮೇಲೆ ಮಾನಸಿಕ ದೌರ್ಬಲ್ಯವಿರುವ ವ್ಯಕ್ತಿಗೆ ನೆರವಾಗುತ್ತಿದ್ದ ಶಸ್ತ್ರಗಳಿಲ್ಲದ ಕರಿಯ ಜನಾಂಗದ ಫ್ಲೋರಿಡಾದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಕೈ ಮೇಲೆತ್ತಿ ಕುಳಿತಿದ್ದರೂ ಪೊಲೀಸರು ಆತನಿಗೆ ಗುಂಡಿಕ್ಕಿರುವ ವಿಡಿಯೋ ಈಗ ಅಂತರ್ಜಾಲದಲ್ಲಿ ಬಹಿರಂಗವಾಗಿದೆ.
ನಡತೆ ಚಿಕಿತ್ಸಕ ಚಾರ್ಲ್ಸ್ ಕಿನ್ಸಿ ಈಗ ಗುಂಡು ತಗಲಿ ಆಸ್ಪತ್ರೆಯಲ್ಲಿದ್ದಾರೆ. ಉತ್ತರ ಮಿಯಾಮಿ ಪೊಲೀಸ್ ಅಧಿಕಾರಿ ಆತನ ಕಾಲಿಗೆ ಮೂರು ಬಾರಿ ಗುಂಡಿಕ್ಕಿದ್ದಾರೆ. ಅಮೆರಿಕದಲ್ಲಿ ಜನಾಂಗೀಯ ವೈರ ಮಿತಿ ಮೀರಿದ ಸಮಯದಲ್ಲಿಯೇ ಈ ಘಟನೆ ನಡೆದಿದೆ. ಕಳೆದ ಒಂದೂವರೆ ವರ್ಷದಿಂದ ಅಮೆರಿಕದ ಪ್ರಮುಖ ನಗರಗಳಲ್ಲಿ ಪ್ರತಿಭಟನೆಯಾಗುತ್ತಿದೆ. ಆದರೆ ಈಗ ಪೊಲೀಸರು ಕರಿಯ ವ್ಯಕ್ತಿಗೆ ಗುಂಡಿಕ್ಕಿದ ವಿಡಿಯೋ ಈ ವೈರಲ್ ನ್ನು ತೀವ್ರಗೊಳಿಸಲಿದೆ. ಈ ವಿಡಿಯೋ ಪೊಲೀಸರ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಪ್ರಾಂತದ ಮಾನಸಿಕ ಸಂತ್ರಸ್ತರ ಆಶ್ರಯತಾಣದಿಂದ ಓಡಿ ಹೋಗಿದ್ದ ಮಾನಸಿಕ ರೋಗಿಯನ್ನು ಸಮಾಧಾನಗೊಳಿಸಲು ಕಿನ್ಸಿ ಪ್ರಯತ್ನಿಸುತ್ತಿದ್ದ. ಆಟದ ವಾಹನದ ಜೊತೆಗೆ ವ್ಯಕ್ತಿ ರಸ್ತೆಯ ಮೇಲೆ ಕುಳಿತಿರುವುದನ್ನು ಕಿನ್ಸಿ ಕಂಡಿದ್ದರು. ವಿಡಿಯೋದಲ್ಲಿ ಸಂಪೂರ್ಣ ಪ್ರಕರಣದ ಚಿತ್ರಣವಿದೆ. ಕರಿಯ ವ್ಯಕ್ತಿಯೊಬ್ಬ ತನ್ನ ಕೈಮೇಲೆತ್ತಿ ವ್ಯಕ್ತಿಯೊಬ್ಬನ ಬಳಿ ಬೆನ್ನಿನ ಮೇಲೆ ಮಲಗಿದ್ದಾರೆ. ಬಳಿಯಲ್ಲಿದ್ದ ವ್ಯಕ್ತಿಯ ಕೈಯಲ್ಲಿ ಒಂದು ಸಾಧನ ಇತ್ತು. ಆತನ ಬಳಿ ಆಟಿಕೆ ಇತ್ತು. ನಾನು ಮಾನಸಿಕ ರೋಗಿಗಳ ಆಶ್ರಯ ತಾಣದ ಚಿಕಿತ್ಸಕ ಎಂದು ವ್ಯಕ್ತಿ ಪೊಲೀಸರಿಗೆ ಕೂಗಿ ಹೇಳುತ್ತಿದ್ದ. ಆದರೆ ಪೊಲೀಸರು ಶಸ್ತ್ರಗಳನ್ನು ಹೊರತೆಗೆದು ಗುಂಡಿಕ್ಕಿರುವುದು ವಿಡಿಯೋದಲ್ಲಿ ಕಂಡಿದೆ.
ಶಸ್ತ್ರ ಹಿಡಿದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದ್ದಾನೆ ಎಂದು ತಮಗೆ ಸುದ್ದಿ ಬಂದಿದ್ದಾಗಿ ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ ಧಾವಿಸಿದಾಗ ಪೊಲೀಸರು ಇಬ್ಬರನ್ನು ಕಂಡಿದ್ದರು. ಸ್ವಲ್ಪ ಹೊತ್ತಿನ ಸಂಭಾಷಣೆಯ ನಂತರ ಪೊಲೀಸರಲ್ಲಿ ಒಬ್ಬರು ಗುಂಡು ಹೊಡೆದಿದ್ದರು. ಗುಂಡು ಹೊಡೆದ ಸನ್ನಿವೇಶ ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಅಧಿಕಾರಿ ಏಕೆ ಗುಂಡು ಹೊಡೆದರೆಂದು ತಿಳಿದು ಬಂದಿಲ್ಲ. ಒಬ್ಬ ಅಧಿಕಾರಿಯನ್ನು ರಜಾದಲ್ಲಿ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ.







