ಆಪ್ ಸಂಸದ ಮಾನ್ ವಿರುದ್ಧ ಕ್ರಮ ಕೈಗೊಳ್ಳಲು ಸಂಸತ್‌ನಲ್ಲಿ ಸದಸ್ಯರ ಆಗ್ರಹ
ಸಂಸತ್ ಭವನದ ವಿಡಿಯೋ ಚಿತ್ರೀಕರಣ

ಹೊಸದಿಲ್ಲಿ, ಜು.22: ಸಂಸತ್ ಭವನದೊಳಗೆ ವಿಡಿಯೋ ಚಿತ್ರೀಕರಣ ನಡೆಸಿರುವ ಆಪ್ ಸಂಸದ ಭಗವಂತ್ ಮಾನ್ ವಿರುದ್ಧ ಉಭಯ ಸದನಗಳಲ್ಲೂ ಕಾಂಗ್ರೆಸ್-ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಕೈಗೊಳ್ಳುವಂತೆ ಆಗ್ರಹಿಸಿದರು.
ಸಂಸತ್ ಭವನದ ಒಳಗಿನ ಮತ್ತು ಹೊರಗಿನ ದೃಶ್ಯವನ್ನು ವಿಡಿಯೋ ಚಿತ್ರೀಕರಣ ನಡೆಸಿ ಫೇಸ್ ಬುಕ್‌ಗೆ ಅಪ್‌ಲೋಡ್ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್-ಬಿಜೆಪಿ ಸದಸ್ಯರು ಸ್ಪೀಕರ್ ನ್ನು ಆಗ್ರಹಿಸಿದರು. ಲೋಕಸಭೆಯಲ್ಲಿ ಕಾಂಗ್ರೆಸ್‌ನ ವಿಪಕ್ಷ ನಾಯಕರಾಗಿರುವ ಮಲ್ಲಿ ಕಾರ್ಜುನ ಖರ್ಗೆ ಅವರು ವಿಷಯ ಪ್ರಸ್ತಾಪಿಸಿ ಸಂಸದ ಮಾನ್ ಅವರ ವರ್ತನೆಯನ್ನು ಖಂಡಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಅವರ ಮಾತಿಗೆ ಧ್ವನಿಗೂಡಿಸಿದ ಸಂಸದರು ಪಕ್ಷಬೇಧ ಮರೆತು ಸೂಕ್ತ ಕ್ರಮಕ್ಕಾಗಿ ಸ್ವೀಕರ್ ಅವರನ್ನು ಒತ್ತಾಯಿಸಿದರು, ಲೋಕಸಭೆಯಲ್ಲಿ ಕೋಲಾಹಲ ಉಂಟಾಗಿ ಸ್ಪೀಕರ‍್ ಅವರು ಕಲಾಪವನ್ನು ಮುಂದೂಡಿದರು. ಆಪ್ ಸಂಸದ ಮಾನ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.
Next Story





