ಕಲಬುರಗಿ: ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ

ಕಲಬುರಗಿ, ಜು.22: ಕೆಎಸ್ಸಾರ್ಪಿ ಕಾನ್‌ಸ್ಟೇಬಲ್ ಒಬ್ಬರು ಪೊಲೀಸ್ ಕ್ವಾಟ್ರಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ತಾಜಸುಲ್ತಾನಪುರ ಎಂಬಲ್ಲಿ ಸಂಭವಿಸಿದೆ.
ಅಣ್ಣಾರಾವ್(46) ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ.
ಅಣ್ಣಾರಾವ್ ವಿಜಯಪುರದ ಐಆರ್ಬಿ ಬೆಟಾಲಿಯನ್ನಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಜಯಪುರದಿಂದ ಕಲಬುರಗಿಗೆ ವರ್ಗಾವಣೆ ನೀಡದೇ ಇದ್ದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





