ಜ್ಯೂಸ್ ಜೊತೆ ಮಾತ್ರೆ ತೆಗೆದುಕೊಳ್ಳಬೇಡಿ. ಏಕೆಂದರೆ?

ಜ್ಯೂಸ್ ಜೊತೆಗೆ ಮಾತ್ರೆ ನುಂಗುವುದು, ಮುಖ್ಯವಾಗಿ ಲಿಂಬೆ ರಸದ ಜೊತೆಗೆ ಸೇವಿಸುವುದರಿಂದ ಔಷಧಿಯ ಪರಿಣಾಮ ಕಡಿಮೆಯಾಗಿಬಿಡುತ್ತದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಎಚ್ಚರಿಸಿದೆ. ಇತ್ತೀಚೆಗೆ ವೈದ್ಯಕೀಯ ಸಂಸ್ಥೆ ಈ ನಿಟ್ಟಿನಲ್ಲಿ ಸಲಹೆ ನೀಡಿದ್ದು, ಜ್ಯೂಸಲ್ಲಿ ಔಷಧಿಗಳನ್ನು ಹೀರಿಕೊಳ್ಳುವ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಮುಖ್ಯವಾಗಿ ಮಾರಕ ವೈದ್ಯಕೀಯ ಸ್ಥಿತಿಗಳಾದ ರಕ್ತದೊತ್ತಡ ಅಥವಾ ಹೃದಯ ರೋಗಕ್ಕೆ ಔಷಧಿ ಸೇವಿಸುವಾಗ ಜ್ಯೂಸ್ ಜೊತೆ ಕುಡಿಯಬಾರದು. ಔಷಧಿಗಳನ್ನು ಕೇವಲ ನೀರಿನ ಜೊತೆ ಕುಡಿಯಬೇಕು.
"ಕಿತ್ತಳೆ ಮತ್ತು ಸೇಬಿನ ಜ್ಯೂಸ್‌ಗಳು ಕೆಲವು ಔಷಧಿಗಳನ್ನು ಕಡಿಮೆ ಹೀರಿಕೊಳ್ಳುತ್ತವೆ. ಹೀಗಾಗಿ ಔಷಧಿಯ ಪರಿಣಾಮ ಕಡಿಮೆಯಾಗುತ್ತದೆ. ಮತ್ತೊಂದೆಡೆ ದ್ರಾಕ್ಷಿ ರಸದ ಜೊತೆಗೆ ಸೇವಿಸಿದರೆ ಕೆಲವು ಔಷಧಿಗಳನ್ನು ಹೆಚ್ಚು ಹೀರಿಕೊಳ್ಳುತ್ತದೆ. ಇದು ಸಾಮಾನ್ಯ ಔಷಧಿಯ ಡೋಸ್‌ಗಳನ್ನು ವಿಷಕಾರಿಯಾಗಿಸಬಹುದು" ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕಾರ್ಯದರ್ಶಿ ಡಾ ಕೆಕೆ ಅಗರವಾಲ್ ಹೇಳಿದ್ದಾರೆ.
ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತವು ತನ್ನ ಗ್ರಾಹಕ ಆರೋಗ್ಯ ಮಾಹಿತಿಯಲ್ಲಿ ಹೇಳಿರುವಂತೆ ದ್ರಾಕ್ಷಿಯನ್ನು ಔಷಧಿಯ ಜತೆ ಸೇವಿಸಬಾರದು. ಅಲರ್ಜಿಗಳಿಗೆ ಬಳಸುವ ಔಷಧಿಗಳು ದೇಹದ ಕೋಶಗಳಿಗೆ ಟ್ರಾನ್ಸ್ಪೋರ್ಟರ್‌ಗಳೆನ್ನುವ ಪ್ರೊಟೀನ್ ಮೂಲಕ ಚಲಿಸುತ್ತವೆ. ದ್ರಾಕ್ಷಿ ಜ್ಯೂಸ್ ಈ ಟ್ರಾನ್ಸ್ಪೋರ್ಟರ್‌ಗಳನ್ನು ತಡೆಯುತ್ತದೆ. ಆ ಮೂಲಕ ಔಷಧಿಯ ಪರಿಣಾಮ ದೇಹದಲ್ಲಿ ಕಡಿಮೆಯಾಗುತ್ತದೆ. ಲಿವರ್ ಮತ್ತು ಬೈಲಿಯರಿ ಸೈನ್ಸ್ ನಿರ್ದೇಶಕ ಡಾ.ಎಸ್.ಕೆ. ಸರೀನ್ ಪ್ರಕಾರ ಹಣ್ಣಿನ ಜ್ಯೂಸ್‌ಗಳು ಎರಡು ರೀತಿಯಲ್ಲಿ ಹೀರುವಿಕೆ ಮೇಲೆ ಪರಿಣಾಮ ಬೀರುತ್ತದೆ. ರಕ್ತದ ಪಿಚ್ ಬದಲಿಸುವುದು ಮತ್ತು ಔಷಧಿಗಳ ಕೋಟಿಂಗ್ ಮುರಿಯುವುದು. ಭಾರತದಲ್ಲಿ ಜ್ಯೂಸ್ ಜೊತೆ ಔಷಧಿ ಸೇವಿಸುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಹೆಚ್ಚು ಅಧ್ಯಯನ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಔಷಧಿ ವಿತರಿಸುವವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಈ ಅಭ್ಯಾಸ ತಡೆಯುವುದು ಸಾಧ್ಯವಾಗಿಲ್ಲ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಔಷಧಿ ತಜ್ಞರು ರೋಗಿಗಳಿಗೆ ನೀರಿನ ಜೊತೆಯೇ ಔಷಧಿ ಸೇವನೆ ಬಗ್ಗೆ ಎಚ್ಚರಿಸುತ್ತಾರೆ.
ಭಾರತದಲ್ಲಿ ಶೇ. 20ರಿಂದ ಶೇ. 30ರಷ್ಟು ವೈದ್ಯರು ವಿವರವಾದ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ ಎನ್ನುವುದು ಫೋರ್ಟಿಸ್ ಸಿಡಾಕ್ ಅಧ್ಯಕ್ಷ ಅನೂಪ್ ಮಿಶ್ರಾ ಅಭಿಪ್ರಾಯ. "ಆಹಾರ ಸೇವನೆ ಅವಧಿ ಮತ್ತು ಔಷಧಿ ತೆಗೆದುಕೊಳ್ಳುವ ಅವಧಿ ಮುಖ್ಯವಾಗುತ್ತದೆ. ಇದರಲ್ಲಿ ತಪ್ಪಾದಾಗ ಅಡ್ಡಪರಿಣಾಮಗಳಾಗುತ್ತವೆ. ಆಸ್ಪಿರಿನ್ ಅನ್ನು ಊಟ ಮಾಡಿದ ತಕ್ಷಣ ಸೇವಿಸಿದರೆ ಅದರ ಅಡ್ಡಪರಿಣಾಮಗಳು ಕಡಿಮೆ. ಹಾಲು ಮತ್ತು ಕ್ಯಾಲ್ಸಿಯಂ ಅನ್ನು ಕಬ್ಬಿಣದ ಜೊತೆಗೆ ಕೊಡಬಾರದು. ಅದು ಕಡಿಮೆ ಹೀರಿಕೊಳ್ಳುತ್ತದೆ" ಎನ್ನುತ್ತಾರೆ.







