29 ಮಂದಿ ಪ್ರಯಾಣಿಕರಿದ್ದ ಭಾರತೀಯ ವಾಯುಪಡೆಯ ವಿಮಾನ ಬಂಗಾಳಕೊಲ್ಲಿಯಲ್ಲಿ ನಾಪತ್ತೆ

ಚೆನ್ನೈ, ಜು.22: ನಾಲ್ಕು ಮಂದಿ ಸಿಬ್ಬಂದಿ ಸೇರಿದಂತೆ ಸುಮಾರು 29 ಮಂದಿ ಪ್ರಯಾಣಿಕರಿದ್ದ ಭಾರತೀಯ ವಾಯುಪಡೆಯ ವಿಮಾನ (ಎಎನ್-32 )ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿದ್ದು, ಸಮುದ್ರದಲ್ಲಿ ಪತನಗೊಂಡಿರುವ ಸಾಧ್ಯತೆ ಕಂಡು ಬಂದಿದೆ.
ಬೆಳಗ್ಗೆ ಸುಮಾರು 7.30ರಲ್ಲಿ ಚೆನ್ನೈನ ತಾಂಬರಮ್ ಏರ್‌ಬೇಸ್‌ನಿಂದ 29 ಮಂದಿಯನ್ನು ಹೊತ್ತು ಅಂಡಮಾನ್ ನಿಕೋಬಾರ್‌ನ ಪೋರ್ಟ್ ಬ್ಲೇರ್‌ನತ್ತ ತೆರಳಿದ್ದ ವಿಮಾನ 8.12ರ ಹೊತ್ತಿಗೆ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ 7.30ಕ್ಕೆ ಟೇಕ್ ಆಫ್ ಆಗಿದ್ದ ವಿಮಾನ ಬಳಿಕ ಚೆನ್ನೈನಲ್ಲಿರುವ ನಿಯಂತ್ರಣ ಕೊಠಡಿಯನ್ನು 2 ಬಾರಿ ಸಂಪರ್ಕಿಸಿತ್ತು. ಬಳಿಕ ಸಂಪರ್ಕ ಕಡಿದು ಹೋಗಿದೆ. ಕಾಣೆಯಾದ ವಿಮಾನದ ಹುಡುಕಾಟ ಮುಂದುವರಿದಿದೆ.
Next Story