ಭಾರತ 512/6 : ವಿರಾಟ್ ಕೊಹ್ಲಿ ಚೊಚ್ಚಲ ದ್ವಿಶತಕ, ಅಶ್ವಿನ್ ಶತಕ

ಆ್ಯಂಟಿಗುವಾ, ಜು.22: ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಚೊಚ್ಚಲ ದ್ವಿಶತಕ ಮತುತಿ ಅಶ್ವಿನ್ ಶತಕದ ನೆರವಿನಲ್ಲಿ ಭಾರತ ತಂಡ ವೆಸ್ಟ್
ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಸುಭದ್ರ ಸ್ಥಿತಿಯಲ್ಲಿದೆ. ಎರಡನೆ ದಿನ ನಾಯಕ ವಿರಾಟ್ ಕೊಹ್ಲಿ 200 ರನ್(281ಎ, 24ಬೌ) ಗಳಿಸಿ ಔಟಾಗಿದ್ದಾರೆ. ಕೊಹ್ಲಿ ವಿದೇಶದಲ್ಲಿ ದ್ವಿಶತಕ ಸಿಡಿಸಿದ ಭಾರತದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಅಶ್ವಿನ್ 3ನೆ ಶತಕ ದಾಖಲಿಸಿದರು.
ಟೀ ವಿರಾಮದ ವೇಳೆಗೆ ಭಾರತ 154 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 512 ರನ್‌ಗಳಿಸಿದೆ. ರವಿಚಂದ್ರನ್ ಅಶ್ವಿನ್ 106 ರನ್ ಮತುತಿ ಅಮಿತ್ ಮಿಶ್ರಾ ಔಟಾಗದೆ 23ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ವೃದ್ಧಿಮಾನ್ ಸಹಾ 40ರನ್ ಗಳಿಸಿ ಔಟಾಗಿದ್ದಾರೆ. ಕೊಹ್ಲಿ ದ್ವಿಶತಕ ದಾಖಲಿಸಿದ ಭಾರತದ ಐದನೆ ನಾಯಕ ಎನಿಸಿಕೊಂಡಿದ್ದಾರೆ. ಮೊದಲ ದಿನ ವಿಂಡೀಸ್ ವಿರುದ್ಧ ಮೊದಲ ಹಾಗೂ 12ನೆ ಟೆಸ್ಟ್ ದಾಖಲಿಸಿದ್ದ ಕೊಹ್ಲಿ ಇಂದು ಆಟ ಮುಂದುವರಿಸಿ ದ್ವಿಶತಕದ ಸಾಧನೆ ಮಾಡಿದ್ದಾರೆ. ಭೋಜನ ವಿರಾಮದ ಮೊದಲು ಕೊಹ್ಲಿ ದ್ವಿಶತಕ ದಾಖಲಿಸಿದ್ದರು. ಬಳಿಕ ಆಟ ಆರಂಭಗೊಂಡು ಗ್ಯಾಬ್ರಿಯೆಲ್‌ರ 2ನೆ ಎಸೆತದಲ್ಲಿ ಬೌಲ್ಡಾದರು.
302/4: ಮೊದಲ ದಿನದಾಟದಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 302 ರನ್ ಗಳಿಸಿತುತಿ. ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತಿತಿರುವ ಟೆಸ್ಟ್‌ನಲ್ಲಿ ಮೊದಲ ದಿನದ ಆರಂಭದಲ್ಲಿ ಭಾರತ ಕೊಹ್ಲಿ ಬ್ಯಾಟಿಂಗ್‌ಗೆ ಆಗಮಿಸುವ ಮೊದಲು 74ರನ್‌ಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತುತಿ. ಭಾರತದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಕೊಹ್ಲಿ 197 ಎಸೆತಗಳಲ್ಲಿ 16 ಬೌಂಡರಿಗಳ ಸಹಾಯದಿಂದ 143 ರನ್ ಸೇರಿಸಿದರು.
ಕೊಹ್ಲಿ ಆರಂಭಿಕ ದಾಂಡಿಗ ಶಿಖರ್ ಧವನ್ ಜೊತೆ ಮೂರನೆ ವಿಕೆಟ್‌ಗೆ 105 ರನ್‌ಗಳ ಜೊತೆಯಾಟ ನೀಡಿದರು. ಧವನ್ ಶತಕದ ನಿರೀಕ್ಷೆಯಲ್ಲಿದ್ದರೂ ಅವರಿಗೆ ಲೆಗ್ ಸ್ಪಿನ್ನರ್ ದೇವೇಂದ್ರ ಬಿಶೂ ಅವಕಾಶ ನೀಡಲಿಲ್ಲ. 84 ರನ್ ಗಳಿಸಿದ್ದಾಗ ಅವರನ್ನು ಬಿಶೂ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಿಶೂ ಮೊದಲ ದಿನ 27 ಓವರ್‌ಗಳಲ್ಲಿ 108ಕ್ಕೆ 3 ವಿಕೆಟ್ ಪಡೆದು ಮಿಂಚಿದರು.
ಧವನ್ 241 ನಿಮಿಷಗಳ ಬ್ಯಾಟಿಂಗ್‌ನಲ್ಲಿ 147 ಎಸೆತಗಳನ್ನು ಎದುರಿಸಿದರು. 9 ಬೌಂಡರಿ ಮತುತಿ 1 ಸಿಕ್ಸರ್ ಸಹಾಯದಿಂದ 84 ರನ್ ಗಳಿಸಿ ನಿರ್ಗಮಿಸಿದರು. ಧವನ್ ನಿರ್ಗಮನದ ಬಳಿಕ ಕೊಹ್ಲಿಗೆ ಅಜಿಂಕ್ಯ ರಹಾನೆ ಸಾಥ್ ನೀಡಿದರು. ನಾಲ್ಕನೆ ವಿಕೆಟ್‌ಗೆ ಇವರ ಜೊತೆಯಾಟದಲ್ಲಿ 57 ರನ್ ಬಂತು. ರಹಾನೆ ಹೆಚ್ಚು ಹೊತುತಿ ಕ್ರೀಸ್‌ನಲ್ಲಿ ನಿಲ್ಲಲಿಲ್ಲ ಅವರು 22 ರನ್ ಗಳಿಸಿ ಬಿಶೂಗೆ ವಿಕೆಟ್ ಒಪ್ಪಿಸಿದರು. ಬಳಿಕ ಅಶ್ವಿನ್ ಜೊತೆಯಾದರು.
41ನೆ ಟೆಸ್ಟ್ ಆಡುತಿತಿರುವ ಕೊಹ್ಲಿ ಅವರು 134 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಲ್ಲಿ 12ನೇ ಶತಕ ಪೂರ್ಣಗೊಳಿಸಿದರು. ವಿಂಡೀಸ್‌ನಲ್ಲಿ ಇದು ಅವರ ಮೊದಲ ಶತಕವಾಗಿತುತಿ. ಕೊಹ್ಲಿ ಮತುತಿ ಅಶ್ವಿನ್ ಮುರಿಯದ ಜೊತೆಯಾಟದಲ್ಲಿ 66 ರನ್ ಸೇರಿಸಿ ಎರಡನೆ ದಿನಕ್ಕೆ ಆಟ ಕಾಯ್ದಿರಿಸಿದ್ದರು.





