ಸ್ನಾತಕೋತ್ತರ ಕೋರ್ಸ್: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಮಂಗಳೂರು, ಜು. 22: 2016-17ನೆ ಸಾಲಿನ ಎಲ್ಲಾ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 23ರಿಂದ ಜುಲೈ 26ರವರೆಗೆ ವಿಸ್ತರಿಸಲಾಗಿದೆ.
ಜುಲೈ 25ರಂದು ನಡೆಯಲಿರುವ ಎಂ.ಪಿ.ಎಡ್. ಕೋರ್ಸ್‌ನ ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 1, ಮತ್ತು ಜುಲೈ 26, 27ರಂದು ನಡೆಯುವ ಬಿಪಿಎಡ್ ಕೋರ್ಸ್‌ನ ಪ್ರವೇಶ ಪರೀಕ್ಷೆಯನ್ನು ಆಗಸ್ಟ್1 ಮತ್ತು 2ರಂದು ನಿಗದಿಪಡಿಸಲಾಗಿದೆ.
ಇತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಈ ಹಿಂದೆ ನಿಗದಿಪಡಿಸಿದಂತೆ ನಡೆಯಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





