Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಟರ್ಕಿಯಲ್ಲಿ ತುರ್ತು ಸ್ಥಿತಿ: ಬಯಲಾದ...

ಟರ್ಕಿಯಲ್ಲಿ ತುರ್ತು ಸ್ಥಿತಿ: ಬಯಲಾದ ಸರ್ವಾಧಿಕಾರಿಯ ಸರಣಿ ನಾಟಕ

ವಾರ್ತಾಭಾರತಿವಾರ್ತಾಭಾರತಿ22 July 2016 10:52 PM IST
share
ಟರ್ಕಿಯಲ್ಲಿ ತುರ್ತು ಸ್ಥಿತಿ: ಬಯಲಾದ ಸರ್ವಾಧಿಕಾರಿಯ ಸರಣಿ ನಾಟಕ

ಒಂದು ಕಡೆ ಯುದ್ಧಗ್ರಸ್ತ ಸಿರಿಯಾ ಮತ್ತು ಇರಾಕ್ ದೇಶಗಳ ನೆರೆಯಲ್ಲಿರುವ ಮತ್ತು ಇನ್ನೊಂದು ಕಡೆ ಯುರೋಪಿನ ಅಂಗಳದಲ್ಲಿರುವ ಮಾತ್ರವಲ್ಲ, ಏಶ್ಯಾ ಹಾಗೂ ಯುರೋಪ್ ಖಂಡಗಳ ನಡುವಣ ಸೇತುವೆಯಂತಿರುವ ಟರ್ಕಿ ದೇಶಕ್ಕೆ ಜಾಗತಿಕ ರಾಜಕೀಯದಲ್ಲಿ ಮಹತ್ವದ ಸ್ಥಾನವಿದೆ. ಆಯಕಟ್ಟಿನ ಸ್ಥಾನ, ಆರ್ಥಿಕ ಬಲ ಹಾಗೂ ಸೈನಿಕ ಶಕ್ತಿಯ ಆಧಾರದಲ್ಲಿ ಅದನ್ನು ಜಗತ್ತಿನ ರಾಷ್ಟ್ರಗಳ ಸಾಲಿನಲ್ಲಿ ಪರಿಗಣಿಸಲಾಗುತ್ತದೆ. ಕಳೆದ ಶುಕ್ರವಾರ ಅಲ್ಲಿ ಭಾರೀ ಪ್ರಮಾಣದ ಒಂದು ರಕ್ತಸಿಕ್ತ ನಾಟಕ ನಡೆಯಿತು. ದೂರದಿಂದ ನೋಡುತ್ತಿದ್ದ ಜಾಗತಿಕ ವೀಕ್ಷಕರ ದೃಷ್ಟಿಯಲ್ಲಿ ಅದೊಂದು ವಿಫಲ ಸೈನಿಕ ದಂಗೆಯಾಗಿತ್ತು. ಸೇನೆಯ ಒಂದು ಸಣ್ಣ ವಿಭಾಗವು ದಂಗೆಯೆದ್ದು ಅಧಿಕಾರಸ್ಥ ಸರಕಾರವನ್ನು ಬುಡಮೇಲು ಮಾಡಲು ಯತ್ನಿಸಿತ್ತು ಮತ್ತು ಅಧ್ಯಕ್ಷ ರಿಸೆಪ್(ರಜಬ್)ತಯ್ಯಿಬ್ ಎರ್ದೊಗಾನ್ ನೇತೃತ್ವದ ಸರಕಾರಿ ಪಡೆಗಳು ಹಾಗೂ ಸಾರ್ವಜನಿಕರು ಸೇರಿ ಬಹಳ ದಕ್ಷತೆಯಿಂದ ಈ ಸಂಚನ್ನು ವಿಫಲಗೊಳಿಸಿದರು. ಹಾಗೆಂದು ಹಲವು ವೀಕ್ಷಕರು ಮುಗ್ಧವಾಗಿ ನಂಬಿಬಿಟ್ಟಿದ್ದರು. ಆದರೆ ಎರ್ದೊಗಾನ್‌ರ ಅಧಿಕಾರದ ಚಪಲ ಮತ್ತು ಸರ್ವಾಧಿಕಾರದ ಕಡೆಗಿನ ಅವರ ನಡಿಗೆಯನ್ನು ಬಲ್ಲವರು ಯಾರೂ ಈ ನಾಟಕ ನೋಡಿ ಮರುಳಾಗಿರಲಿಲ್ಲ. ನಡೆದಿದ್ದೆಲ್ಲವೂ ಸಂಪೂರ್ಣ ಸೂತ್ರಿತ ಘಟನೆಗಳ ಸರಮಾಲೆಯಾಗಿತ್ತು ಎಂಬುದು ಆ ಹಂತದಲ್ಲೇ ಹಲವರಿಗೆ ಮನವರಿಕೆಯಾಗಿಬಿಟ್ಟಿತ್ತು. ದಂಗೆಯ ಬಳಿಕ ಕೆಲವೇ ದಿನಗಳಲ್ಲಿ ನಡೆದ ಬೆಳವಣಿಗೆಗಳು ಸಂಶಯಗಳನ್ನು ಬಲಪಡಿಸಿದ್ದವು. ಇದೀಗ ಎರ್ದೊಗಾನ್ ಟರ್ಕಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಜನತೆಯ ಮೂಲಭೂತ ಮಾನವೀಯ ಹಾಗೂ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಮೂಲಕ ಎಲ್ಲವನ್ನೂ ಸ್ಪಷ್ಟಪಡಿಸಿಬಿಟ್ಟಂತಾಗಿದೆ. ಮೊನ್ನೆಯ ದಂಗೆಯ ನಾಟಕವು ಎರ್ದೊಗಾನ್ ಎಂಬ ಅಧಿಕಾರದಾಹಿಯನ್ನು ಟರ್ಕಿಯ ನಿರಂಕುಶ ಅಧಿಪತಿಯಾಗಿಸುವ ಸಂಚಿನ ಭಾಗವಾಗಿತ್ತು ಎನ್ನುವುದು ಬಹಿರಂಗವಾಗಿದೆ. ದಂಗೆಯಲ್ಲಿ ಸುಮಾರು 265 ಜೀವಗಳು ಹರಣವಾದ ಬಗ್ಗೆ ರೋದಿಸುತ್ತಿದ್ದವರು ಇದೀಗ ಈ ದಂಗೆಯನ್ನೇ ನೆಪವಾಗಿಸಿಕೊಂಡು ಎರ್ದೊಗಾನ್ ಮತ್ತವರ ತಂಡವು ಬಲಿ ತೆಗೆದುಕೊಳ್ಳುತ್ತಿರುವ ನಾಗರಿಕ ಹಕ್ಕುಗಳು, ಜನಸಾಮಾನ್ಯರ ಅಧಿಕಾರಗಳು ಮತ್ತು ಸ್ವಾತಂತ್ರ್ಯದ ಬಗ್ಗೆ ಕಣ್ಣೀರಿಡುತ್ತಿದ್ದಾರೆ. ಎರ್ದೊಗಾನ್ ಸರ್ವಾಧಿಕಾರಿಯಾಗಲು ತೀರ್ಮಾನಿಸಿದ್ದು ಕಳೆದ ವಾರದ ದಂಗೆಯ ಬಳಿಕವೇನಲ್ಲ. 2003ರಲ್ಲಿ ಅವರು ಪ್ರಥಮ ಬಾರಿಗೆ ಟರ್ಕಿಯ ಪ್ರಧಾನ ಮಂತ್ರಿಯಾದಾಗಿನಿಂದಲೇ ಸರ್ವಾಧಿಕಾರದೆಡೆಗಿನ ತನ್ನ ಜೈತ್ರಯಾತ್ರೆಯನ್ನು ಆರಂಭಿಸಿದ್ದರು. ಕಳೆದ 13 ವರ್ಷಗಳುದ್ದಕ್ಕೂ ಟರ್ಕಿಯ ಅಧಿಕಾರದ ಪರಮೋಚ್ಚ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಎರ್ದೊಗಾನ್ ಈ ಅವಧಿಯಲ್ಲಿ ಆರ್ಥಿಕ ಹಾಗೂ ಸೈನಿಕ ರಂಗದಲ್ಲಿ ದೇಶವನ್ನು ಸಾಕಷ್ಟು ಬಲಪಡಿಸಿದ್ದಾರೆ. ಆದರೆ ಅದೇ ವೇಳೆ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಸಂಸ್ಥೆಗಳನ್ನು ಬಹುತೇಕ ಸರ್ವನಾಶ ಮಾಡಿದ್ದಾರೆ. ಮೊದಲು ಅವರು ಪ್ರಜಾಸತ್ತೆಯನ್ನು ಬಲಪಡಿಸುವ ಹೆಸರಿನಲ್ಲಿ, ಸೈನ್ಯದ ಹಿರಿಯ ಅಧಿಕಾರಿಗಳ ಪೈಕಿ ತನಗೆ ನಿಷ್ಠರಾಗಿರುವವರಿಗೆ ಭಡ್ತಿ ನೀಡಿ ಅವರನ್ನು ಆಯಕಟ್ಟಿನ ಸ್ಥಾನಗಳಿಗೆ ನಿಯೋಜಿಸುವ ಮತ್ತು ಶಂಕಿತ ನಿಷ್ಠೆಯ ಅಧಿಕಾರಿಗಳನ್ನು ವಿವಿಧ ನೆಪಗಳನ್ನೊಡ್ಡಿ ಪದಚ್ಯುತಗೊಳಿಸುವ ಅಥವಾ ಹಗರಣಗಳಲ್ಲಿ ಸಿಲುಕಿಸಿ ಬಂಧಿಸುವ ವ್ಯಾಪಕ ಕಾರ್ಯಾಚರಣೆ ಆರಂಭಿಸಿದರು. ಈ ಹಿಂದೆ ಅಲ್ಲಿಯ ಸೇನೆಯು ಹಲವು ಬಾರಿ ಜನರ ಮೇಲೆ ತನ್ನ ಸರ್ವಾಧಿಕಾರವನ್ನು ಹೇರಿದ ಕರಾಳ ದಾಖಲೆ ಇರುವುದರಿಂದ ಮತ್ತು ಚುನಾಯಿತ ಪ್ರಜಾಸತ್ತಾತ್ಮಕ ಸರಕಾರಗಳ ಪಾಲಿಗೆ ಸೇನೆಯು ಸದಾ ಒಂದು ಸವಾಲಾಗಿದ್ದ ಹಿನ್ನೆಲೆಯಲ್ಲಿ, ಸೇನೆಯನ್ನು ಶುಚೀಕರಿಸುವ ಹೆಸರಿನಲ್ಲಿ ಎರ್ದೊಗಾನ್ ನಡೆಸಿದ ಕಾರ್ಯಾಚರಣೆಗಳು ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು. ಆದರೆ ಎರ್ದೊಗಾನ್‌ರ ಉದ್ದೇಶ ಪ್ರಜಾಸತ್ತೆಯನ್ನು ಬಲ ಪಡಿಸುವುದಾಗಿರಲಿಲ್ಲ. ಅವರು ಆಧುನಿಕ ಟರ್ಕಿಯ ಸ್ಥಾಪಕ ಮುಸ್ತಫಾ ಕಮಾಲ್ ಪಾಶಾರಂತೆ ಪ್ರಶ್ನಾತೀತ ನಿರಂಕುಶ ಪ್ರಭುತ್ವ ಬಯಸಿದ್ದರು. ಆದ್ದರಿಂದಲೇ ಅವರು ಸೇನೆಯ ಶುಚೀಕರಣಕ್ಕಷ್ಟೇ ತೃಪ್ತರಾಗದೆ, ಪ್ರಜಾಸತ್ತೆಯ ಆಧಾರಸ್ಥಂಭಗಳಾದ ಮತ್ತು ತನ್ನ ಪ್ರಭುತ್ವಕ್ಕೆ ಸವಾಲೊಡ್ಡಲು ಆರಂಭಿಸಿದ್ದ ನ್ಯಾಯಾಂಗ ಹಾಗೂ ಮಾಧ್ಯಮಗಳನ್ನು ಶುಚೀಕರಿಸಲು ಹೊರಟರು. ತನ್ನ ಈ ಅಕ್ರಮವನ್ನು ಸಮರ್ಥಿಸಿಕೊಳ್ಳಲು ಅವರು ಫತೆಉಲ್ಲ ಗುಲೇನ್ ನೇತೃತ್ವದ ಹಿಝ್ಮೆತ್ ಸಂಘಟನೆಯನ್ನು ಬಲಿ ಪಶುವಾಗಿಸಿದರು. ಆ ಸಂಘಟನೆಗೆ ನಿಷ್ಠರಾಗಿರುವವರು ಮಾಧ್ಯಮ ಹಾಗೂ ನ್ಯಾಯಾಂಗಗಳೊಳಗೆ ನುಸುಳಿಕೊಂಡು ತನ್ನ ಚುನಾಯಿತ ಸರಕಾರವನ್ನು ಅಭದ್ರಗೊಳಿಸುತ್ತಿದ್ದಾರೆ ಎಂಬುದು ಈ ವಿಷಯದಲ್ಲಿ ಎರ್ದೊಗಾನ್ ಜನರ ಮುಂದಿಟ್ಟ ನೆಪವಾಗಿತ್ತು. ನಿಜವಾಗಿ ಎರ್ದೊಗಾನ್ ಸ್ವಾರ್ಥಪ್ರೇರಿತರಾಗಿ ಪದೇಪದೇ ನಡೆಸಿದ ಸಾಂವಿಧಾನಿಕ ತಿದ್ದುಪಡಿಗಳು, ಆ ಮೂಲಕ ಅವರು ಪಡೆದುಕೊಂಡ ವಿಶೇಷಾಧಿಕಾರಗಳು ಹಾಗೂ ಅವರು ಮತ್ತವರ ಕುಟುಂಬ ಹಾಗೂ ಆಪ್ತವಲಯದ ವ್ಯಾಪಕ ಭ್ರಷ್ಟಾಚಾರ, ಅತಿಕ್ರಮಣ, ದುಬಾರಿ ಜೀವನ ವಿಧಾನ, ಸ್ವಜನ ಪಕ್ಷಪಾತ ಇತ್ಯಾದಿಗಳನ್ನು ಬಯಲುಗೊಳಿಸುತ್ತಿರುವುದು ಮಾಧ್ಯಮಗಳ ಅಪರಾಧವಾಗಿತ್ತು. ಹಾಗೆಯೇ ಇಂತಹ ಹಗರಣಗಳು ತಮ್ಮ ಮೇಜಿಗೆ ಬಂದಾಗ ಕಾನೂನು ಹಾಗೂ ನ್ಯಾಯವನ್ನು ಎತ್ತಿ ಹಿಡಿದಿದ್ದು ನ್ಯಾಯಾಂಗ ಮತ್ತು ನ್ಯಾಯಾಧೀಶರ ಅಪರಾಧವಾಗಿತ್ತು. ಎರ್ದೊಗಾನ್ ತನಗಾಗಿ ಕಟ್ಟಿಸಿಕೊಳ್ಳುತ್ತಿರುವ ‘ವೈಟ್ ಪ್ಯಾಲೇಸ್’ ಎಂಬ ಸುಮಾರು 4500 ಕೋಟಿ ರೂಪಾಯಿ ವೆಚ್ಚದ, 32 ಲಕ್ಷ ಚದರ ಅಡಿ ವಿಸ್ತೀರ್ಣದ ಐಷಾರಾಮಿ ಅಧ್ಯಕ್ಷೀಯ ಅರಮನೆಗೆ ಕಿರಿಕಿರಿ ಉಂಟು ಮಾಡಿದ್ದು ಕೂಡಾ ನ್ಯಾಯಾಂಗ ಮತ್ತು ಮಾಧ್ಯಮದವರು. ಮಾಧ್ಯಮದವರಂತೂ ಇವರ ಪತ್ನಿ ವಾರಕ್ಕೊಮ್ಮೆ ಯುರೋಪಿಗೆ ಹೋಗಿ ನಡೆಸುತ್ತಿರುವ ಲಕ್ಷಾಂತರ ಮಿಲಿಯನ್ ಪೌಂಡುಗಳ ಶಾಪಿಂಗ್ ಸಮೇತ ಇವರ ಆಪ್ತವಲಯದ ಹಲವು ಒಳಗುಟ್ಟುಗಳ ಕುರಿತು ವಿವರವಾಗಿ ಚರ್ಚಿಸುವ ಮೂಲಕ ಇವರಿಗೆ ಆಗಾಗ ಸಾಕಷ್ಟು ಮುಜುಗರ ಉಂಟುಮಾಡಿದ್ದವು. ಈ ರೀತಿ ತನ್ನೆಲ್ಲಾ ಮಹತ್ವಾಕಾಂಕ್ಷೆಗಳಿಗೆ ಅಡ್ಡಗಾಲಿಕ್ಕುವವರಿಗೆ ಪಾಠ ಕಲಿಸುವುದು ಮತ್ತು ಮುಂದೆಂದೂ ಯಾರೂ ಆ ರೀತಿ ತನ್ನನ್ನು ಪ್ರಶ್ನಿಸುವ ಧೈರ್ಯ ತೋರದಂತೆ ನೋಡಿಕೊಳ್ಳುವುದು ಎರ್ದೊಗಾನ್ ಅವರ ಅಗತ್ಯವಾಗಿತ್ತು.

  
  ಕಳೆದ ವಾರದ ದಂಗೆಯ ಬಳಿಕ ನಡೆದಿರುವ ಘಟನಾವಳಿಗಳನ್ನು ನೋಡಿದರೆ ಎಲ್ಲವೂ ಒಂದು ನಿರ್ದಿಷ್ಟ ಯೋಜನೆಗನುಸಾರವಾರವೇ ನಡೆದಿದ್ದು, ಯಾವುದೂ ಆಕಸ್ಮಿಕ ಅಲ್ಲ ಎನ್ನುವುದನ್ನು ಈಗ ಖಚಿತವಾಗಿ ಬಿಟ್ಟಿದೆ. ಪ್ರಸ್ತುತ ದಂಗೆಗೆ ಬಹಳ ಮುನ್ನವೇ ಎರ್ದೊಗನ್ ಸರಕಾರವು ಟರ್ಕಿಯ ಹಲವು ಸೇನಾ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಪತ್ರಕರ್ತರನ್ನು ಬಂಧಿಸಿ ಕಿರುಕುಳ ನೀಡಿತ್ತು, ಹಲವು ಪತ್ರಿಕಾ ಕಚೇರಿಗಳನ್ನು ಮುಚ್ಚುವ ಸಾಹಸ ಮಾಡಿತ್ತು. ದಂಗೆ ವಿಫಲವಾದ ಕೆಲವೇ ಗಂಟೆಗಳ ಒಳಗೆ ಎರ್ದೊಗಾನ್ ಸರಕಾರದ ಪಡೆಗಳು ಸುಮಾರು ನಾಲ್ಕು ಸಾವಿರ ಸೈನಿಕ ಅಧಿಕಾರಿಗಳು, 2800ದಷ್ಟು ನ್ಯಾಯಾಧೀಶರನ್ನು ಹಾಗೂ ನೂರಾರು ಪತ್ರಕರ್ತರನ್ನು ಬಂಧಿಸಿ ಜೈಲಿಗಟ್ಟಿದ ದೃಶ್ಯವು ದಂಗೆಯ ಸಮೇತ ಎಲ್ಲವೂ ಪೂರ್ವಯೋಜಿತವಾಗಿತ್ತು ಎಂಬುದಕ್ಕೆ ಅತ್ಯಂತ ಪ್ರಬಲ ಪುರಾವೆಯಾಗಿತ್ತು. ಎರ್ದೊಗಾನ್ ಜನಸಾಮಾನ್ಯರನ್ನು ಮರುಳುಗೊಳಿಸುವ ಕಲೆಯಲ್ಲಿ ನಿಷ್ಣಾತರು. ಯಾವಾಗಲಾದರೂ ಯುವಕರ ಜೊತೆ ಫುಟ್ಬಾಲ್ ಆಡುವುದು, ವಿಶೇಷ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಜೊತೆ ಸೈಕ್ಲಿಂಗ್ ನಡೆಸುವುದು, ಟರ್ಕಿಯ ಭವ್ಯ ಇತಿಹಾಸ, ಉಜ್ವಲ ಭವಿಷ್ಯ ಇತ್ಯಾದಿಗಳ ಕುರಿತು ಭಾಷಣ ಬಿಗಿಯುವುದು ಇವೇ ಮುಂತಾದ ವಿಧಾನಗಳ ಮೂಲಕ ಅವರು ಟರ್ಕಿಯ ಜನಸಾಮಾನ್ಯರ ಮಧ್ಯೆ ಧಾರಾಳ ಜನಪ್ರಿಯತೆ ಪಡೆದರು. ಹಾಗೆಯೇ ಬರ್ಮಾದ ದಮನಿತ ಮುಸ್ಲಿಮ್ ನಿರಾಶ್ರಿತರ ಬಗ್ಗೆ ಸಂತಾಪ ಪ್ರಕಟಿಸುವುದು, ಇಸ್ರೇಲ್ ಸರಕಾರದ ವಿರುದ್ಧ ಆವೇಶಭರಿತ ಭಾಷಣಗಳನ್ನು ಮಾಡುವುದು, ಸಿರಿಯಾದ ಯುದ್ಧಸಂತ್ರಸ್ತರ ಕುರಿತು ಕಣ್ಣೀರು ಸುರಿಸುವುದು, ಪಶ್ಚಿಮದ ದೇಶಗಳ ಸಂಚುಗಳ ಕುರಿತು ಚರ್ಚಿಸುವುದು ಇತ್ಯಾದಿ ಸರ್ಕಸ್‌ಗಳ ಮೂಲಕ ದೇಶದ ಧಾರ್ಮಿಕ ಹಾಗೂ ಸಂಪ್ರದಾಯವಾದಿ ವಲಯಗಳನ್ನು ಅವರು ಮಂತ್ರಮುಗ್ಧಗೊಳಿಸಿಬಿಟ್ಟರು. ಜನಸಾಮಾನ್ಯರು ತತ್ವಸಿದ್ಧ್ದಾಂತಗಳ ಬಗ್ಗೆ ಹೆಚ್ಚೇನೂ ಚಿಂತಿಸುವುದಿಲ್ಲ, ಆದ್ದರಿಂದ ಅವರನ್ನು ಭಾವನಾತ್ಮಕವಾಗಿ ನಿಭಾಯಿಸಿದರೆ ಸಾಕು ಎಂದು ಬಲವಾಗಿ ನಂಬಿರುವ ಎರ್ದೊಗಾನ್ ತನ್ನ ತಂತ್ರದಲ್ಲಿ ಸಾಕಷ್ಟು ಯಶಸ್ಸನ್ನೂ ಗಳಿಸಿದ್ದಾರೆ. ಇವರು ಹರಿಯಬಿಟ್ಟ ಸುಳ್ಳುಗಳನ್ನು ತರ್ಕಿಯ ಹೆಚ್ಚಿನ ಜನಸಾಮಾನ್ಯರು ನಂಬುತ್ತಾ ಬಂದಿದ್ದಾರೆ. ಆದರೆ ಈ ನಂಬಿಕೆ ಇದೀಗ ಅವರಿಗೆ ತೀರಾ ದುಬಾರಿಯಾಗಿ ಪರಿಣಮಿಸುತ್ತಿದೆ. ಸೇನೆಯೊಳಗಿನ ಒಂದು ಅವಿಧೇಯ ವಿಭಾಗ, ನ್ಯಾಯಾಂಗ, ಮಾಧ್ಯಮಗಳು ಮತ್ತು ಹಿಝ್ಮೆತ್ ಸಂಘಟನೆಯಿಂದಾಗಿ ದೇಶದ ಭದ್ರತೆಗೆ ಅಪಾಯವಿದೆ ಎಂದು ಅವರನ್ನು ನಂಬಿಸಿದ್ದ ಎರ್ದೊಗಾನ್ ಬಳಗವು ಇದೀಗ ಒಂದೊಂದಾಗಿ ಅವರ ಎಲ್ಲ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ಕಿತ್ತು ಕೊಳ್ಳುತ್ತಿದೆ. ನಿನ್ನೆ ಅಧಿಕೃತವಾಗಿ ತುರ್ತುಸ್ಥಿತಿ ಘೋಷಿಸುವ ಮೂಲಕ ಟರ್ಕಿ ದೇಶವನ್ನು ಗುಲಾಮಗಿರಿಗೆ ತಳ್ಳಿ ಎರ್ದೊಗಾನ್‌ರನ್ನು ಸಂಪೂರ್ಣ ಸರ್ವಾಧಿಕಾರಿಯಾಗಿಸುವ ಪ್ರಕ್ರಿಯೆಯು ಅಧಿಕೃತವಾಗಿ ಪೂರ್ಣಗೊಂಡಂತಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X