ಚೀನಾದಿಂದ ಕಲಿಯಬೇಕಾಗಿದೆ
ಮಾನ್ಯರೆ,
ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಗೆ ಹಕ್ಕಿಲ್ಲ ಎನ್ನುವ ಫಿಲಿಪ್ಪೀನ್ಸ್ ವಾದಕ್ಕೆ ಅಮೆರಿಕವು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಚೀನಾದ ನಾಗರಿಕರು ಅಮೆರಿಕ ಮೂಲದ ಆ್ಯಪಲ್ ಫೋನ್ ಹಾಗೂ ಕೆಎಫ್‌ಸಿಯ ಪರ ಆಕ್ರೋಶ ವ್ಯಕ್ತಪಡಿಸಿ ಸಂಬಂಧಿತ ಹಲವಾರು ಮಳಿಗೆಗಳನ್ನು, ಉತ್ಪನ್ನಗಳನ್ನು ನಾಶಪಡಿಸಿದ್ದಾರೆ.
ಆದರೆ ಚೀನಾದ ಉಪಟಳ ಭಾರತಕ್ಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾವೇನಾದರೂ ಇಂತಹ ನಿರ್ಧಾರ ಕೈಗೊಂಡಿದ್ದೇವೆಯೇ?
ಈಗ ಭಾರತದಲ್ಲಿ ಚಲಾವಣೆಯಾಗುವ ಪ್ರತಿಯೊಂದು ವಸ್ತುವೂ ಚೀನಾ ನಿರ್ಮಿತವಾದದ್ದು. ಚೀನಾ ಉತ್ಪನ್ನದಿಂದಾಗಿ ಭಾರತೀಯ ಗ್ರಾಮೀಣ ಕಲೆಗಳು ಶಿಥಿಲದ ಅಂಚಿನಲ್ಲಿವೆ. ಆದರೂ ನಾವು ಈ ಬಗ್ಗೆ ಯೋಚಿಸುತ್ತೇವೆಯೇ?
Next Story





