ದ.ಕ. ಜಿಪಂ ಸ್ಥಾಯಿ ಸಮಿತಿಗಳಿಗೆ ಆಯ್ಕೆ
ಮಂಗಳೂರು,ಜು.22: ದ.ಕ ಜಿಪಂನ ಐದು ಸ್ಥಾಯಿ ಸಮಿತಿಗಳಿಗೆ ಈ ಕೆಳಗಿನಂತೆ ಅಧ್ಯಕ್ಷರು ಮತ್ತು ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಜಿ.ಪಂ. ಸಿಇಒ ಪ್ರಕಟನೆ ತಿಳಿಸಿದೆ.
ಸಾಮಾನ್ಯ ಸ್ಥಾಯಿ ಸಮಿತಿ:
ಅಧ್ಯಕ್ಷರು-ಕಸ್ತೂರಿ ಪಂಜ ಜಿಪಂ ಉಪಾಧ್ಯಕ್ಷರು, ಸದಸ್ಯರು-ಮಮತಾ ಡಿ.ಎಸ್. ಗಟ್ಟಿ, ಪಿ. ಧರಣೇಂದ್ರ, ಜನಾರ್ದನ ಗೌಡ, ಪ್ರಮೀಳಾ ಜನಾದರ್ನ್, ಮಮತಾ ಎಂ. ಶೆಟ್ಟಿ, ಎಸ್.ಎನ್.ಮನ್ಮಥ.
ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ: ಅಧ್ಯಕ್ಷರು-ಮೀನಾಕ್ಷಿ ಶಾಂತಿಗೋಡು, ಜಿಪಂ ಅಧ್ಯಕ್ಷರು, ಸದಸ್ಯರು- ವಿನೋದ್ ಕುಮಾರ್ ಬೊಳ್ಳೂರು, ಕೆ.ಕೊರಗಪ್ಪ ನಾಯ್ಕ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ನಮಿತಾ, ಜಯಶ್ರೀ ಕೊಡಂದೂರು, ಎಂ. ತುಂಗಪ್ಪಬಂಗೇರ.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಅಧ್ಯಕ್ಷರು-ಆಶಾ ತಿಮ್ಮಪ್ಪ, ಸದಸ್ಯರು-ಸೀಮಾ ಮೆಲ್ವಿನ್ ಡಿಸೋಜ, ಸುಚರಿತ ಶೆಟ್ಟಿ, ಶೇಖರ ಕುಕ್ಕೇಡಿ, ವಸಂತಿ, ಸುಜಾತಾ ಕೆ.ಪಿ., ಪುಷ್ಪಾವತಿ ಬಾಳಿಲ.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಅಧ್ಯಕ್ಷರು-ಶಾಹುಲ್ ಹಮೀದ್ ಕೆ.ಕೆ., ಸದಸ್ಯರು- ಅನಿತಾ ಹೇಮನಾಥ ಶೆಟ್ಟಿ, ಕಮಲಾಕ್ಷಿ ಕೆ.ಪೂಜಾರಿ, ಮಂಜುಳಾ ಮಾಧವ ಮಾವೆ, ಯು.ಪಿ. ಇಬ್ರಾಹೀಂ, ಧನಲಕ್ಷ್ಮೀ, ಹರೀಶ್ ಕಂಜಿಪಿಲಿ.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ: ಅಧ್ಯಕ್ಷರು- ಸರ್ವೋತ್ತಮ ಗೌಡ ಕೆ., ಸದಸ್ಯರು-ಪಿ.ಪಿ ವರ್ಗೀಸ್ ಕಡಬ, ಬಿ.ಪದ್ಮಶೇಖರ ಜೈನ್, ಶಯನಾ ಜಯಾನಂದ, ಸೌಮ್ಯಲತಾ, ರಶೀದಾ ಬಾನು, ಕೆ.ರವೀಂದ್ರ ಕಂಬಳಿ.







