ಮದುವೆಯ ಭರವಸೆ ನೀಡಿ ವಂಚನೆ: ಆರೋಪಿ ಸೆರೆ
ಕಾಸರಗೋಡು, ಜು.22: ಮದುವೆಯ ಭರವಸೆ ನೀಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬನನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆಲಂಪಾಡಿ ಎರ್ಮಾಳಂ ವಳಿಯಮೂಲೆಯ ಅಬ್ದುಲ್ ಆಸಿಫ್ (28) ಎಂದು ಗುರುತಿಸಲಾಗಿದೆ.
ಕಾಸರಗೋಡಿನ ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದ ಚೆಂಗಳ ಪರಿಸರದ ಯುವತಿಗೆ ಮದುವೆಯ ಆಮಿಷವೊಡ್ಡಿ ದೈಹಿಕ ಸಂಪರ್ಕ ಬೆಳೆಸಿದ್ದು, ಗರ್ಭಿಣಿಯಾದ ಬಳಿಕ ವಿವಾಹವಾಗಲು ನಿರಾಕರಿಸಿದ್ದನು. ಮಂಗಳೂರು ಹಾಗೂ ಇತರ ಸ್ಥಳಗಳಿಗೆ ಕೊಂಡೊಯ್ದು ಕಿರುಕುಳ ನೀಡಿರುವುದಾಗಿ ಯುವತಿ ವಿದ್ಯಾನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಆರೋಪಿಯನ್ನು ಬಂಧಿಸಲಾಗಿದೆ.
Next Story





