ಶಿಕ್ಷಕಿಯ ಸರ ಅಪಹರಣ
ಉಡುಪಿ, ಜು.22: ಹುಡೀಮಬೈಲು ಜುಮಾದಿ ಕಟ್ಟೆ ಕ್ರಾಸ್ ಬಳಿ ಜು.21ರಂದು ವೇಳೆ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಯೊಬ್ಬರ ಕುತ್ತಿಗೆಯಲ್ಲಿದ ಸರವನ್ನು ಅಪರಿಚಿತರಿಬ್ಬರು ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ದೊಡ್ಡಣ್ಣಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ಹುಡೀಮಬೈಲುವಿನ ಲೀನಾ ಡಯಾಸ್(58) ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಲೀನಾ ಡಯಾಸ್‌ರ ಕುತ್ತಿಗೆಗೆ ಕೈಹಾಕಿ 60 ಗ್ರಾಂ ತೂಕದ 90 ಸಾವಿರ ರೂ. ವೌಲ್ಯದ ಬಂಗಾರದ ಕರಿಮಣಿ ಸರವನ್ನು ಎಳೆದು ಪರಾರಿಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





