ರಿಯೋ ಗೇಮ್ಸ್‌ಗೆ ಉತ್ತಮ ಪ್ರದರ್ಶನ: ಸಾನಿಯಾ
ಹೈದರಾಬಾದ್, ಜು.22: ‘‘ಮುಂಬರುವ ಒಲಿಂಪಿಕ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಉತ್ಸುಕನಾಗಿರುವೆ. ಇತರ ಅಥ್ಲೀಟ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ’’ ಎಂದು ಟೆನಿಸ್ ತಾರೆ ಸಾನಿಯಾ ಮಿರ್ಝಾ ಹೇಳಿದ್ದಾರೆ.
‘‘ನಾನು ನಾಳೆ ಕೆನಡಾಕ್ಕೆ ತೆರಳುವೆ. ಅಲ್ಲಿಂದ ಸೀದಾ ರಿಯೋ ಒಲಿಂಪಿಕ್ಸ್‌ಗೆ ತೆರಳುವೆ. ಈ ಬಾರಿ ಭಾರತದ ಪರ ಅತ್ಯಂತ ಹೆಚ್ಚು ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆ. ನಾವು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ’’ಎಂದು ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾನಿಯಾ ಸುದ್ದಿಗಾರರಿಗೆ ತಿಳಿಸಿದರು.
ಸಾನಿಯಾ ರಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಾರ್ಥನಾ ಥಾಂಬ್ರೆ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣರ ಜೊತೆಗೂಡಿ ಸ್ಪರ್ಧಿಸಲಿದ್ದಾರೆ.
Next Story





