ಪ್ರೊ ಕಬಡ್ಡಿ ಲೀಗ್: ಜೈಪುರ, ಬಂಗಾಲಕ್ಕೆ ಜಯ
ಜೈಪುರ, ಜು.22: ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಬಂಗಾಲ ವಾರಿಯರ್ಸ್ ತಂಡಗಳು ಜಯಭೇರಿ ಬಾರಿಸಿವೆ.
46ನೆ ಪಂದ್ಯದಲ್ಲಿ ಜೈಪುರ ತಂಡ ಪಾಟ್ನಾ ಪೈರಟ್ಸ್ ತಂಡವನ್ನು 29-22 ಅಂಕಗಳ ಅಂತರದಿಂದ ಸೋಲಿಸಿತು. 13ನೆ ಪಂದ್ಯದಲ್ಲಿ 8ನೆ ಗೆಲುವು ಸಾಧಿಸಿರುವ ಜೈಪುರ ತಂಡ ಒಟ್ಟು 47 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
47ನೆ ಪಂದ್ಯದಲ್ಲಿ ಬಂಗಾಲ ತಂಡ ಯೂ ಮುಂಬಾ ತಂಡವನ್ನು 31-27 ಅಂಕಗಳ ಅಂತರದಿಂದ ಸೋಲಿಸಿತು. 13ನೆ ಪಂದ್ಯವನ್ನು ಆಡಿದ್ದ ಬಂಗಾಳ 3ನೆ ಗೆಲುವು ಸಾಧಿಸಿತು. 8 ಪಂದ್ಯಗಳಲ್ಲಿ ಸೋತಿದ್ದ ಬಂಗಾಲಕ್ಕೆ ಈ ಗೆಲುವು ಹೊಸ ಚೈತನ್ಯ ನೀಡಿತು.
Next Story





